ಜಯಪುರ: ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹೋಬಳಿಯ ಅರಸಿನಕೆರೆ ಗ್ರಾಮದಲ್ಲಿ ಮಂಗಳವಾರ ಸೂರ್ಯೋದಯಕ್ಕೂ ಮುನ್ನ ಕೊಂಡೊತ್ಸವ ನಡೆಯಿತು.

ಮಹದೇಶ್ವರ ಸ್ವಾಮಿ, ವೀರಭದ್ರೇಶ್ವರ ಸ್ವಾಮಿ, ಬಸವೇಶ್ವರ ಸ್ವಾಮಿ ಬೀರುಗಳನ್ನು ಹೊತ್ತ ಅರ್ಚಕರು ಕೊಂಡವನ್ನು ಹಾಯ್ದರು.

ಸೋಮವಾರ ಬೆಳಿಗ್ಗೆ ಗ್ರಾಮದಲ್ಲಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಗ್ರಾಮದ ಹೊರಹೊಲಯದಲ್ಲಿರುವ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಭಕ್ತರು ಹೊತ್ತು ತಂದರು. ದಾರಿಯುದ್ದಕ್ಕೂ ಭಕ್ತರು ಚೆಂಡು ಹೂವನ್ನು ಹಾಸಿ ಸಾವಿರಾರು ಸಂಖ್ಯೆ ಈಡುಗಾಯಿಗಳನ್ನು ಒಡೆದು ಭಕ್ತಿಭಾವ ಮೆರೆದರು.

ಸೋಮವಾರ ರಾತ್ರಿ ಹಾಲರವಿ ಉತ್ಸವ ನಡೆಯಿತು. ಮದ್ದು ಗುಂಡುಗಳನ್ನು ಸಿಡಿಸಲಾಯಿತು. ಹಾಲರವಿ ಉತ್ಸವ ದೇವಾಲಯ ಆವರಣಕ್ಕೆ ತಲುಪಿದ ಬಳಿಕ, ಕೊಂಡೊತ್ಸವಕ್ಕೆ ಕರ್ಪೂರದಿಂದ ಕೊಂಡವನ್ನು ಹಚ್ಚಲಾಯಿತು.

ಮಂಗಳವಾರ ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಕೊಂಡೋತ್ಸವ ನಡೆದು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಕೊಂಡೋತ್ಸವಕ್ಕೆ ಭಕ್ತರು ದವಸ ಧಾನ್ಯಗಳನ್ನು ಸಮರ್ಪಿಸಿ ಪೂಜೆ ಸಲ್ಲಿಸಿದರು. ಮಹಾಮಂಗಳಾರತಿ ಬಳಿಕ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಭಕ್ತರಿಗೆ ಮಹಾಪ್ರಸಾದ ವಿನಿಯೋಗ ಮಾಡಲಾಯಿತು.

ಬಳಿಕ ಹುಲಿವಾಹನ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಮಂಗಳವಾದ್ಯ ಸದ್ದಿಗೆ ವೀರಗಾಸೆ ನೃತ್ಯ ನಡೆಯಿತು. ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿದವು. ತಮಟೆ ಸದ್ದಿಗೆ ಯುವಕರು ನಂದಿಧ್ವಜದ ಕಂಬ ಹೊತ್ತು ಕುಣಿದು ಕುಪ್ಪಳಿಸಿದರು. ಭಕ್ತರು ಮೆರವಣಿಗೆಯುದ್ದಕ್ಕೂ ‘ಉಘೇ ಮಾದಪ್ಪ, ಉಘೇ ಮಾದಪ್ಪ’ ಎಂದು ಜಯಘೋಷ ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.