ಮೈಸೂರು: ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ 2026–27ನೇ ಸಾಲಿನ ಅಂದಾಜು ₹ 71.45 ಕೋಟಿ ಕೊರತೆ ಬಜೆಟ್ಗೆ ಅನುಮೋದನೆ ನೀಡಲಾಯಿತು.

ಕ್ರಾಫರ್ಡ್ ಭವನದಲ್ಲಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಶಿಕ್ಷಣ ಮಂಡಳಿಯ ವಿಶೇಷ ಸಭೆಯಲ್ಲಿ ಪ್ರಭಾರ ಹಣಕಾಸು ಅಧಿಕಾರಿ ಪ್ರೊ.ಮಂಜುನಾಥ್ ಬಜೆಟ್ ಮಂಡಿಸಿದರು.

‘ಅಂದಾಜು ₹ 384.28 ಕೋಟಿ ಆದಾಯ (ದತ್ತಿ ನಿಧಿ ಹೊರತುಪಡಿಸಿ) ನಿರೀಕ್ಷಿಸಲಾಗಿದೆ. ₹ 438 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 2026–27ನೇ ಸಾಲಿನಲ್ಲಿ ವಿವಿಯಿಂದ ನಿವೃತ್ತರಾಗುವ ನೌಕರರ ಪಿಂಚಣಿಗಾಗಿ ₹ 171.45 ಕೋಟಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸರ್ಕಾರವು ₹ 100 ಕೋಟಿ ಬಿಡುಗಡೆ ಮಾಡಿದೆ. ಇದರಿಂದಾಗಿ ಪಿಂಚಣಿ ಸೌಲಭ್ಯಗಳಿಗಾಗಿ ₹ 71.45 ಕೋಟಿ ಕೊರತೆ ಎದುರಿಸುವಂತಾಗಿದೆ’ ಎಂದು ಹೇಳಿದರು.

ನಿರೀಕ್ಷೆ, ವೆಚ್ಚ:

‘ರಾಜ್ಯ ಸರ್ಕಾರದಿಂದ ಕಾಯಂ ಸಿಬ್ಬಂದಿ ವೇತನ ಹಾಗೂ ಪಿಂಚಣಿಗೆ ₹ 222.48 ಕೋಟಿ ಮಂಜೂರಾಗಿದೆ. ಅಭಿವೃದ್ಧಿ ಅನುದಾನ ₹ 10 ಕೋಟಿ, ಪರಿಶಿಷ್ಟ ಜಾತಿ ಹಾಗೂ ವರ್ಗದ ವಿದ್ಯಾರ್ಥಿಗಳಿಗೆ ₹ 6 ಕೋಟಿ ಅನುದಾನ ಮಂಜೂರಾತಿಯನ್ನು ರಾಜ್ಯ ಸರ್ಕಾರದಿಂದ ನಿರೀಕ್ಷಿಸಿ, ಒಟ್ಟು ₹ 238.57 ಕೋಟಿ ಆದಾಯವಾಗಿ ಪರಿಗಣಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘111ನೇ ವಸಂತಕ್ಕೆ ಕಾಲಿಡುತ್ತಿರುವ ವಿ.ವಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾಯಂ ಉದ್ಯೋಗಿಗಳ (ಬೋಧಕ–200 ಹಾಗೂ ಬೋಧಕೇತರ 400) ವೇತನಕ್ಕಾಗಿ ₹ 122.48 ಕೋಟಿ ನಿಗದಿಪಡಿಸಲಾಗಿದೆ. ಇದನ್ನು ಎಚ್ಆರ್ಎಂಎಸ್ ಪೋರ್ಟಲ್ ಮೂಲಕ ನೌಕರರಿಗೆ ನೇರವಾಗಿ ‘ಕೆ–2’ ಖಾತೆಯಿಂದ ಜಮಾ ಮಾಡಲಾಗುತ್ತಿದೆ. ಪ್ರಸ್ತುತ 1,864 ಪಿಂಚಣಿ/ಕುಟುಂಬ ಪಿಂಚಣಿದಾರರು ಮಾಸಿಕ ಪಿಂಚಣಿ ಪಡೆಯುತ್ತಿದ್ದಾರೆ. 2026–27ನೇ ಸಾಲಿಗೆ ಪಿಂಚಣಿದಾರರ ಸಂಖ್ಯೆ 1,906 ಆಗಲಿದ್ದು, ಪ್ರಸ್ತುತ ಸಾಲಿನಲ್ಲಿ 42 ಉದ್ಯೋಗಿಗಳು (18 ಬೋಧಕರು, 24 ಬೋಧಕೇತರರು) ನಿವೃತ್ತರಾಗುತ್ತಿದ್ದಾರೆ. ಹೀಗಾಗಿ, ಪಿಂಚಣಿಗಾಗಿ ₹ 171.45 ಕೋಟಿ ನಿಗದಿಪಡಿಸಲಾಗಿದೆ. ಸರ್ಕಾರದಿಂದ ₹ 100 ಕೋಟಿ ಬರುವುದರಿಂದಾಗಿ ₹ 71.45 ಕೋಟಿ ಕೊರತೆ ಎದುರಿಸುವಂತಾಗಿದೆ’ ಎಂದು ವಿವರಿಸಿದರು.

ಆಂತರಿಕ ಸಂಪನ್ಮೂಲ:

‘ಪ್ರವೇಶ, ನೋಂದಣಿ, ಸಂಯೋಜನೆ, ಪರೀಕ್ಷಾ ಚಟುವಟಿಕೆಗಳು ಮೊದಲಾದ ಶುಲ್ಕಗಳಿಂದ, ವಿಶ್ವವಿದ್ಯಾಲಯದ ವಿವಿಧ ಆಸ್ತಿಗಳಿಂದ ಹಾಗೂ ಇತರ ಮೂಲಗಳಿಂದ ಒಟ್ಟು ₹ 108.75 ಕೋಟಿ ಆಂತರಿಕ ಆದಾಯ ನಿರೀಕ್ಷಿಸಲಾಗಿದೆ. ಇದರಿಂದ ವೇತನ ಭತ್ಯೆಗಳು, ಸಾಮಾನ್ಯ ಆಡಳಿತ ವೆಚ್ಚಗಳು ಹಾಗೂ ಇನ್ನುಳಿದ ನಿರೀಕ್ಷಿತ ಯೋಜನೇತರ ವೆಚ್ಚಗಳನ್ನು ಪರಿಗಣಿಸಿ ₹ 108.54 ಕೋಟಿಗೆ ಬಜೆಟ್ನಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ‘ರಾಜ್ಯ ಸರ್ಕಾರವು ಕಷ್ಟದ ಸನ್ನಿವೇಶದಲ್ಲಿ ನಮ್ಮ ಕೈಹಿಡಿದಿದೆ. ಹೋದ ವರ್ಷ ಪಿಂಚಣಿಗಾಗಿ ಹೆಚ್ಚುವರಿಯಾಗಿ ₹ 25 ಕೋಟಿ ಸೇರಿದಂತೆ ಒಟ್ಟು ₹ 75 ಕೋಟಿ ಒದಗಿಸಿತ್ತು. ಈ ಬಾರಿ ₹ 100 ಕೋಟಿ ಕೊಟ್ಟಿರುವುದರಿಂದ ಬಹಳ ಅನುಕೂಲ ಆಗಲಿದೆ. ಇದಕ್ಕಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕು’ ಎಂದರು.

‘ದೈನಂದಿನ ಖರ್ಚುಗಳಿಗೆ ಕಡಿವಾಣ ಹಾಕಲಾಗುತ್ತಿದೆ. ಆದರೂ ಪಿಂಚಣಿಗೆ ತೊಂದರೆ ಇದ್ದೇ ಇದೆ. ಸದ್ಯ ನಮ್ಮಲ್ಲಿ ಆದಾಯ ಹೆಚ್ಚಿಸುವಂತಹ ಕೋರ್ಸ್ಗಳಿಲ್ಲ. ಡಿಸೆಂಬರ್ ನಂತರ, ಪ್ರಸ್ತಾವದೊಂದಿಗೆ ಬಂದರೆ ಮತ್ತಷ್ಟು ಸಹಾಯ ಮಾಡುವುದಾಗಿ ಸರ್ಕಾರ ಹೇಳಿದೆ. ಹೀಗಾಗಿ, ಈ ಸಾಲಿನಲ್ಲಿ ಪಿಂಚಣಿ ಸರಿದೂಗಿಸಬಹುದಾಗಿದೆ’ ಎಂದು ಹೇಳಿದರು.

₹ 100 ಕೋಟಿ ನೀಡಿದ್ದಕ್ಕಾಗಿ ಸರ್ಕಾರಕ್ಕೆ ಅಭಿನಂದನಾ ನಿರ್ಣಯವನ್ನು ಸಭೆ ಕೈಗೊಂಡಿತು.

ಜನಪ್ರತಿನಿಧಿಗಳ ಗೈರು:

ಡಾ.ಬಿ.ಆರ್. ಅಂಬೇಡ್ಕರ್ ಕೇಂದ್ರದ ಪ್ರೊ.ಜೆ. ಸೋಮಶೇಖರ್ ಮಾತನಾಡಿ, ‘ಜನಪ್ರತಿನಿಧಿಗಳು ಪಾಲ್ಗೊಳ್ಳಬೇಕಿತ್ತು. ಆಗ, ಅವರಿಗೆ ಇಲ್ಲಿನ ಆರ್ಥಿಕ ಸ್ಥಿತಿ ಗೊತ್ತಾಗುತ್ತಿತ್ತು’ ಎಂದರು.

‘ಅಧಿವೇಶನದ ಕಾರಣದಿಂದ ಅವರು ಬಂದಿಲ್ಲ. ಹೊಸ ಆರ್ಥಿಕ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದಾಗಿ ನಾವು ಬಜೆಟ್ ಮಂಡಿಸಿದ್ದೇವೆ’ ಎಂದು ಕುಲಪತಿ ತಿಳಿಸಿದರು.

‘ಆರ್ಥಿಕ ಶಿಸ್ತು ಇಲ್ಲದಿದ್ದರಿಂದಾಗಿ ಸಮಸ್ಯೆ ಆಗುತ್ತಿದೆ. ಶತಮಾನದ ಇತಿಹಾಸವುಳ್ಳ ವಿವಿಯಲ್ಲಿ ವಿತ್ತೀಯಶಿಸ್ತಿನ ಮಾದರಿ ಇರಬೇಕಾಗಿತ್ತು. ಆದರೆ, ಮೂಗಿಗಿಂತ ಮೂಗುತಿ ಭಾರ ಎನ್ನುವಂತಾಗಿದೆ’ ಎಂದು ಸೋಮಶೇಖರ್ ಹೇಳಿದರು.

ಕುಲಸಚಿವರಾದ ಎಂ.ಕೆ. ಸವಿತಾ ಹಾಗೂ ಪ್ರೊ.ನಾಗರಾಜ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.