ಬೆಟ್ಟದಪುರ: ‘ಸುದೀರ್ಘಕಾಲದಿಂದ ಸಮಾಜ ಸೇವೆ ಸಲ್ಲಿಸಿರುವ ನಾನೀಗ ರಾಜಕೀಯ ಜೀವನದ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದೇನೆ’ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದರು.

ಸಮೀಪದ ಮೇಲೂರು ಗ್ರಾಮದಲ್ಲಿ ಸೋಮವಾರ ಹಾರಂಗಿ ಬಲದಂಡೆ ನಾಲೆಯ ವಿತರಣಾ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ನಾನು ಯಾರನ್ನು ಸೂಚಿಸುತ್ತೇನೆಯೋ ಅವರಿಗೆ, ನನಗೆ ನೀಡಿದಂತೆಯೇ ಸಹಾಯ ಮತ್ತು ಸಹಕಾರವನ್ನು ನೀವೆಲ್ಲರೂ ಕೊಡಬೇಕು. ಕ್ಷೇತ್ರದ ಅಭಿವೃದ್ಧಿ ಮುಂದುವರಿಯಲು ಇದು ಅನಿವಾರ್ಯ’ ಎಂದು ಕಾರ್ಯಕರ್ತರನ್ನು ಕೋರಿದರು.

ಸಚಿವರಿಗೆ ಮನವಿ ಸಲ್ಲಿಕೆ: ಗ್ರಾಮೀಣ ಭಾಗದಲ್ಲಿ ಬಸ್ ಸೌಲಭ್ಯದ ವ್ಯವಸ್ಥೆ, ಅಂಗನವಾಡಿ, ಗ್ರಂಥಾಲಯ ನಿರ್ಮಾಣ, ಸೋಪಾನಕಟ್ಟೆ, ಹಾಲಿನ ಡೇರಿಗೆ ಗೋಧಾಮ ವ್ಯವಸ್ಥೆ, ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಸಚಿವರಿಗೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಸಿದ ಸಚಿವರು, ‘ಪ್ರತಿಯೊಂದು ಗ್ರಾಮದ ಅಗತ್ಯತೆಗಳನ್ನು ಪರಿಶೀಲಿಸಿ, ತುರ್ತು ಅಗತ್ಯವಿರುವ ಕಾಮಗಾರಿಗಳಿಗೆ ಮೊದಲಿಗೆ ಒತ್ತು ನೀಡಲಾಗುವುದು. ಲಭ್ಯವಿರುವ ಅನುದಾನ ಹಾಗೂ ಯೋಜನೆಗಳಡಿ ಹಂತ ಹಂತವಾಗಿ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡಲಾಗುವುದು’ ಎಂದು ಭರವಸೆ ನೀಡಿದರು.

ಇದೆ ವೇಳೆ ಮರದೂರು, ವಡ್ಡರಹಳ್ಳಿ, ಕೊತ್ತವಳ್ಳಿಕೊಪ್ಪಲು, ಬೆಟ್ಟದ ತುಂಗ, ಮೇಗಲಕೊಪ್ಪಲು, ನಂದೀಪುರ ಗ್ರಾಮಗಳಲ್ಲಿ ₹21 ಕೋಟಿ ವೆಚ್ಚದಲ್ಲಿ ನಾಲಾ ಅಭಿವೃದ್ಧಿ, ಗ್ರಾಮದ ಪರಿಮಿತಿಯಲ್ಲಿ ರಸ್ತೆ ಅಭಿವೃದ್ಧಿ, ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರು ಹೊಲದಪ್ಪ, ಮುಖಂಡರಾದ ಡಿ.ಟಿ.ಸ್ವಾಮಿ, ರಹಮದ್ ಜಾನ್ ಬಾಬು, ರಾಮಚಂದ್ರ, ಮಾದೇಗೌಡ, ಈಚೂರು ಲೋಕೇಶ್, ಚಿಕ್ಕೇಗೌಡ, ಕೃಷ್ಣೆಗೌಡ, ಆಯಿತನಹಳ್ಳಿ ಮಹದೇವ್, ಗ್ರಾ.ಪಂ ಅಧ್ಯಕ್ಷ ಶಿಲ್ಪಾ, ಎನ್.ಜೆ.ಗೌಡಯ್ಯ, ಎನ್.ಪಿ.ಬಸವರಾಜು, ಕರುಣಾನಿಧಿ, ಪುಟ್ಟರಾಜು, ರುದ್ರಆರಾಧ್ಯ, ಗುರುರಾಜು, ಚಂದ್ರಶೇಖರ್ ತಹಶೀಲ್ದಾರ್ ನಿಸರ್ಗಪ್ರಿಯ, ಇಒ ಸುನಿಲ್, ಹಾರಂಗಿ ಇಲಾಖೆ ಸಹಾಯಕ ಕಾರ್ಯ ಪಾಲಕ ಅಭಿಯಂತರ ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.