ಮೈಸೂರು: ‘ಆಹಾರ ತಂತ್ರಜ್ಞಾನಗಳು ರೈತರಿಗೆ ಅನುಕೂಲ ಕಲ್ಪಿಸುವಂತಿರಲಿ’ ಎಂದು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು ಆಶಿಸಿದರು.

ಇಲ್ಲಿನ ಸಿಎಸ್ಐಆರ್–ಸಿಎಫ್ಟಿಆರ್ಐನಲ್ಲಿ ಶನಿವಾರ ನಡೆದ ‘2023–25ನೇ ಸಾಲಿನ ಬ್ಯಾಚ್ನ ಎಂ.ಎಸ್ಸಿ. ಫುಡ್ ಟೆಕ್ನಾಲಜಿ ಕೋರ್ಸ್ ಪೂರ್ಣಗೊಳಿಸಿದವರ ಪದವಿ ಪ್ರದಾನ ಸಮಾರಂಭ’ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

‘ಪರಿಸರ ಸ್ನೇಹಿ ಆಹಾರ ಉದ್ಯಮದ ಅಭಿವೃದ್ಧಿಯ ಮೂಲಕ ಉತ್ತಮ ಸಮಾಜ ನಿರ್ಮಾಣದ ಅಗತ್ಯವಿದೆ. ಸುರಕ್ಷಿತ ಹಾಗೂ ಪೌಷ್ಟಿಕ ಆಹಾರವನ್ನು ಒದಗಿಸುವ ಜೊತೆಗೆ ಆಹಾರ ತಂತ್ರಜ್ಞಾನದ ಪ್ರಗತಿಯಿಂದ ಕೃಷಿಕರೂ ಲಾಭ ಮಾಡಿಕೊಳ್ಳುವಂತೆ ಇರಬೇಕು’ ಎಂದರು.

‘ಮೈಸೂರಿನ ಪ್ರಮುಖ ಸಂಸ್ಥೆಗಳು, ಎಂಎಸ್ಎಂಇಗಳು ಹಾಗೂ ಆಹಾರ ನವೋದ್ಯಮಗಳಿಗೆ ಉತ್ತೇಜನ ನೀಡಲು ಇನ್ಕ್ಯುಬೇಷನ್ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಬೇಕು’ ಎಂದು ಹೇಳಿದರು.

ನಿಧಿ ಸ್ಥಾಪನೆ...

ಸಂಸ್ಥೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಫೆಲೋಶಿಪ್ಗಾಗಿ ನಿಧಿ ಸ್ಥಾಪಿಸುವುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಿಎಸ್ಐಆರ್–ಸಿಎಫ್ಟಿಆರ್ಐ ನಿರ್ದೇಶಕ ಗಿರಿಧರ್ ಪರ್ವತಂ ಮಾತನಾಡಿ, ‘ಆಹಾರ ಸಂಸ್ಕರಣಾ ಕ್ಷೇತ್ರವು ಈಗ ಮಹತ್ವದ ಹಂತದಲ್ಲಿದೆ. ಕಡಿಮೆ ವೆಚ್ಚ, ಸುರಕ್ಷತೆ ಮತ್ತು ಸೌಲಭ್ಯಗಳ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳುವ ಜೊತೆಗೆ ಆರೋಗ್ಯ ಮತ್ತು ಪರಿಸರ ಸಂಬಂಧಿತ ಸವಾಲುಗಳೂ ಹೆಚ್ಚುತ್ತಿವೆ’ ಎಂದರು.

‘ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳ (ಯುಪಿಎಫ್ಎಸ್) ಏರಿಕೆ, ಸಸ್ಯ ಆಧಾರಿತ ಸಂಸ್ಕರಣೆಯಲ್ಲಿ ಆಹಾರ ವ್ಯರ್ಥ ಆಗುತ್ತಿರುವುದು, ಹೆಚ್ಚಿನ ಇಂಧನ ಬಳಕೆ ಮತ್ತು ಪ್ಯಾಕೇಜಿಂಗ್ ತ್ಯಾಜ್ಯ ಪ್ರಮುಖ ಸವಾಲುಗಳಾಗಿವೆ’ ಎಂದು ಹೇಳಿದರು.

‘ಕೃತಕ ಬುದ್ಧಿಮತ್ತೆ (ಎಐ), ಸ್ಮಾರ್ಟ್ ಕೋಲ್ಡ್ ಚೇನ್ಗಳು ಮತ್ತು ಅಪ್ಸೈಕ್ಲಿಂಗ್ ತಂತ್ರಜ್ಞಾನಗಳು ಕ್ಷೇತ್ರವನ್ನು ರೂಪಾಂತರಗೊಳಿಸುತ್ತಿವೆ. ಶಾಶ್ವತ, ತಂತ್ರಜ್ಞಾನ ಮತ್ತು ವಲಯ ಆಧಾರಿತ ಆಹಾರ ಸಂಸ್ಕರಣಾ ವ್ಯವಸ್ಥೆಯ ಅಗತ್ಯವಿದೆ’ ಎಂದರು.

32 ವಿದ್ಯಾರ್ಥಿಗಳ ಆಯ್ಕೆ...

‘ಸಂಸ್ಥೆಯು ನಡೆಸುವ ಎಂ.ಎಸ್ಸಿ. ಫುಡ್ ಟೆಕ್ನಾಲಜಿ ಕೋರ್ಸ್ಗೆ 60 ವರ್ಷಗಳಿಗಿಂತ ಹೆಚ್ಚು ಇತಿಹಾಸವಿದೆ. ದೇಶವ್ಯಾಪಿ ಪ್ರವೇಶ ಪರೀಕ್ಷೆಯ ಮೂಲಕ 32 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕೋರ್ಸ್ ಮುಗಿಸಿದವರಿಗೆ ಶೇ 100ರಷ್ಟು ಉದ್ಯೋಗ ಅವಕಾಶವಿದೆ. 3ನೇ ಸೆಮಿಸ್ಟರ್ನಲ್ಲೇ ಶೇ 80ರಷ್ಟು ಮಂದಿ ಪ್ರಮುಖ ಆಹಾರ ಕಂಪನಿಗಳಲ್ಲಿ ಉದ್ಯೋಗ ಪಡೆಯುತ್ತಾರೆ. ಹಳೆಯ ವಿದ್ಯಾರ್ಥಿಗಳು ವಿಶ್ವದಾದ್ಯಂತ ಪ್ರಮುಖ ಹುದ್ದೆಗಳಲ್ಲಿದ್ದು, ಆಹಾರ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

29 ವಿದ್ಯಾರ್ಥಿಗಳಿಗೆ ಅಕಾಡೆಮಿ ಆಫ್ ಸೈಂಟಿಫಿಕ್ ಅಂಡ್ ಇನ್ನೊವೇಟಿವ್ ರಿಸರ್ಚ್ ವತಿಯಿಂದ ಎಂ.ಎಸ್ಸಿ. ಫುಡ್ ಟೆಕ್ನಾಲಜಿ ಪದವಿ ಪ್ರದಾನ ಮಾಡಲಾಯಿತು. ಎಚ್.ಎಸ್. ಪೂರ್ಣಿಮಾ (ಪ್ರಥಮ) ಪವಿತ್ರಾ (ದ್ವಿತೀಯ) ಹಾಗೂ ಶುಭ್ರಾ (ತೃತೀಯ) ರ್ಯಾಂಕ್ ಪಡೆದರು.

ಎಚ್ಅರ್ಡಿ ಮುಖ್ಯಸ್ಥೆ ರೇವತಿ ಬಾಸ್ಕರನ್ ಸ್ವಾಗತಿಸಿದರು. ಪ್ರವೀಣಾ ಬಿ. ಪರಿಚಯಿಸಿದರು. ಬೆಟ್ಟದಯ್ಯ ಬಿ.ಕೆ. ವಂದಿಸಿದರು. ಸಿಂಧು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.