ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟ್ಟ ವ್ಯವಸ್ಥೆ: ಕವಿತೆಯಿಂದ ಜಾಗೃತಿ

‘ಮೌನಗೀತೆ’ ಕವನಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಹಿತಿ ಶ್ರೀಧರ್‌
Last Updated 4 ಡಿಸೆಂಬರ್ 2022, 14:09 IST
ಅಕ್ಷರ ಗಾತ್ರ

ಮೈಸೂರು: ‘ಜಗತ್ತು ಎಲ್ಲವೂ ಇದ್ದು ಬೆತ್ತಲಾಗಿದೆ. ಮಾನವೀಯತೆ ಸತ್ತಿದೆ. ಇಂತಹ ಸಮಾಜದಲ್ಲಿನ ವ್ಯವಸ್ಥೆಯನ್ನು ಕವಿತೆಗಳ ಮೂಲಕ ಜಾಗೃತಿಗೊಳಿಸಲಾಗಿದೆ’ ಎಂದು ಸಾಹಿತಿ ಶ್ರೀಧರ್‌ ಹೇಳಿದರು.

ನಗರದ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಭಾನುವಾರ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಸುಹಾಸ ಎಂ. ವಿರಚಿತ ‘ಮೌನಗೀತೆ’ ಕವನಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಲೇಖಕರು ಕವನ ಸಂಕಲನ ಮೂಲಕ ತಮ್ಮ ಆಶೋತ್ತರಗಳನ್ನುಮೌನವಾಗಿ ಹೇಳಿಕೊಂಡಿದ್ದಾರೆ. ಆದರೆ, ಕೃತಿಯಲ್ಲಿರುವ 91 ಕವಿತೆಗಳಲ್ಲಿ ಮಾತನಾಡಿದ್ದಾರೆ. ಏನನ್ನು ಹೇಳಲು ಸಾಧ್ಯವಿಲ್ಲವೋ ಅದನ್ನು ಕೃತಿಯಲ್ಲಿ ಹೇಳುವ ಮೂಲಕ ಸಾಹಿತ್ಯಕ್ಕೆ ಇರುವ ಶಕ್ತಿ ತೋರಿಸಿದ್ದಾರೆ’ ಎಂದರು.

‘ನಾಡು–ನುಡಿ, ಊರು–ಕೇರಿ, ಬದುಕು–ಬವಣೆ, ಸುತ್ತಮುತ್ತಲಿನ ಮನಸ್ಥಿತಿ, ಚಿಂತಕ, ಪ್ರಸಕ್ತ ಸಮಾಜದಲ್ಲಿ ಅನುಭವಿಸುತ್ತಿರುವ ನೋವು–ನಲಿವು, ಜಾತಿ ರಹಿತ ನಿರ್ಮಾಣದ ಆಶೋತ್ತರಗಳನ್ನು ಪ್ರಸ್ತುತ್ತಪಡಿಸಿರುವುದು ವಿಶೇಷವಾಗಿದೆ’ ಎಂದು ಹೇಳಿದರು.

‘ಅತೀ ತೂಕ ಹಾಗೂ ಬೆಲೆಬಾಳುವಂಥದ್ದು ಇದ್ದರೆ ಅದು ಮೌನ. ಯಾವುದು ಹೇಳಲು ಸಾಧ್ಯವಿಲ್ಲವೋ, ಅದರ ಹಿಂದೆ ಮೌನ ಅಡಗಿರುತ್ತದೆ. ಮೌನಿಗಳೆಲ್ಲರೂ ಜ್ಞಾನಿಗಳಾಗಿರುತ್ತಾರೆ. ಅವರು ಮಾತನಾಡುವುದಿಲ್ಲ; ಅವರ ವ್ಯಕ್ತಿತ್ವ, ಸಂದೇಶ, ವಿಚಾರ ಮಾತನಾಡುತ್ತವೆ’ ಎಂದು ತಿಳಿಸಿದರು.

ಸಿರಿಗನ್ನಡ ವೇದಿಕೆ ರಾಜ್ಯ ಸಮಿತಿ ನಿಕಟಪೂರ್ವ ರಾಜ್ಯಾಧ್ಯಕ್ಷೆ ಎ.ಹೇಮಗಂಗಾ ಮಾತನಾಡಿ, ‘ಕಲಿಕೆಗೆ ಕೊನೆಯಿಲ್ಲ. ಇದೊಂದು ನಿರಂತರ ಪ್ರಕ್ರಿಯೆವಾಗಿದೆ.ಸಾಧನೆಗೆ ವಯಸ್ಸಿನ ಮಿತಿಯಿಲ್ಲ. ಅಸಾಧ್ಯವಾದದ್ದು ಯಾವುದು ಇಲ್ಲ. ಉನ್ನತಿಗೆ ಸಮಯ ಪರಿಪಾಲನೆ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಇದನ್ನು ಅಳವಡಿಸಿಕೊಳ್ಳಬೇಕು’ ಎಂದುಹೇಳಿದರು.

ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಎಂ.ಬಿ.ಸಂತೋಷ್, ಶಿಕ್ಷಕ ಮೊಹಮದ್‌ ಜಾಫರ್, ರಾಜು ಆಡ್ಯ, ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷೆ ಎಸ್.ಸಿ.ಮಮತಾ, ಪ್ರಧಾನ ಕಾರ್ಯದರ್ಶಿ ಶೋಭಾ ಬಿ., ಯುವ ಬರಹಗಾರ ಕನ್ನಾಯಕನಹಳ್ಳಿಎಂ.ಸುಹಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT