ಮೈಸೂರು: ‘ವರನಟ ರಾಜಕುಮಾರ್ ಅವರು ಕನ್ನಡಕ್ಕೆ ಗೌರವ ತಂದುಕೊಟ್ಟ ಮಹಾನ್ ಚೇತನ’ ಎಂದು ಶಾಸಕ ಕೆ. ಹರೀಶ್ ಗೌಡ ಸ್ಮರಿಸಿದರು.

ಇಲ್ಲಿನ ಅರಮನೆ ಉತ್ತರ ದ್ವಾರದ ಎದುರಿನ ಡಾ.ರಾಜ್ಕುಮಾರ್ ಉದ್ಯಾನದಲ್ಲಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಶುಕ್ರವಾರ ರಾಜಕುಮಾರ್ ಜನ್ಮದಿನದ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

‘ಅಂದು ರಾಜಕುಮಾರ್ ಅವರು ಗೋಕಾಕ್ ಚಳವಳಿಯ ಮೂಲಕ ನಡೆಸಿದ ಹೋರಾಟವು ನಮ್ಮ ಮಾತೃಭಾಷೆಗೆ ಇಷ್ಟೊಂದು ಗೌರವ ಮತ್ತು ಬೆಲೆ ದೊರೆಯಲು ಸಾಧ್ಯವಾಯಿತು’ ಎಂದರು.

‘ಕನ್ನಡ ನಾಡು, ನುಡಿ ಎಂದರೆ ಅವರಿಗೆ ಅತೀವ ಪ್ರೀತಿ ಇತ್ತು. ಅವರು ನಟಿಸಿದ ಚಲನಚಿತ್ರದಲ್ಲಿ ಸದಭಿರುಚಿಯ ಸಂದೇಶ ಇರುತ್ತಿತ್ತು. ಅವರಿಗೆ ಕನ್ನಡದ ಮೇಲಿದ್ದ ಅಭಿಮಾನ ಈಗಿನ ಯುವಜನರಿಗೆ ಮಾದರಿ ಆಗಬೇಕು’ ಎಂದು ಆಶಿಸಿದರು.

‘ಅವರು ನಟಿಸಿರುವ ಸಿನಿಮಾಗಳು ಮನರಂಜನೆಯ ಜೊತೆಗೆ ನೀತಿಪಾಠವನ್ನೂ ತಿಳಿಸುತ್ತವೆ. ಅವರ ಚಲನಚಿತ್ರಗಳಿಂದ ಪ್ರೇರಿತರಾಗಿ ಹಲವರು ಜೀವನಶೈಲಿಯನ್ನು ಬದಲಾವಣೆ ಮಾಡಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಸಿನಿಮಾಗಳಲ್ಲಿದ್ದ ಸಂಭಾಷಣೆ ಮತ್ತು ಸಾಹಿತ್ಯದ ಸೊಗಡನ್ನು ಈಗ ಕಾಣಲು ಅಸಾಧ್ಯ’ ಎಂದರು.

‘ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ರಾಜ್ಕುಮಾರ್ ಅವರು ಮಾಡದ ಪಾತ್ರಗಳಿಲ್ಲ ಎನ್ನಬಹುದು. ನಟನೆಗಷ್ಟೆ ಸೀಮಿತವಾಗದೆ ಅವರ ಸಿರಿ ಕಂಠದಿಂದ ಹಾಡುಗಳನ್ನು ಹಾಡಿ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ. ಆಗಿನ ಕಾಲದಲ್ಲೇ ಅವರು ಸಿನಿಮಾಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಹಾಡುಗಳನ್ನು ಹಾಡುತ್ತಿದ್ದರು’ ಎಂದು ಹೇಳಿದರು.

ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ‘ರಾಜಕುಮಾರ್ ಅವರ ನಟನೆಯ ಜೊತೆ ವ್ಯಕ್ತಿತ್ವ ಜನರ ಮನಸ್ಸಿನಲ್ಲಿ ಇಂದಿಗೂ ಉಳಿದಿದೆ. ಅವರ ವ್ಯಕ್ತಿತ್ವ ಹಾಗೂ ಕನ್ನಡ ಭಾಷೆಯ ಮೇಲೆ ಅವರಿಗಿದ್ದ ಪ್ರೀತಿ ಪ್ರತಿಯೊಬ್ಬರಿಗೆ ದಾರಿದೀಪವಾಗಬೇಕು’ ಎಂದು ಹೇಳಿದರು.

‘ಅವರ ಚಿತ್ರಗಳು ಅತ್ಯಂತ ಶುದ್ಧವಾಗಿದ್ದು, ಕುಟುಂಬದ ಪ್ರತಿಯೊಬ್ಬರೂ ಒಟ್ಟಿಗೆ ಕುಳಿತು ನೋಡುವಂತಿವೆ’ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲ ಎಸ್.ಎಚ್. ಮಾತನಾಡಿ, ‘ರಾಜಕುಮಾರ್ ಅವರ ಹಾಡುಗಳು ರೋಮಾಂಚನ ಮೂಡಿಸುತ್ತವೆ. ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದರೂ ಅಹಂಕಾರ ತೋರದೆ ಅಭಿಮಾನಿಗಳನ್ನು ‘ದೇವರು’ ಎಂದು ಕರೆದರು. ಉತ್ತಮ ಜೀವನಶೈಲಿ, ಶಿಸ್ತು, ಸಮಯಪಾಲನೆ, ಹಿರಿಯರಿಗೆ ಗೌರವ ನೀಡುವ ಗುಣ, ಮಾತೃ ಭಾಷೆಯ ಮೇಲಿನ ಭಕ್ತಿ ಅವರು ನಮಗೆ ಬಿಟ್ಟುಹೋಗಿರುವ ಆಸ್ತಿ’ ಎಂದು ಹೇಳಿದರು.

ಲೋಹಿತ್ ಐ.ಡಿ. ಮತ್ತು ತಂಡದವರು ರಾಜ್ ಗೀತಗಾಯನ ಪ್ರಸ್ತುತಪಡಿಸಿದರು.

ಜಿಲ್ಲಾ ಡಾ.ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷ ಗೋವಿಂದರಾಜು, ಗೌರವ ಸಲಹೆಗಾರರಾದ ಸಿದ್ದಪ್ಪ ಮತ್ತು ಸ್ವಾಮಿ, ಕಾರ್ಯದರ್ಶಿ ರಮೇಶ್, ಡಾ.ರಾಜ್ ಶಿವಸೈನ್ಯ ಅಭಿಮಾನಿಗಳ ಸಂಘದ ಅಧ್ಯಕ್ಷ ಬಿ.ಎನ್ ರವಿ, ಸದಸ್ಯರಾದ ಮಹೇಶ್, ದೊರೆ, ಮಂಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.