ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು:ಉದ್ಯಮಿಗಳ 5 ಕಿ.ಮೀ ನಡಿಗೆ

Last Updated 20 ಅಕ್ಟೋಬರ್ 2022, 7:23 IST
ಅಕ್ಷರ ಗಾತ್ರ

ಮೈಸೂರು: ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಅಂಗಳದಲ್ಲಿ ಗುರುವಾರ ಬೆಳಿಗ್ಗೆ ನೂರಾರು ಮಂದಿ ಉದ್ಯಮಿಗಳು 5 ಕಿ.ಮೀ ನಡಿಗೆಯ 'ವಾಕಥಾನ್'ನಲ್ಲಿ ಪಾಲ್ಗೊಂಡರು.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) 'ಬಿಯಾಂಡ್ ಬೆಂಗಳೂರು' ಅಭಿಯಾನದಡಿ ನಡೆಯುತ್ತಿರುವ 'ಬಿಗ್ ಟೆಕ್ ಷೋ'ನ ಭಾಗವಾಗಿ ಬೆಳಿಗ್ಗೆ ಆಯೋಜಿಸಿದ್ದ 'ವಾಕಥಾನ್'ಗೆ ಐ.ಟಿ ಬಿ.ಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ ನೀಡಿದರು.

ನಡಿಗೆಗೂ ಮುನ್ನ ಆವರಣದಲ್ಲಿ ಯೋಗಾಭ್ಯಾಸ, ವ್ಯಾಯಾಮ ಮಾಡಿದ ಉದ್ಯಮಿಗಳು ನಂತರ ದೊಡ್ಡ ಗಡಿಯಾರ, ಗಾಂಧಿ ವೃತ್ತ, ಚಿಕ್ಕ ಗಡಿಯಾರ ವೃತ್ತ, ದೇವರಾಜ ಅರಸು ರಸ್ತೆ, ಜಿಲ್ಲಾಧಿಕಾರಿ ಕಚೇರಿ, ಕ್ರಾಫರ್ಡ್ ಭವನ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಅರಮನೆ ವರಾಹ ದ್ವಾರದವರೆಗೆ ಸಾಗಿದರು.

ಬ್ರಿಟಿಷ್ ಹೈಕಮಿಷನರ್ ಆಂಡ್ರ್ಯೂ ಫ್ಲೆಮಿಂಗ್,ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು, ಸಿಇಒ ಸಂಜೀವ್ ಗುಪ್ತಾ, ಮೈಸೂರು ಕ್ಲಸ್ಟರ್ ಐ.ಟಿ ಬಿ.ಟಿ ಇಲಾಖೆಯ ಇ.ವಿ.ರಮಣ ರೆಡ್ಡಿ, ನಿರ್ದೇಶಕರಾದ ಮೀನಾ ನಾಗರಾಜ್, ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಡಾ.ಅಜಯ್ ಗರ್ಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT