ಮೈಸೂರು: ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಸೋಮವಾರ ನಂಜನಗೂಡಿನಲ್ಲಿ ನಡೆದ ಶ್ರೀಕಂಠೇಶ್ವರ ‘ದೊಡ್ಡ ಜಾತ್ರಾ ಮಹೋತ್ಸವ’ದಲ್ಲಿ ಭಾಗಿಯಾಗಿ, ಬಾಲ್ಯದ ದಿನಗಳ ನೆನಪನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯನ್ನು ‘ಪೋಸ್ಟ್’ ಹಾಕಿರುವ ಅವರು, ‘ಊರ ಜಾತ್ರೆಯ ನೆನಪು’ ಮಾಡಿಕೊಂಡಿದ್ದಾರೆ.

‘ನಂಜನಗೂಡಿನಿಂದ ಕೆಲವೇ ಮೈಲಿಗಳ ದೂರದಲ್ಲಿರುವುದು ನಮ್ಮೂರು ಹದಿನಾರು. ಇದರ ಜೊತೆಗೆ ಕಪಿಲಾ ನದಿ ದಡದ ಪಕ್ಕದಲ್ಲೇ ಇರುವ ಹೆಜ್ಜಿಗೆ ಕೂಡ ನಮ್ಮ ಸಂಬಂಧಿಕರ ಊರಾಗಿತ್ತು. ಚಿಕ್ಕ ವಯಸ್ಸಿನಲ್ಲಿ ಹೆಜ್ಜಿಗೆಗೆ ಬರುತ್ತಿದ್ದಾಗ ನಂಜನಗೂಡು ಜಾತ್ರೆಗೆ ಬಹು ಸಂಭ್ರಮದಿಂದ ಹೋಗುತ್ತಿದ್ದೆವು’.

‘ಬಡತನ ಹೆಚ್ಚಾಗಿದ್ದ ಆ ಕಾಲದಲ್ಲಿ ಉಡುವ ಬಟ್ಟೆಗಳೂ ಕಡಿಮೆ ಇದ್ದಿದ್ದರಿಂದ ಅಮ್ಮ ಹೊಲಿಸಿಕೊಟ್ಟ ಅಪರೂಪದ ಪ್ಯಾಂಟ್ ಶರ್ಟನ್ನೇ ಜೋಪಾನವಾಗಿಟ್ಟುಕೊಂಡು ಜಾತ್ರೆಗೆ ಹೋಗುತ್ತಿದ್ದ ನೆನಪು’.

‘ಆದರೆ, ಈಗಿನಂತೆ ಆಗ ನದಿಯನ್ನು ದಾಟಲು ಸೇತುವೆ ಇರಲಿಲ್ಲ. ಬೇಸಿಗೆ ಸಂದರ್ಭದಲ್ಲಿ ನೀರು ಕಡಿಮೆ ಇರುತ್ತಿದ್ದ ಕಾರಣ, ನಾವು ಹೊಸ ಪ್ಯಾಂಟು ಯಾವ ಕಾರಣಕ್ಕೂ ನೆನೆಯಬಾರದೆಂದು ಹೆಚ್ಚು– ಕಡಿಮೆ ಮೊಣಕಾಲಿಗಿಂತಲೂ ಮೇಲಿನವರೆಗೂ ಅದನ್ನು ಮಡಿಚಿಕೊಂಡು, ನದಿ ದಾಟುತ್ತಿದ್ದೆವು. ಕೆಲವೊಮ್ಮೆ ನೀರು ಸ್ವಲ್ಪ ಹೆಚ್ಚಾಗಿದೆ ಎನಿಸಿದಾಗ ಪ್ಯಾಂಟನ್ನು ತಲೆ ಮೇಲೆ ಹೊತ್ತು ಆ ಕಡೆ ದಡಕ್ಕೆ ಹೋದ ಮೇಲೆ ಹಾಕಿಕೊಳ್ಳುತ್ತಿದ್ದೆವು’ ಎಂದು ನೆನೆದಿದ್ದಾರೆ.

‘ಆಗ ನಮ್ಮ ಕೈಲಿರುತ್ತಿದ್ದ ಎರಡೋ ಮೂರು ರೂಪಾಯಿಯಲ್ಲಿ ಜಾತ್ರೆಯಲ್ಲಿ ಬೆಂಡು–ಬತ್ತಾಸು ಮತ್ತು ಕಳ್ಳೆಪುರಿಯನ್ನು ಕೊಂಡು ಅಲ್ಲೇ ಸ್ವಲ್ಪ ತಿಂದು ಮಿಕ್ಕಿದ್ದನ್ನು ಸ್ವಲ್ಪವೂ ನೆನೆಯದಂತೆ ನದಿ ದಾಟಿಕೊಂಡು ಮನೆಗೆ ಒಯ್ಯುತ್ತಿದ್ದ ನೆನಪು ಮಾಸಿಲ್ಲ’ ಎಂದು ಹೇಳಿದ್ದಾರೆ.

‘ನಮ್ಮೂರು ನಂಜನಗೂಡಿನ ಜಾತ್ರೆ ಇಡೀ ಮೈಸೂರು–ಚಾಮರಾಜನಗರ ಭಾಗಕ್ಕೆ ಬಹಳ ಜನಪ್ರಿಯವಾದ ಜಾತ್ರೆ. ಇಂತಹ ಜಾತ್ರೆಯಲ್ಲಿ ಪಾಲ್ಗೊಂಡಾಗ ನನ್ನೊಳಗೆ ಬಾಲ್ಯದ ನೆನಪುಗಳು ಮತ್ತೆ ಆವರಿಸಿದವು’ ಎಂದು ಹಂಚಿಕೊಂಡಿದ್ದಾರೆ.

‘ಬಹು ಮುಖ್ಯವಾಗಿ ನಾನು ಸಚಿವನಾದ ನಂತರ ಇಲ್ಲಿನ ಜನರು ಸುಲಭವಾಗಿ ನದಿ ದಾಟಲು ಅನುಕೂಲ ಅಗುವಂತೆ ನಂಜನಗೂಡು-ಹೆಜ್ಜಿಗೆ ಸೇತುವೆ ಮತ್ತು ನದಿಯ ಇಕ್ಕೆಲಗಳಲ್ಲಿ ಸುಸಜ್ಜಿತ ಮೆಟ್ಟಿಲುಗಳು, ಪರಶುರಾಮ ದೇವಾಲಯದ ಸುತ್ತ ಮಳೆ ಮತ್ತು ನದಿ ಪ್ರವಾಹದಿಂದ ಆಗುತ್ತಿದ್ದ ಕೆಸರನ್ನು ತಪ್ಪಿಸಲು ಕಾಂಕ್ರೀಟ್ ಹೊದಿಕೆ ನಿರ್ಮಾಣ, ನಂಜನಗೂಡಿನ ದೇವಾಯದ ಸುತ್ತಲೂ ಉತ್ತಮ ಪಾರ್ಕಿಂಗ್ ವ್ಯವಸ್ಥೆ ಮತ್ತು ಕಾಂಕ್ರೀಟ್ ಹಾಸಿನ ವ್ಯವಸ್ಥೆಯನ್ನು ಮಾಡಿಸುವ ಅವಕಾಶ ನನ್ನದಾಗಿತ್ತು. ಬಾಲ್ಯದ ನೆನಪುಗಳನ್ನು ಹಾಗೆ ಕಾಪಾಡಿಕೊಂಡು ಅವಕಾಶ ಸಿಕ್ಕಾಗ ಅವುಗಳನ್ನು ಸಾಕಾರಗೊಳಿಸುವ ಸಂದರ್ಭವಿದೆಯಲ್ಲಾ ಅದಕ್ಕೆ ಎಂದೂ ಬೆಲೆ ಕಟ್ಟಲು ಆಗದು’ ಎಂದು ಹೇಳಿದ್ದಾರೆ.

‘ಅದರಲ್ಲೂ ಜಾತಿ, ಧರ್ಮ ಬೇಧವಿಲ್ಲದೇ ಒಂದು ಮುಗ್ದ ಆಚರಣೆಯಾಗಿ ಆಚರಿಸಲಾಗುವ ನಂಜನಗೂಡಿನ ಜಾತ್ರೆ ಅಂದು ಹೇಗಿತ್ತೋ ಇಂದೂ ಹಾಗೆಯೇ ತನ್ನ ಆಚರಣೆಯ ಮುಗ್ದತೆಯನ್ನು ಉಳಿಸಿಕೊಂಡಿದೆ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.