ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿ ಪಡಿಸಿದ ಹಾಗೂ ಅನುಮೋದಿಸಿದ 240 ಬಡಾವಣೆಗಳನ್ನು ಶುಕ್ರವಾರ ಸ್ಥಳೀಯ ಸಂಸ್ಥೆಗಳಾದ ಪಾಲಿಕೆ, ನಗರಸಭೆ, ತಾಲ್ಲೂಕು ಪಂಚಾಯಿತಿ ಸುಪರ್ದಿಗೆ ನೀಡಲಾಯಿತು.

ಮುಡಾ ಕಚೇರಿಯಲ್ಲಿ ಕಾರ್ಯದರ್ಶಿ ಪ್ರಸನ್ನ ಕುಮಾರ್ ಅವರು ವಸತಿ ಬಡಾವಣೆಗಳ ದಾಖಲೆಗಳನ್ನು ಪಾಲಿಕೆ ಆಯುಕ್ತ, ಹೂಟಗಳ್ಳಿ ನಗರಸಭೆ, ಶ್ರೀರಾಮಪುರ, ರಮ್ಮನಹಳ್ಳಿ ಹಾಗೂ ಬೋಗಾದಿಯ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಈಚೆಗೆ ನಡೆದ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಭೆಯಲ್ಲಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಸುಮಾರು 940 ಬಡಾವಣೆಗಳಲ್ಲಿ 15 ಸಾವಿರ ನಿವೇಶನಗಳುಳ್ಳ 240 ಬಡಾವಣೆಗಳನ್ನಷ್ಟೇ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲು ತೀರ್ಮಾನಿಸಲಾಗಿತ್ತು. ಉಳಿದ 700 ಬಡಾವಣೆಗಳು ಇದ್ದು, ಇವುಗಳನ್ನು ಹಂತಹಂತವಾಗಿ ಸುಪರ್ದಿಗೆ ನೀಡಲು ನಿರ್ಧರಿಸಲಾಗಿದೆ.

ಮುಡಾ ಆಯುಕ್ತ ಎ.ಎನ್.ರಘುನಂದನ್ ಮಾತನಾಡಿ, ‘ಹಸ್ತಾಂತರದಿಂದ ಇಷ್ಟು ದಿನ ಮುಡಾ ತನ್ನ ವ್ಯಾಪ್ತಿಯಲ್ಲಿ ರಚನೆ ಆಗುವ ಬಡಾವಣೆ ನಿವೇಶನಗಳ ಖಾತೆ, ಕಂದಾಯ ಸ್ವೀಕಾರದಂಥ ಸೇವೆ ಆಯಾ ಸ್ಥಳೀಯ ಸಂಸ್ಥೆಗಳೇ ನಿರ್ವಹಿಸಲಿವೆ. ಕೇವಲ ಬಡಾವಣೆ ನಕ್ಷೆ ಅನುಮೋದನೆಗೆ ಮುಡಾ ಸೀಮಿತ ಆಗಲಿದೆ’ ಎಂದರು.

ಎಷ್ಟು ಹಸ್ತಾಂತರ?: ಮೈಸೂರು ಮಹಾನಗರ ಪಾಲಿಕೆಗೆ 7 ಬಡಾವಣೆಗಳಲ್ಲಿನ 394 ನಿವೇಶನಗಳು, ಹೂಟಗಳ್ಳಿ ನಗರಸಭೆಗೆ 6 ಬಡಾವಣೆಗಳ 119, ಶ್ರೀರಾಂಪುರ ಪಟ್ಟಣ ಪಂಚಾಯಿತಿಗೆ 20 ಬಡಾವಣೆಗಳ 1,059, ಕಡಕೊಳ ಪ.ಪಂ.ಗೆ 18 ಬಡಾವಣೆಗಳ 1,412, ರಮ್ಮನಹಳ್ಳಿ ಪ.ಪಂ.ಗೆ 22 ಬಡಾವಣೆಗಳ 783, ಬೋಗಾದಿ ಪ.ಪಂ.ಗೆ 30 ಬಡಾವಣೆಗಳ 2,169 ನಿವೇಶನಗಳು ಹಸ್ತಾಂತರ ಆಗುವ ಪ್ರಕ್ರಿಯೆ ನಡೆದಿದೆ.

ಇದಲ್ಲದೇ ವರುಣ ಗ್ರಾಮ ಪಂಚಾಯಿತಿಗೆ 12 ಬಡಾವಣೆಗಳ 1,400, ಮೊಸಂಬಾಯನಹಳ್ಳಿ ಗ್ರಾ.ಪಂ.ಗೆ 7 ಬಡಾವಣೆಗಳ 1,645, ನಾಗನಹಳ್ಳಿ ಗ್ರಾ.ಪಂ.ಗೆ 4 ಬಡಾವಣೆಗಳ 283, ಸಿಂಧುವಳ್ಳಿ ಗ್ರಾ.ಪಂ.ಗೆ 8 ಬಡಾವಣೆಗಳ 335 ನಿವೇಶನಗಳು ಹಸ್ತಾಂತರ ಆಗಲಿವೆ. ಉದ್ಬೂರು ಗ್ರಾ.ಪಂ.ಗೆ 1 ಬಡಾವಣೆಯ 105, ಧನಗಳ್ಳಿ ಗ್ರಾ.ಪಂ.ಗೆ 11 ಬಡಾವಣೆಯ 1,050, ಬೀರಿಹುಂಡಿ ಗ್ರಾ.ಪಂ.ಗೆ 5 ಬಡಾವಣೆಗಳ 398, ಇಲವಾಲ ಗ್ರಾ.ಪಂ.ಗೆ 15 ಬಡಾವಣೆಗಳ 1573, ಆಲನಹಳ್ಳಿ ಗ್ರಾ.ಪಂ.ಗೆ 2 ಬಡಾವಣೆಯ 76, ಹುಲಿಕೆರೆ ಗ್ರಾ.ಪಂ.ಗೆ 7 ಬಡಾವಣೆಯ 1220, ಗೋಪಾಲಪುರ ಗ್ರಾ.ಪಂ.ಗೆ 2 ಬಡಾವಣೆಯ 80, ನಾಗವಾಲ ಗ್ರಾ.ಪಂ.ಗೆ 2 ಬಡಾವಣೆಯ 69 ನಿವೇಶನಗಳು ಮುಡಾದಿಂದ ಹಸ್ತಾಂತರ ಆಗುತ್ತಿವೆ.

ಹಂತ ಹಂತವಾಗಿ ಉಳಿದ ಬಡಾವಣೆ ಹಸ್ತಾಂತರ ಲಕ್ಷ್ಮಿಕಾಂತರೆಡ್ಡಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಇಂದು ತೀರ್ಮಾನ ನಕ್ಷೆ ಅನುಮೋದನೆ ಹೊರತು ಪಡಿಸಿ ಉಳಿದ ಸೇವೆ ಲಭ್ಯ?

ಜಿಲ್ಲಾಧಿಕಾರಿ ಸಭೆ

ಮುಡಾ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ ಅಧ್ಯಕ್ಷತೆಯಲ್ಲಿ ಶನಿವಾರ 700 ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸುವ ಬಗ್ಗೆ ಸಭೆ ನಡೆಸಲಿದ್ದಾರೆ. ನ.7ರಂದು ಈ ಹಿಂದೆ ಸಭೆ ನಡೆದಿತ್ತು. ಬಡಾವಣೆ ಯೋಜನಾ ನಕ್ಷೆ ಅನುಮೋದನೆಯ ಹಕ್ಕನ್ನು ಮುಡಾಕ್ಕೆ ಉಳಿಸುವ ಬಗ್ಗೆಯೂ ತೀರ್ಮಾನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.