ಪಿರಿಯಾಪಟ್ಟಣ: ಪಟ್ಟಣದ ಶಕ್ತಿ ದೇವತೆಗಳಾದ ಮಸಣಿಕಮ್ಮ ಹಾಗೂ ಕನ್ನಂಬಾಡಿ ಅಮ್ಮನವರ ಬ್ರಹ್ಮ ರಥೋತ್ಸವಕ್ಕೆ ಅಂತಿಮ ಕ್ಷಣದ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

ಶ್ರೀ ಕನ್ನಂಬಾಡಿ ಅಮ್ಮನವರ ರಥೋತ್ಸವ ಮಾ. 10ರಂದು ಮಂಗಳವಾರ ಮತ್ತು ಮಾ.12 ರಂದು ತೆಪ್ಪೋತ್ಸವ ಹಾಗೂ ಮಸಣಿಕಮ್ಮ ರಥೋತ್ಸವ ಮಾ. 12 ರಂದು ಮತ್ತು ಮಾ.14 ರಂದು ತೆಪ್ಪೋತ್ಸವ ಜರುಗಲಿದೆ.

12ನೇ ಶತಮಾನದ ಆದಿ ಭಾಗದಲ್ಲಿ ಈ ದೇವಾಲಯ ಹೊಯ್ಸಳ ಶೈಲಿಯಲ್ಲಿ ನಿರ್ಮಾಣವಾಗಿದೆ. ಚಂಗಾಳ್ವ ರಾಜ ಮನೆತನದ ಪ್ರಮುಖ ದೇವತೆಯಾಗಿದ್ದ ಮಸಣಿಕಮ್ಮ ಇಂದಿಗೂ ಊರನ್ನು ಕಾಯುತ್ತಿರುವ ಪ್ರಮುಖ ದೇವತೆ ಎನ್ನುವ ಪ್ರತೀತಿ ಇದೆ. ನಾಗಸಿಂಗಪಟ್ಟಣ ಎಂದು ಹೆಸರಾಗಿದ್ದ ಪಿರಿಯಾಪಟ್ಟಣದಲ್ಲಿ ರಕ್ಷಣಾ ಕೋಟೆ ನಿರ್ಮಾಣ ಮಾಡಿದ ನಂತರ ಕೋಟೆಯ ರಕ್ಷಣೆಗಾಗಿ ಮಸಣಿಕಮ್ಮ ದೇವಾಲಯ ನಿರ್ಮಿಸಿದ ಇತಿಹಾಸವಿದೆ.

ಸಾಮಾನ್ಯವಾಗಿ ದೇವಾಲಯಗಳಲ್ಲಿ ಮೂರ್ತಿಗಳು ಪೂರ್ವಮುಖವಾಗಿದ್ದರೆ, ಈ ದೇವಾಲಯದಲ್ಲಿ ಕನ್ನಂಬಾಡಿ ಅಮ್ಮನವರ ಮುಖ ಪಶ್ಚಿಮ ಅಭಿಮುಖವಾಗಿದೆ. ಅದು ಕೊಡಗಿಗೆ ಮುಖ ಮಾಡಿರುವುದು ವಿಶೇಷ.

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟು ಕಟ್ಟುವ ವೇಳೆ ಅಲ್ಲಿಯ ಕನ್ನಂಬಾಡಿ ಅಮ್ಮನವರ ಮೂರ್ತಿಯ ವಾಸಸ್ಥಾನ ಮುಳುಗಿ ಹೋಯಿತು. ಇದರಿಂದ ಕೊಡಗಿಗೆ ಹೋಗುತ್ತಿದ್ದ ಸಹೋದರಿಯನ್ನು ಗ್ರಾಮ ದೇವತೆ ಮಸಣಿಕಮ್ಮ ತಡೆದು ಇಲ್ಲೇ ನೆಲೆಯೂರುವಂತೆ ತಿಳಿಸಿದರಲ್ಲದೆ, ಮೊದಲ ತೇರು ನಿನ್ನದೇ ಆಗಲಿ ಎಂದು ಹರಿಸಿದ ಕಾರಣ ಮೊದಲು ಕನ್ನಂಬಾಡಿ ಅಮ್ಮನವರ ರಥೋತ್ಸವ ನಡೆದು, ಎರಡು ದಿನಗಳ ನಂತರವೇ ಮಸಣಿಕಮ್ಮನವರ ರಥೋತ್ಸವ ನಡೆಯಲಿದೆ.ಈ ದೇವತೆಗಳಿಗೆ ಹೆಚ್ಚಾಗಿ ಕೊಡಗಿನ ಭಕ್ತರು ಹೆಚ್ಚಾಗಿದ್ದು, ನಾಡಿನಾದ್ಯಂತ ಭಕ್ತರು ಇದ್ದಾರೆ.

ಪೂರ್ವ ಸಿದ್ಧತೆ: ರಥೋತ್ಸವದ ಅಂಗವಾಗಿ ಪಟ್ಟಣದಾದ್ಯಂತ ವಿದ್ಯುತ್ ದೀಪಲಂಕಾರ ಮಾಡಲಾಗಿದ್ದು, ಬೆಟ್ಟದಪುರ ಸರ್ಕಲ್ ಸೇರಿ ಪ್ರಮುಖ ವೃತ್ತಗಳು ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿವೆ.

ಜಾತ್ರಾ ಮಹೋತ್ಸವದ ವಿಶೇಷವೆಂದರೆ ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತಾದಿಗಳಿಗೆ ಹಲವು ಕಡೆಗಳಲ್ಲಿ ದಾನಿಗಳು, ಸ್ಥಳೀಯರು ದಾಸೋಹ ಏರ್ಪಡಿಸುವುದು ಇತ್ತೀಚೆಗೆ ಬೆಳೆದು ಬಂದಿದೆ. ಪಾನಕ ಮಜ್ಜಿಗೆ ಅಷ್ಟೇ ಅಲ್ಲದೆ ಐಸ್ ಕ್ರೀಮ್, ಹಣ್ಣು ಹಂಪಲು, ವಿವಿಧ ಬಗೆಯ ಅಡುಗೆಯ ರುಚಿಯನ್ನು ಜಾತ್ರೆಯಲ್ಲಿ ಸವಿಯಬಹುದು. ಈ ಬಾರಿಯೂ ಅನೇಕ ಸಂಘಟನೆಗಳು ದಾಸೋಹಕ್ಕೆ ಸಿದ್ಧತೆ ಮಾಡಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.