ಮೈಸೂರು: ‘ದಸರಾ ಜಂಬೂಸವಾರಿ ಹಾಗೂ ಪಂಚಿನ ಕವಾಯತು ಟಿಕೆಟ್ ಖರೀದಿಗೆ ಸೆ.26ರಿಂದ 30ರವರೆಗೆ ಆನ್ಲೈನ್ ಮೂಲಕ ಅವಕಾಶವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದಸರಾ ಜಾಲತಾಣ (https://www.mysoredasara.gov.in/)ನಲ್ಲಿ ಟಿಕೆಟ್ ಪಡೆಯಬಹುದು. ನಿತ್ಯ ಸಾವಿರ ಟಿಕೆಟ್ ಬಿಡುಗಡೆ ಮಾಡಲಾಗುವುದು. ಗೋಲ್ಡ್ ಕಾರ್ಡ್ಗೆ ₹6,500 ನಿಗದಿಪಡಿಸಲಾಗಿದೆ. ಅದನ್ನು ಖರೀದಿಸಿದ ವ್ಯಕ್ತಿ ಜಂಬೂಸವಾರಿ, ಪಂಜಿನ ಕವಾಯತು, ಮೃಗಾಲಯ, ಚಾಮುಂಡಿ ಬೆಟ್ಟ ಹಾಗೂ ಅರಮನೆಗೆ ಪ್ರವೇಶ ಪಡೆಯಬಹುದು’ ಎಂದರು.

‘ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಣೆ ಟಿಕೆಟ್ಗೆ ₹3,500 ಹಾಗೂ ಪಂಜಿನ ಕವಾಯತುಗೆ ₹1 ಸಾವಿರ ನಿಗದಿಪಡಿಸಲಾಗಿದೆ. ಟಿಕೆಟ್ ಬಿಡುಗಡೆಯಾದ ನಂತರ ಜನರ ಪ್ರತಿಕ್ರಿಯೆ ಗಮನಿಸಿ ಸೀಟುಗಳ ಸಂಖ್ಯೆ ಹೆಚ್ಚಿಸುತ್ತೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.