ಮೈಸೂರು: ‘ನಮ್ಮೊಂದಿಗೆ ನಾವು ಸ್ಪರ್ಧಿಸಿದಾಗ ಶ್ರದ್ಧೆ ಬೆಳೆಯುತ್ತದೆ’ ಎಂದು ವಾಗ್ಮಿ ಎಂ.ಕೃಷ್ಣೇಗೌಡ ಹೇಳಿದರು.

ಇಲ್ಲಿನ ಜಯಲಕ್ಷ್ಮೀಪುರಂನ ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ಮಹಮ್ 2ಕೆ26’ ರಾಜ್ಯ ಮಟ್ಟದ ಅಂತರ ಕಾಲೇಜು ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಆಲೋಚನೆಗೆ ತಕ್ಕಂತೆ ಬದುಕು ರೂಪಿಸಿಕೊಳ್ಳಬೇಕೇ ಹೊರತು, ಬದುಕಿಗೆ ತಕ್ಕಂತೆ ಆಲೋಚನೆ ಬದಲಿಸಬಾರದು’ ಎಂದು ಸಲಹೆ ನೀಡಿದರು.

‘ಇತರರೊಂದಿಗೆ ಸ್ಪರ್ಧಿಸಿದರೆ ವಿಕೃತಿ ಬೆಳೆಯಬಹುದು. ಇತರರನ್ನು ಮೀರಿಸುವ ಬದಲು ನಮ್ಮ ಮಿತಿಗಳನ್ನು ಮೀರಿ ಬೆಳೆಯಬೇಕು. ಇತರರನ್ನು ಮೀರಿಸುವ ಹಟ ಕ್ರೌರ್ಯಕ್ಕೆ ದಾರಿ ಮಾಡಿಕೊಡುತ್ತದೆ’ ಎಂದು ಎಚ್ಚರಿಸಿದರು.

ಅಮೃತ ವಿಶ್ವವಿದ್ಯಾಪೀಠ ತಂಡದವರು ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಮೈಕಾಸ್ ಕಾಲೇಜು ರನ್ನರ್ಅಪ್ ಪ್ರಶಸ್ತಿ ಪಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಟಿ. ವಿಜಯಲಕ್ಷ್ಮಿ ಮುರಳೀಧರ್, ಪ್ರಾಂಶುಪಾಲರಾದ ಬಿ.ಆರ್. ಜಯಕುಮಾರಿ, ಸಿಇಒ ಎಸ್.ಆರ್. ರಮೇಶ್, ‘ಮಹಮ್’ ಸಂಚಾಲಕಿ ಪುಷ್ಪಾರಾಣಿ, ಪಿ.ಜಿ., ವಿದ್ಯಾರ್ಥಿ ಸಂಚಾಲಕರಾದ ನಿಹಾರಿಕ ಹೆಗಡೆ, ಸುಮಂತ್ ಎಸ್. ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಆರ್. ತಿಮ್ಮೇಗೌಡ ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಗೀತಾ ಡಿ., ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುನೀಲ್ ಎನ್. ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.