ಮೈಸೂರು: ‘ರಾಜ್ಯ ಸರ್ಕಾರವು 2017-18ನೇ ಸಾಲಿನಲ್ಲಿ ತಿ.ನರಸೀಪುರ ಹಾಗೂ ಇನ್ನಿತರ ಸ್ಥಳಗಳಿಗೆ ಮಂಜೂರಾಗಿದ್ದ ಪಾಲಿಟೆಕ್ನಿಕ್ ಕಾಲೇಜುಗಳನ್ನು ಅನಗತ್ಯ ಕಾರಣ ಹೇಳಿ ಸ್ಥಳಾಂತರ ಮಾಡಿರುವುದು ಸರಿಯಲ್ಲ’ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

‘ಗ್ರಾಮೀಣ ಬಡ ಮಕ್ಕಳಿಗೆ ವೃತ್ತಿ ಶಿಕ್ಷಣವು ಒಂದು ಮಟ್ಟಿನ ಔದ್ಯೋಗಿಕ ಅವಕಾಶವನ್ನು ಸೃಷ್ಟಿಸಿಕೊಡುತ್ತದೆ. ಈ ಸಂಗತಿಯು ಬಹಳಷ್ಟು ಮಹತ್ವವಾಗಿದ್ದರೂ ಸರ್ಕಾರ ಇದನ್ನು ಕಡೆಗಣಿಸಿದೆ. ಸ್ಥಳಾಂತರದ ಬದಲಿಗೆ ಪಾಲಿಟೆಕ್ನಿಕ್ ಕಾಲೇಜುಗಳ ಅಗತ್ಯ ಇರುವ ಸ್ಥಳಗಳಿಗೆ ಹೊಸದಾಗಿ ಕಲ್ಪಿಸುವುದು ಸೂಕ್ತವಾಗುತ್ತದೆ. ಸರ್ಕಾರ ಆ ಕ್ರಮ ಕೈಗೊಳ್ಳಲಿ’ ಎಂದಿದ್ದಾರೆ.

‘ತಿ.ನರಸೀಪುರ ಕ್ಷೇತ್ರದಿಂದ ಪಾಲಿಟೆಕ್ನಿಕ್ ಕಾಲೇಜಿನ ಸ್ಥಳಾಂತರ ಆದೇಶವನ್ನು ಮುಖ್ಯಮಂತ್ರಿ ರದ್ದುಪಡಿಸಬೇಕು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.