ಮೈಸೂರು: ‘ಮೈಸೂರಿನ ಅಸ್ಮಿತೆಗಾಗಿ ಅ.13ರಂದು ಇಲ್ಲಿ ಮಹಿಷ ದಸರಾ ಕಾರ್ಯಕ್ರಮ ನಡೆಸಲಾಗುವುದು’ ಎಂದು ಮುಖಂಡ ಪುರುಷೋತ್ತಮ ತಿಳಿಸಿದರು.
ಇಲ್ಲಿನ ಅಶೋಕ ವೃತ್ತದಲ್ಲಿರುವ ಬುದ್ಧ ವಿಹಾರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಅಂದು ಚಾಮುಂಡಿಬೆಟ್ಟದ ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡಲಾಗುವುದು. ಪ್ರತಿಪರ ಚಿಂತಕರು, ದಲಿತ ಸಂಘಟನೆಗಳ ಮುಖಂಡರು ಹಾಗೂ ಅಂಬೇಡ್ಕರ್ ಅನುಯಾಯಿಗಳು ಭಾಗವಹಿಸಲಿದ್ದಾರೆ. ಬೆಳಿಗ್ಗೆ 9.30ಕ್ಕೆ ಚಾಮುಂಡಿ ಬೆಟ್ಟದ ಮಹಾದ್ವಾರ (ತಾವರೆಕಟ್ಟೆ)ದ ಬಳಿಯಿಂದ ಪುರಭವನದವರೆಗೆ ಮೆರವಣಿಗೆ ನಡೆಸಲಾಗುವುದು. ರಾಜ್ಯದ ಮೂಲ ನಿವಾಸಿಗಳ ಮಹಿಷ ಸಾಂಸ್ಕೃತಿಕ ಹಬ್ಬ ಇದಾಗಿರಲಿದೆ’ ಎಂದು ಹೇಳಿದರು.
‘ಮಹಿಷ ಕುಲದ ಸ್ವಾಭಿಮಾನಿ ಚಕ್ರವರ್ತಿಯೇ ಮಹಿಷಾಸುರ. ಅಂದಿನ ಮಹಿಷ ಮಂಡಲವೇ ಇಂದಿನ ಮೈಸೂರು’ ಎಂದು ಪ್ರತಿಪಾದಿಸಿದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.