ಮೈಸೂರು: ‘ನಗರದಲ್ಲಿ ಮೂಲಸೌಕರ್ಯ ಉಪಕರ (ಮೋಟಾರ್ ವಾಹನ ಸೆಸ್) ವಿಧಿಸುವ ಪ್ರಕ್ರಿಯೆಯನ್ನು ಕೈಬಿಡಲಾಗಿದೆ’ ಎಂದು ಮಹಾನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ತಿಳಿಸಿದ್ದಾರೆ.

ಈ ಉಪಕರ ವಿಧಿಸುವುದಾಗಿ ಪ್ರಕಟಿಸಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ, ಆಕ್ಷೇಪ ಹಾಗೂ ಖಂಡನೆ ವ್ಯಕ್ತವಾಗಿತ್ತು. ಹೀಗಾಗಿ, ಪಾಲಿಕೆಯು ನಿರ್ಧಾರದಿಂದ ಹಿಂದೆ ಸರಿದಿದೆ.

ನಗರದ ರಸ್ತೆ ಸಂಚಾರ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಕರ್ನಾಟಕ ಮಹಾನಗರಪಾಲಿಕೆಗಳ ಅಧಿನಿಯಮ 1976ರ ಅಡಿ ಪ್ರತಿ ವಾಹನದ ಮೇಲೆ ವಾರ್ಷಿಕ ನಿರ್ದಿಷ್ಟ ಮೊತ್ತದ ಉಪಕರ ವಿಧಿಸಲು ಪಾಲಿಕೆಯ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಈ ಹಿಂದೆ ತೀರ್ಮಾನಿಸಲಾಗಿತ್ತು. ಇದರ ಅನ್ವಯ ದ್ವಿಚಕ್ರ ವಾಹನಗಳಿಗೆ ₹100, ತ್ರಿಚಕ್ರ ವಾಹನಗಳಿಗೆ ₹200 ಹಾಗೂ ನಾಲ್ಕುಚಕ್ರದ ವಾಹನಗಳಿಗೆ ₹500 ವಿಧಿಸಲು ನಿರ್ಧರಿಸಲಾಗಿತ್ತು. ಈ ಮೊತ್ತವನ್ನು 2026-27ನೇ ಸಾಲಿನ ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲು ನಿರ್ಧರಿಸಿ, ಮಾರ್ಚ್ 23ರಂದು ಸಾರ್ವಜನಿಕ ಪ್ರಕಟಣೆಯನ್ನೂ ಹೊರಡಿಸಲಾಗಿತ್ತು.

ಈ ಹೊಸ ತೆರಿಗೆ ಪದ್ಧತಿಯ ಕುರಿತು ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆಸ್ತಿ ತೆರಿಗೆಯೊಂದಿಗೆ ವಾಹನ ತೆರಿಗೆಯನ್ನು ಸೇರಿಸುವುದು ಅವೈಜ್ಞಾನಿಕ ಎಂಬ ದೂರುಗಳು ಕೇಳಿಬಂದಿದ್ದವು.

ಈ ಕಾರಣದಿಂದಾಗಿ, ಪ್ರಕ್ರಿಯೆಯ ಸಾಧಕ-ಬಾಧಕಗಳನ್ನು ಇನ್ನಷ್ಟು ಪರಿಶೀಲಿಸಿ ಜಾರಿಗೊಳಿಸಬೇಕಾಗಿದೆ. ಅಲ್ಲಿಯವರೆಗೆ ವಸೂಲಾತಿ ಪ್ರಕ್ರಿಕೆಯನ್ನು ಕೈಬಿಡಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಅವರ ಆಕ್ಷೇಪಣೆಗಳನ್ನು ಗೌರವಿಸಿ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.