ಮೈಸೂರು: 'ಸಹೋದರರನ್ನು ಅಸ್ಪೃಶ್ಯರಾಗಿ ಶತಮಾನಗಳ ಕಾಲ ದೂರವಿಡಲಾಗಿದೆ. ಮೇಲು- ಕೀಳು ಎಂಬ ಮನೋಭಾವ ಕಳೆದು ಸರ್ವರೂ ಒಂದೇ ಎಂಬ ಏಕ ಭಾವ ಭಾರತೀಯರಲ್ಲಿ ಮೂಡಬೇಕಿದೆ' ಎಂದು ಆರ್ಎಸ್ಎಸ್ ಸರಸಂಘಸಂಚಾಲಕ ಮೋಹನ್ ಭಾಗವತ್ ಪ್ರತಿಪಾದಿಸಿದರು.

ಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಮಠದಲ್ಲಿ ಗುರುವಾರ ನಡೆದ ಜೆಎಸ್ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವದ 15ನೇ ವಿಶೇಷ ಉಪನ್ಯಾಸದಲ್ಲಿ 'ರಾಷ್ಟ್ರೀಯ ಅಭಿವೃದ್ಧಿಗೆ ಸಾಮಾಜಿಕ ಸೌಹಾರ್ದತೆ ಪ್ರೇರಕ' ಕುರಿತು ಮಾತನಾಡಿದರು.

'ಅಂಬೇಡ್ಕರ್ ಅವರ ಸಂವಿಧಾನ ಸಭೆಯ ಭಾಷಣಗಳನ್ನು ಮತ್ತೊಮ್ಮೆ ಓದಿಕೊಳ್ಳಬೇಕಿದೆ. ಸಾಮಾಜಿಕ ಸ್ವಾತಂತ್ರ್ಯ ನೆಲೆಗೊಳ್ಳದೆ ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಸಿಗುವುದಿಲ್ಲವೆಂದಿದ್ದರು. ಸಂವಿಧಾನದಲ್ಲಿನ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಫ್ರೆಂಚ್ ಕ್ರಾಂತಿಯಿಂದ ತೆಗೆದುಕೊಂಡದ್ದಲ್ಲ. ಈ ಪರಿಕಲ್ಪನೆಯು ಭಾರತದ್ದೇ ಆಗಿದೆ. ಇದು ತಥಾಗತ ಬುದ್ಧ ನೀಡಿದ್ದು' ಎಂದರು.

ಕಲ್ಮಶ ತೆಗೆದು ಹಾಕಿ: 'ವಿಭಿನ್ನತೆಯು ವ್ಯಕ್ತಿಗತವಾಗಿ ಎಲ್ಲರಲ್ಲೂ ಇದೆ. ಅದೇ ನಮ್ಮ ನಡುವಿನ ದೂರಕ್ಕೆ ಕಾರಣವಾಗಬಾರದು. ಸಮಾನತೆ ನೆಲೆಸಲು ನಮ್ಮ ಮನಸ್ಸಿನೊಳಗಿನ ಭೇದವೆಂಬ ಕಲ್ಮಶವನ್ನು ತೆಗೆದು ಹಾಕಬೇಕು. ಸಚ್ಚಿತ್ತತೆ ಬರಬೇಕೆಂದರೆ ಇನ್ನೊಬ್ಬರಿಗೆ ತೊಂದರೆ ಕೊಡಬಾರದು. ಎಲ್ಲರೂ ನಮ್ಮವರೇ ಎಂಬ ಭಾವ ಬಂದಾಗ ಸಮಾಜದ ವಿಕಾಸ ತಂತಾನೇ ಆಗುತ್ತದೆ' ಎಂದು ಭಾಗವತ್ ಹೇಳಿದರು.

'ಭಾಷೆ, ಜಾತಿ, ಪಂಗಡಗಳನ್ನು ಮೀರಿ ಬಂಧುತ್ವ ನೆಲೆಗೊಳ್ಳಬೇಕು. ಅಸ್ತಿತ್ವಕ್ಕಾಗಿ ಮತ್ತೊಬ್ಬರ ವಿರುದ್ಧ ಹೋರಾಟ ನಡೆಸುವುದು ಪಾಶ್ಚತ್ಯ ಪರಿಕಲ್ಪನೆಯಾಗಿದೆ. ಆದರೆ, ಭಾರತೀಯರು ಭ್ರಾತೃತ್ವ ಮತ್ತು ಪರಸ್ಪರ ಸಹಾಯದೊಂದಿಗೆ ನಾಗರಿಕತೆ ಕಟ್ಟಿದ್ದಾರೆ. ನಮ್ಮ ಸಮಾಜವು, ಪರೋಪಕಾರವೇ ಸೇವೆ, ಕರ್ತವ್ಯವೇ ಜೀವನದ ಪರಮ ಗುರಿಯೆಂದು ತಿಳಿದಿದೆ' ಎಂದು ವಿವರಿಸಿದರು.

'ಮೋಕ್ಷ, ಅರ್ಥ, ಕಾಮ ಪುರುಷಾರ್ಥದಲ್ಲಿ ಧರ್ಮವೂ ಸೇರಿದೆ. ಧರ್ಮವು ಮಾನವನ ಸರ್ವಾಂಗೀಣ ಪ್ರಗತಿಯ ಅಡಿಪಾಯ. ಸೌಹಾರ್ದತೆಯು ಹಿತವಾದ ಸಂಗೀತದಂತೆ ಇರಬೇಕು. ನಾವು ಸಂಯಮ ಕಳೆದುಕೊಂಡರೆ ಏಕಭಾವ ಮೂಡುವುದಿಲ್ಲ. ಎಲ್ಲರೂ ಒಂದೇ ಎನ್ನುವ ಸಮಭಾವವೇ ಸೌಹಾರ್ದತೆ' ಎಂದು ಪ್ರತಿಪಾದಿಸಿದರು.

'ದಯೆಯಿದ್ದಲ್ಲಿ ಧರ್ಮವಿರುತ್ತದೆ. ಆಶ್ರಯ ಅರಸಿ ಬಂದ ಹಕ್ಕಿಯನ್ನು ರಕ್ಷಿಸಲು ತನ್ನನ್ನೇ ಅರ್ಪಿಸಿಕೊಂಡ ಶಿಬಿ ಚಕ್ರವರ್ತಿಯ ತ್ಯಾಗ, ದಯೆ ನಮಗೆ ಬರಬೇಕು. ಈ ತ್ಯಾಗ, ಕರುಣೆ, ದಯೆಯಲ್ಲಿಯೇ ಸೌಹಾರ್ದವಿದೆ' ಎಂದು ವಿಶ್ಲೇಷಿಸಿದರು.

'ಸಮಾಜವು ದೇಶಕ್ಕೆ ನಿಷ್ಠೆಯಾಗಿದ್ದರೆ, ಅಭಿವೃದ್ಧಿ ತಂತಾನೆ ಆಗುತ್ತದೆ. ವಿಶ್ವಾತ್ಮಕವಾಗಿ ನೋಡಬೇಕು. ಧರ್ಮವಿದ್ದಲ್ಲಿ ಸಂತೋಷ, ಸಮೃದ್ಧಿ ಇರುತ್ತದೆ. ಅದು ದುಃಖವನ್ನು ನೀಡುವುದಿಲ್ಲ' ಎಂದರು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸತ್ಯಸಾಯಿ ಆಶ್ರಮದ ಮಧುಸೂದನ ಸಾಯಿ ಅವರ 14ನೇ ಉಪನ್ಯಾಸದ 'ಆತ್ಮಾನೊ ಮೋಕ್ಷಂ ಜಗತ್ ಹಿತಾಯಚ' ಕೃತಿಯನ್ನು ಬಿಡುಗಡೆ ಮಾಡಿದರು.

ಗಾಯಕಿಯರಾದ ಕೆ.ಜಿ.ವಿನುತಾ, ಅಮೂಲ್ಯ ಅವರು ಪುರುಷೋತ್ತಮ್, ಎಸ್.ನಾಗರಾಜ್ ಅವರ ಪಕ್ಕಾವಾದ್ಯದ ಸಾಂಗತ್ಯದಲ್ಲಿ ವಚನಗಳನ್ನು ಹಾಡಿದರು.

ಜೆಎಸ್ಎಸ್ ಉನ್ನತ ಶಿಕ್ಷಣ ಸಂಶೋಧನಾ ಅಕಾಡೆಮಿಯ ಪ್ರೊ ಚಾನ್ಸಲರ್ ಪ್ರೊ.ಬಿ.ಸುರೇಶ್ ಸ್ವಾಗತಿಸಿದರು. ಜೆಎಸ್ಎಸ್ ಕಾನೂನು ಕಾಲೇಜಿನ ಕಾರ್ಯಕಾರಿ ಮುಖ್ಯಸ್ಥ ಪ್ರೊ.ಕೆ.ಎಸ್.ಸುರೇಶ್ ಉಪನ್ಯಾಸದ ನಂತರ ಸಂವಾದ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.