ತಿ.ನರಸೀಪುರ : ತಾಲ್ಲೂಕಿನ ತಲಕಾಡು ಹೋಬಳಿಯ ಪ್ರಸಿದ್ಧ ಸೋಮಶೈಲ ಖ್ಯಾತಿಯ ಮುಡುಕುತೊರೆಯ ಶ್ರೀ ಭ್ರಮರಾಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿಯ ಪರ್ವತ ಪರಿಷೆ (ಬಟ್ಟಲು ಪೂಜೆ) ಅಂಗವಾಗಿ ಶುಕ್ರವಾರ ಸಹಸ್ರಾರು ಭಕ್ತರು ಮುಡುಕುತೊರೆ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಮೈಸೂರು ಚಾಮರಾಜನಗರ, ಮಂಡ್ಯ ಹಾಗೂ ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.ಬಟ್ಟಲು ಪೂಜೆಯ ವಿಶೇಷ ಹಿನ್ನೆಲೆ : ಪಾರ್ವತಿ ದೇವಿ ಅಮ್ಮನವರು ತವರು ಮನೆಯಾದ ಶ್ರೀಶೈಲ ಪರ್ವತದಿಂದ ಗಂಡನ ಮನೆಯಾದ ಮುಡುಕುತೊರೆಯ ಮಲ್ಲಿಕಾರ್ಜುನ ಸ್ವಾಮಿಯ ಗಿರಿಗೆ ಆಗಮಿಸುತ್ತಾರೆ ಎಂಬ ಶುಭ ಸಂದರ್ಭವೇ ಈ ಪೂಜೆ ಇದಾಗಿದೆ. ಬಟ್ಟಲು ಪೂಜೆಯ ವೇಳೆ ಮುತ್ತೈದೆಯರಿಗೆ ಅರಿಸಿನ, ಕುಂಕುಮ, ಬಾಗಿನ ಹಾಗೂ ಮಡಿಲಕ್ಕಿ ಸಮರ್ಪಿಸಲಾಗುತ್ತದೆ.

ಪರ್ವತ ಪರಿಷೆಗೆ ಆಗಮಿಸಿದ ಮುತ್ತೈದೆಯರು ಅರಿಶಿನ-ಕುಂಕುಮ ಬಾಗಿನ ನೀಡಿದರು. ಈ ಪೂಜೆಯಿಂದ ಮುತ್ತೈದೆಯರಿಗೆ ಸೌಭಾಗ್ಯ, ಸನ್ಮಂಗಳ ದೊರೆಯುತ್ತದೆ ಎಂಬ ನಂಬಿಕೆ ಇದೆ. ಕಾವೇರಿ ತೀರದಲ್ಲಿ ಬಟ್ಟಲು ಪೂಜೆ ಸಲ್ಲಿಸಿದ ಬಳಿಕ ಭಕ್ತರು ಬೆಟ್ಟಕ್ಕೆ ತೆರಳಿ ಸರದಿ ಸಾಲಿನಲ್ಲಿ ನಿಂತು ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದರು

ಗುರುವಾರವೇ ಮುಡುಕುತೊರೆಗೆಬಂದಿದ್ದ ಹಲವು ಭಕ್ತರು ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರಿಗೆ ಅಲ್ಲಲ್ಲಿ ನೀರು, ಮಜ್ಜಿಗೆ, ಪಾನಕ, ಕೋಸಂಬರಿ ಪ್ರಸಾದ ವಿತರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-38-15012746

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.