ಮಂಗಳವಾರ, ನವೆಂಬರ್ 29, 2022
21 °C

ಮೈಸೂರು ದಸರಾ: ವಿದೇಶಗಳನ್ನು ಪರಿಚಯಿಸುವ ವಿಶ್ವಚಿತ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ದಸರಾ ಅಂಗವಾಗಿ ಸೆ.27ರಿಂದ ಹಮ್ಮಿಕೊಂಡಿರುವ ಚಲನಚಿತ್ರೋತ್ಸವದಲ್ಲಿ ‘ವಿಶ್ವ ಚಿತ್ರ’ಗಳ ವಿಭಾಗದಲ್ಲಿ ವಿಶೇಷ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

ಚಿತ್ರ ರಸಿಕರಿಗೆ ವಿವಿಧ ಭಾಷೆಯ ಸದಭಿರುಚಿಯ ಸಿನಿಮಾಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಬೇರೆ ಬೇರೆ ದೇಶಗಳಲ್ಲಿನ ಸ್ಥಿತಿಗತಿ–ಸಾಂಸ್ಕೃತಿಕ–ಸಾಮಾಜಿಕ ವೈವಿಧ್ಯವನ್ನು ಕಟ್ಟಿಕೊಡುತ್ತವೆ.

ವಿಶ್ವ ಚಿತ್ರಗಳು ಐನಾಕ್ಸ್‌ನಲ್ಲಿ (4) ಪ್ರದರ್ಶನಗೊಳ್ಳಲಿವೆ.

ಬೆಳಿಗ್ಗೆ 10.30:

‘ಬೈಸಿಕಲ್ ಥೀವ್ಸ್’: ಶ್ರಮಿಕನೊಬ್ಬನ ಸೈಕಲ್ ಕಳುವಾಗಿ ಕೆಲಸ ಹುಡುಕುವ ಆತನ ಪ್ರಯತ್ನಕ್ಕೂ ತೊಂದರೆಯಾಗುತ್ತದೆ. ಅವನು ತನ್ನ ಪುಟ್ಟ ಮಗನ ಜೊತೆ ಕಳೆದುಹೋದ ಸೈಕಲ್ ಹುಡುಕಲು ಹೊರಡುತ್ತಾನೆ. ಚಿತ್ರವು ಇಟಲಿಯಲ್ಲಿ ಆದ ಯುದ್ಧದ ನಂತರದ ದುರಂತವನ್ನು ತೆರೆದಿಡುತ್ತದೆ. ಇಟಲಿಯ ಸಿನಿಮಾ ಇದು.

ಮಧ್ಯಾಹ್ನ 1.30:

‘ಅನ್‌ಡೈನ್’: ಜರ್ಮನಿಯ ಚಿತ್ರವಿದು. ಸಮುದ್ರದ ಅಪ್ಸರೆಯ ಕತೆಯಲ್ಲಿ ಇತಿಹಾಸಕಾರ್ತಿ ಅನ್‌ಡೈನ್ ಸಿಕ್ಕಿ ಹಾಕಿಕೊಳ್ಳುತ್ತಾರೆ. ಆಕೆಯನ್ನು ಬಿಟ್ಟು ಹೋದ ಮೇಲೆ ಅವಳ ಪ್ರಿಯಕರನನ್ನು ಕೊಂದು ಮತ್ತೆ ನೀರಿಗೆ ಮರಳಬೇಕಾದ ಸಂದರ್ಭ ಎದುರಾಗುತ್ತದೆ. ಚಿತ್ರವು ಒಂದು ನಿಗೂಢ ಕಥಾನಕವಾಗಿದೆ.

ಸಂಜೆ 4.30:

‘ವೈಫ್ ಆಫ್ ಎ ಸ್ಪೈ’: ಜಪಾನಿನ ವ್ಯಾಪಾರಿ ಮಂಚೂರಿಯಾಗೆ ಹೋದಾಗ ಅಲ್ಲಿ ಬರ್ಬರ ಕೃತ್ಯವೊಂದನ್ನು ನೋಡುತ್ತಾನೆ. ಅವನ ನಂತರದ ಪ್ರತಿಕ್ರಿಯೆಗಳು ಅವನ ಹೆಂಡತಿಗೆ ಅನುಮಾನ, ಅಸೂಯೆ ಉಂಟು ಮಾಡಿ ಕಾನೂನಿನ ಸಮಸ್ಯೆಗಳಿಗೂ ಕಾರಣವಾಗುತ್ತವೆ. ಜಪಾನ್‌ನ ಚಿತ್ರವಿದು.

ಸಂಜೆ 7.30:

‘ಸ್ಪೆನ್ಸರ್’: ಜರ್ಮನಿಯ ಈ ಚಿತ್ರವು 1991ರ ಕ್ರಿಸ್‌ಮಸ್ ಸಮಯದಲ್ಲಿ ರಾಜಕುಮಾರಿ ಡಯಾನಾ ಅನುಭವಿಸುವ ಖಿನ್ನತೆ ಮತ್ತು ರಾಜಕುಮಾರ ಚಾರ್ಲ್ಸ್ ಜೊತೆಗಿನ ವೈವಾಹಿಕ ಸಂಬಂದ ಕಡಿದುಕೊಂಡು ಬ್ರಿಟಿಷ್ ರಾಜಮನೆತನವನ್ನು ತೊರೆಯುವ ಸನ್ನಾಹದಲ್ಲಿರುವ ಕಥಾನಕವಾಗಿದೆ.

***

ಚಲನಚಿತ್ರೋತ್ಸವದಲ್ಲಿ ಸೆ.27ರಂದು ಕನ್ನಡ ಚಿತ್ರಗಳು

ಡಿಆರ್‌ಸಿ

10.30;1.30;4.30;7.30

ಅವನೇ ಶ್ರೀಮನ್ನಾರಾಯಣ;ಅವತಾರ ಪುರುಷ;ಕವಲು ದಾರಿ;ಕೆಜಿಎಫ್‌–1

ಐನಾಕ್ಸ್‌

10.30;1.30;4.30;7.30

100;ಆಂಗರ್;ಇಂಡಿಯಾ ವರ್ಸಸ್ ಇಂಗ್ಲೆಂಡ್;ಪೈಲ್ವಾನ್‌

ಭಾರತೀಯ ಚಿತ್ರಗಳು

ಐನಾಕ್ಸ್‌

10.30;1.30;4.30;7.30

ಐಸೇ ಹೀ;ದೊಡ್ಡಹಟ್ಟಿ ಬೋರೇಗೌಡ;ಇ–ಮಣ್ಣು;ಅಡಿಯು ಗೊಡಾರ್ಡ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು