ಬೆಟ್ಟದಪುರ:(ಮೈಸೂರು ಜಿಲ್ಲೆ): ‘ಕಳೆದ ನಾಲ್ಕೂವರೆ ವರ್ಷದಿಂದ ತಾಲ್ಲೂಕಿನ ಕಡೆಗೆ ತಲೆ ಹಾಕದ ಮಾಜಿ ಶಾಸಕರು ಈಗ ರಾತ್ರಿ ಸಮಯದಲ್ಲಿ ನಮ್ಮ ಕಾರ್ಯಕರ್ತರ ಮನೆ ಮನೆಗೆ ಹೋಗಿ ಹಣ ಹಂಚಲು ಮುಂದಾಗಿದ್ದಾರೆ’ ಎಂದು ಶಾಸಕ ಕೆ.ಮಹದೇವ್ ಆರೋಪಿಸಿದರು.
ಸಮೀಪದ ಭುವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಣಸೂರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
‘ನಿಷ್ಠಾವಂತ ಕಾರ್ಯಕರ್ತರು ಆಸೆ ಆಮಿಷಕ್ಕೆ ಬಲಿಯಾಗುತ್ತಿಲ್ಲ. ಹೀಗಾಗಿ, ನಮ್ಮ ಮೇಲೆ ಅಪಪ್ರಚಾರ ಮಾಡಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.
ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ, ‘ವಿರೋಧಿಗಳ ಅಪ ಪ್ರಚಾರಕ್ಕೆ ಕಿವಿಗೊಡದೆ, ಮಹದೇವ್ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದೆ ಇಟ್ಟು ಮತ ಪಡೆಯಬೇಕು’ ಎಂದು ಸಲಹೆ ನೀಡಿದರು.
ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ ಮಾತನಾಡಿ, ‘ಮಹದೇವ್ ಅವರು ₹1 ಸಾವಿರ ಕೋಟಿ ಅನುದಾನ ತಂದು ತಾಲ್ಲೂಕನ್ನು ಅಭಿವೃದ್ಧಿ ಪಡಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮತ್ತೊಂದು ಅವಕಾಶ ನೀಡಬೇಕು’ ಎಂದು ಹೇಳಿದರು.
ಭುವನಹಳ್ಳಿ ಟೋಲ್ ಗೇಟ್‌ನಿಂದ, ಬೆಕ್ಕರೆ, ಕೊಣಸೂರು ಮಾರ್ಗವಾಗಿ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು.
ನೂರಾರು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆ ಗೊಂಡರು.
ಮುಖಂಡರಾದ, ಶಿವಪ್ಪ, ರಘು ನಾಥ್, ವಿದ್ಯಾಶಂಕರ್, ಬಿ.ವಿ.ಗಿರೀಶ್, ಗಗನ್, ರವಿ, ಐಲಾಪುರ ರಾಮು, ಮೋಹನ್, ರಘುನಾಥ್, ಕರಡಿಪುರ ಕುಮಾರ್, ಮಮತಾ, ದೀಪು ಗಿರೀಶ್, ಶ್ರೀನಿವಾಸ್, ದೇವರಾಜು, ಮೈಲಾರಪ್ಪ, ಕುಮಾರ್, ಈಚೂರು ಶ್ರೀನಿವಾಸ್, ರಮೇಶ್, ಗಣೇಶ್, ಶಿವಕುಮಾರಸ್ವಾಮಿ, ಮಹೇಶ್, ನಾಗೇಂದ್ರ, ಕಾಂತರಾಜು, ಹೊನ್ನೇಗೌಡ, ಜಯಣ್ಣ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.