ಹಂಪಾಪುರ (ಮೈಸೂರು ಜಿಲ್ಲೆ): ಜೋರು ಗಾಳಿಯಿಂದಾಗಿ ಮನುಗನಹಳ್ಳಿ ಗ್ರಾಮದ ಉಮೇಶ್ ಅವರ ತೋಟದಲ್ಲಿ ಬಾಳೆ ಬೆಳೆಗೆ ಹಾನಿಯಾಗಿದೆ.

ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ನೇಂದ್ರ ಬಾಳೆ ಗಿಡಗಳು ಗೊನೆಗಳೊಂದಿಗೆ ಮುರಿದುಬಿದ್ದಿವೆ. ಇನ್ನೊಂದು ತಿಂಗಳಲ್ಲಿ ಕಟಾವಿಗೆ ಬರುತ್ತಿತ್ತು.

‘ಮಳೆ ಸಾಧಾರಣವಾಗಿತ್ತು. ಜೋರು ಗಾಳಿಯಿಂದಾಗಿ ಬಾಳೆಗೆ ಹಾನಿಯಾಗಿದೆ. ಇನ್ನೂ ಕಾಯಿ ಬಲಿತಿಲ್ಲ. ಬಲಿತಿಲ್ಲದ ಕಾಯಿಯನ್ನು ಯಾರೂ ಕೊಳ್ಳುವುದೂ ಇಲ್ಲ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಅಧಿಕಾರಿಗಳು ಮಳೆಯಿಂದ ಆಗಿರುವ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಉಮೇಶ್ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.