ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಂಪಾಪುರ: ₹75 ಸಾವಿರ ಲಾಭದಲ್ಲಿ ಹಾಲು ಉತ್ಪಾದಕರ ಸಂಘ

ಜಿನ್ನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ವಾರ್ಷಿಕ ಸಭೆ
Published : 25 ಆಗಸ್ಟ್ 2024, 14:30 IST
Last Updated : 25 ಆಗಸ್ಟ್ 2024, 14:30 IST
ಫಾಲೋ ಮಾಡಿ
Comments

ಹಂಪಾಪುರ: ‘ಸಹಕಾರ ಸಂಘವು ಉತ್ತಮ ಸ್ಥಿತಿಯಲ್ಲಿದ್ದು ಸದಸ್ಯರ ಸಹಕಾರದಿಂದ ಈ ಸಾಲಿನಲ್ಲಿ ₹75 ಸಾವಿರ ನಿವ್ವಳ ಲಾಭ ಗಳಿಸಿದೆ’ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಿನ್ನಹಳ್ಳಿ ರಾಜನಾಯಕ ತಿಳಿಸಿದರು.

ಸಮೀಪದ ಜಿನ್ನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.

‘ಹೈನುಗಾರಿಕೆ ರೈತರ ಉಪಕಸುಬಾಗಿದ್ದು ಅವರ ಕುಟುಂಬ ನಿರ್ವಹಣೆಗೆ ಬಹಳ ಉಪಯುಕ್ತವಾಗಿದೆ. ಪ್ರತಿಯೊಬ್ಬರೂ  ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

‘ಮುಂದಿನ ವಾರ್ಷಿಕ ಸಭೆಯೊಳಗೆ ಸದಸ್ಯರ ಮತ್ತು ಗ್ರಾಮಸ್ಥರ ಸಹಕಾರದಿಂದ ಆಡಳಿತ ಮಂಡಳಿಯು ಒಕ್ಕೂಟಕ್ಕೆ ಸಂಬಂಧಪಟ್ಟ ನಿರ್ದೇಶಕರು ಹಾಗೂ ಶಾಸಕರನ್ನು ಭೇಟಿ ಮಾಡಿ ಸರ್ಕಾರದ ಅನುದಾನ ತಂದು ಸ್ವಂತ ಕಟ್ಟಡ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

ಸಂಘದ ಮೇಲ್ವಿಚಾರಕ ಯೋಗೇಶ್ ವಾರ್ಷಿಕ ವರದಿಯನ್ನು ಓದಿ ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮರಳೂರನಾಯಕ, ನಿರ್ದೇಶಕರಾದ ಸಿದ್ದನಾಯಕ, ಚಿಕ್ಕಣ್ಣನಾಯಕ, ರಾಜನಾಯಕ, ನಾಗರಾಜು, ಚಿಕ್ಕಣ್ಣ, ನಟರಾಜು, ಕಮಲಮ್ಮ, ಲಿಂಗರಾಜು, ಕೃಷ್ಣ, ನಾಗೇಂದ್ರ, ಕಾರ್ಯ ನಿರ್ವಹಣಾಧಿಕಾರಿ ವಿಜಯ್ ಕುಮಾರ್, ಹಾಲು ಪರೀಕ್ಷಿಕ ಪವನ್ ಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT