ಮೈಸೂರು: ದಟ್ಟಗಳ್ಳಿಯ ಲಿಂಗಾಂಬುಧಿ ಕೆರೆ ರಾಜಕಾಲುವೆಗೆ ಒಳಚರಂಡಿ ನೀರು ಸೇರುತ್ತಿದ್ದ ಸ್ಥಳಕ್ಕೆ ಬುಧವಾರ ಬೆಳಿಗ್ಗೆ ಭೇಟಿ ನೀಡಿದ ಶಾಸಕ ಜಿ.ಟಿ.ದೇವೇಗೌಡ, ದುರಸ್ತಿ ಕಾಮಗಾರಿ ವೆಚ್ಚದ ಅಂದಾಜು ಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿದರು.

‘ಮರಣಶಯ್ಯೆಯತ್ತ ಲಿಂಗಾಂಬುಧಿ’ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಅರಣ್ಯ ಇಲಾಖೆ ಮತ್ತು ಪಾಲಿಕೆ ಅಧಿಕಾರಿಗಳೊಂದಿಗೆ ಆಗಮಿಸಿದ ಅವರು, ಒಡೆದಿರುವ ಒಳಚರಂಡಿ ಪೈಪ್ ದುರಸ್ತಿಗೊಳಿಸಿ, ಪ್ಲಾಸ್ಟಿಕ್ ತ್ಯಾಜ್ಯ ಕೆರೆ ಸೇರದಂತೆ ಜಾಲರಿ ಅಳವಡಿಕೆಗೆ ಸೂಚಿಸಿದರು.

ಮೂಗು ಮುಚ್ಚಿಕೊಂಡರು: ದಟ್ಟಗಳ್ಳಿ, ಕನಕದಾಸ ನಗರ ಬಡಾವಣೆಗಳ ಒಳಚರಂಡಿ ನೀರು ರಾಜಕಾಲುವೆಯಲ್ಲಿ ನಿಂತಿದ್ದರಿಂದ ಬರುತ್ತಿದ್ದ ದುರ್ವಾಸನೆಗೆ ಶಾಸಕರು ಮೂಗು ಮುಚ್ಚಿಕೊಂಡರು. ನಿಂತಿದ್ದ ಪ್ಲಾಸ್ಟಿಕ್ ಬಾಟಲಿಗಳ ರಾಶಿ ನೋಡಿ ‘ಏನ್ರೀ ಇದೆಲ್ಲ. ಇಲ್ಲೇ ಎರಡು ಶಾಲೆಗಳು ಇವೆಯಲ್ಲ. ಮಕ್ಕಳ ಸ್ಥಿತಿ ಏನಾಗಬೇಕು. ನಿವಾಸಿಗಳು ಈ ದುರ್ವಾಸನೆ ಸಹಿಸಬೇಕೆ’ ಎಂದರು.

‘ರಾಜಕಾಲುವೆಯಲ್ಲಿ ಮಳೆನೀರು ಮಾತ್ರವೇ ಹರಿಯಬೇಕು. ಕೂಡಲೇ ಕ್ರಿಯಾ ಯೋಜನೆ ತಯಾರಿಸಿ ಕೊಡಿ, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಶಾಶ್ವತ ಪರಿಹಾರ ಕಲ್ಪಿಸುವೆ’ ಎಂದರು.

ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ‘ಕೆರೆಗೆ ಚರಂಡಿ ನೀರು ಸೇರದಂತೆ ಮಾಡಲು ಎಲ್ಲೆಲ್ಲಿ ಹೊಸದಾಗಿ ಪೈಪ್ಲೇನ್, ರಿಟೈನಿಂಗ್ ವಾಲ್ ಹಾಕಬೇಕೆಂಬ ಮಾಹಿತಿ ಪಡೆದು ತುರ್ತು ಕ್ರಮವಹಿಸಲಾಗುವುದು’ ಎಂದರು.

ದೂರು: ‘ಕೆರೆಗೆ ಪಕ್ಕದಲ್ಲಿರುವ ಪಾಲಿಕೆಯ ಉದ್ಯಾನವನ್ನು ಖಾಸಗಿ ಶಾಲೆಯವರು ಆಟದ ಮೈದಾನ, ಪಾರ್ಕಿಂಗ್ಗೆ ಬಳಕೆ ಮಾಡುತ್ತಿದ್ದಾರೆ’ ನಿವಾಸಿಗಳು ದೂರಿದರು. ತೆರವಿಗೆ ಕ್ರಮಗೊಳ್ಳುವುದಾಗಿ ಆಯುಕ್ತರು ಪ್ರತಿಕ್ರಿಯಿಸಿದರು.

ಅರಣ್ಯ ಇಲಾಖೆಯ ಎಸಿಎಫ್ ರವೀಂದ್ರ, ಸೂಪರಿಂಟೆಂಡೆಂಟ್ ಎಂಜಿನಿಯರ್ ಮಂಜುನಾಥ್, ವಲಯ ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇ ಆಸೀಫ್ ಇಕ್ಬಾಳ್ ಖಲೀಲ್, ಪಾಲಿಕೆ ಒಳಚರಂಡಿ ವಿಭಾಗದ ಎಇ ಶಿಲ್ಪಾ, ಎಇಇ ಧನುಷ್, ಎಇಇ ಶ್ರೀನಿವಾಸ್, ಅಶ್ವಿನ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.