ಮೈಸೂರು: ನಗರದಲ್ಲಿ ಸೋಮವಾರ ಭಗವಾನ್ ಮಹಾವೀರ ಜಯಂತಿ ಆಚರಣೆ ಸಂಭ್ರಮ-ಸಡಗರದಿಂದ ನಡೆಯಿತು.

ಇಲ್ಲಿನ ಅಶೋಕ ರಸ್ತೆಯಿಂದ ಆಯೋಜಿಸಿದ್ದ ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡು ಶಾಂತಿ, ಸಹಿಷ್ಣುತೆ ಹಾಗೂ ಅಹಿಂಸೆಯ ಸಂದೇಶವನ್ನು ಸಾರಿದರು.

ಸುಮತಿನಾಥ್ ಜೈನ ಶ್ವೇತಾಂಬರ ಮೂರ್ತಿ ಪೂಜಕ ಸಂಘದಿಂದ ಬೆಳಿಗ್ಗೆ ಮಹಾವೀರ ಭವನದಲ್ಲಿ ಮೂರ್ತಿಗೆ ಅಭಿಷೇಕ, ಪೂಜೆ ನೆರವೇರಿತು.

ಸುಮತಿನಾಥ್ ಜೈನ ದೇವಾಲಯದಿಂದ ಮಹಾವೀರ ಭವನದವರೆಗೆ ಶೋಭಾಯಾತ್ರೆ ನಡೆಯಿತು. ಮಹಾವೀರರ ಮೂರ್ತಿ ಹೊತ್ತ ರಥ, ಇಂದ್ರಧ್ವಜ ಮತ್ತು ಪಾಲಕಿ, ಸಂಗೀತ ಬ್ಯಾಂಡ್ಗಳ ಸಾಥಿ ಹಾಗೂ ಸಮವಸ್ತ್ರದಲ್ಲಿ ಮಹಿಳಾ ಮಂಡಳದವರು ಪಾಲ್ಗೊಂಡಿದ್ದರು. ಮಹಾವೀರ ನಗರ, ಇರ್ವಿನ್ ರಸ್ತೆ, ಅಶೋಕ ರಸ್ತೆ ಮಾರ್ಗವಾಗಿ ಮೆರವಣಿಗೆ ಸಾಗಿತು. ಸಮುದಾಯದ ಯುವಜನರು, ಯುವತಿಯರು ಕುಣಿದು ಸಂಭ್ರಮಿಸಿದರು. ಗುಂಪು–ಗುಂಪುಗಳಾಗಿ ನೃತ್ಯ ಮಾಡುತ್ತಾ ಸಾಗುತ್ತಾ ಭಕ್ತಿ ಭಾವ ಮೆರೆದರು. ಮಹಿಳಾ ತಂಡಗಳು ಭಗವಾನ್ ಮಹಾವೀರರ ಸ್ಮರಣೆ ಮಾಡಿದವು.

ನೋಟ್ ಬುಕ್, ಹೋಳಿಗೆ ವಿತರಣೆ:

ರಾಮಾನುಜ ರಸ್ತೆಯ ಜ್ಯೋತಿರ್ಗಮಯ ಉಚಿತ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಸೋಮವಾರ ಎಸ್. ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದಿಂದ ಹೋಳಿಗೆ, ಡ್ರೈ ಫ್ರೂಟ್ಸ್, ಹಣ್ಣು ಹಾಗೂ ನೋಟ್ ಬುಕ್ಗಳನ್ನು ವಿತರಿಸಿ ಮಹಾವೀರ ಜಯಂತಿ ಆಚರಿಸಲಾಯಿತು.

ಬ್ರಾಹ್ಮಣ ಸಮಾಜದ ಮುಖಂಡ ರಘುರಾಮ್ ವಾಜಪೇಯಿ, ‘ಅಹಿಂಸೆಯೇ ಪರಮೋಧರ್ಮ ಎಂಬ ತತ್ವ ಪ್ರತಿಪಾದಿಸಿದ ಮಹಾವೀರರ ಸಂದೇಶವು ಮಾನವೀಯತೆಯ ಮಹತ್ವವನ್ನು ಸಾರುತ್ತದೆ’ ಎಂದರು.

ಜೆಡಿಎಸ್ ನಗರ ಘಟಕದ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯಾದರ್ಶನ್, ‘ಮಹಾವೀರರ ಸಂದೇಶ ಸರ್ವಧರ್ಮಕ್ಕೂ ಅವಶ್ಯವಾಗಿದೆ. ಪ್ರೀತಿ, ಅಹಿಂಸೆಯಿಂದ ಜಗತ್ತನ್ನು ಗೆಲ್ಲಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಪ್ರಸ್ತುತ ವಿಶ್ವ ಶಾಂತಿ ಅಗತ್ಯವಾಗಿದೆ’ ಎಂದು ಹೇಳಿದರು.

ಬಿಜೆಪಿ ಮುಖಂಡ ಪುರುಷೋತ್ತಮ್, ಸಮಾಜ ಸೇವಕಿ ವಿದ್ಯಾ, ಎಂ.ಎಂ. ಗ್ರೂಪ್ಸ್ನ ಮಹಾನ್ ಶ್ರೇಯಸ್, ಕ್ರೀಡಾಪಟು ಮಹದೇವ್, ರಾಜೇಶ್ ಕುಮಾರ್, ಮಹೇಶ, ಜ್ಯೋತಿರ್ಗಮಯ ನಿಲಯದ ಮಾದೇಶ್, ಎಸ್.ಪಿ. ಅಕ್ಷಯ್ ಪ್ರಿಯಾದರ್ಶನ್, ದತ್ತ, ಲಿಂಗತ್ವ ಅಲ್ಪಸಂಖ್ಯಾತರಾದ ಸಿಂಚನಗೌಡ ಪಾಲ್ಗೊಂಡಿದ್ದರು.

ಜಿಲ್ಲಾಡಳಿತದಿಂದ ಮಾರ್ಚ್ 31ರಂದು ಆಚರಣೆ

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರಪಾಲಿಕೆ, ಭಗವಾನ್ ಮಹಾವೀರ ಜಯಂತ್ಯುತ್ಸವ ಸಮಿತಿಯಿಂದ ಮಹಾವೀರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಮಂಗಳವಾರ (ಮಾರ್ಚ್ 31) ಬೆಳಿಗ್ಗೆ 10.30ಕ್ಕೆ ವಿನೋಬಾ ರಸ್ತೆಯ ಕಲಾಮಂದಿರದ ಆವರಣದ ಕಿರುರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಉದ್ಘಾಟಿಸುವರು. ಶಾಸಕ ಕೆ.ಹರೀಶ್ ಗೌಡ ಅಧ್ಯಕ್ಷತೆ ವಹಿಸುವರು. ಕಂಬದಹಳ್ಳಿ ಶ್ರೀಕ್ಷೇತ್ರ ಜೈನ ಮಠದ ಭಾನುಕೀರ್ತಿ ಭಟ್ಟಾರಕ ಭಟ್ಟಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಎಸ್. ಶಿವರಾಜಪ್ಪ ಉಪನ್ಯಾಸ ನೀಡುವರು.

ಎಂ.ವಿ. ಪ್ರಭಾಮಣಿ ಮಂಜುನಾಥ್ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.