ಮೈಸೂರು: ‘ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ. ಸವಿತಾ ಸಲಹೆ ನೀಡಿದರು.

ಇಲ್ಲಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಿಂದ ಇಲ್ಲಿನ ಓವೆಲ್ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಆಥ್ಲೆಟಿಕ್ಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳು ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತವೆ. ದೇಹವನ್ನು ಸದೃಢಗೊಳಿಸುವುದಲ್ಲದೆ, ಮನಸ್ಸನ್ನು ಶಾಂತವಾಗಿಡಲು ಸಹಾಯ ಮಾಡುತ್ತವೆ. ಸೋಲು–ಗೆಲುವನ್ನು ಸಮಾನವಾಗಿ ಒಪ್ಪಿಕೊಳ್ಳುವ ಮನೋಭಾವವನ್ನೂ ಬೆಳೆಸುತ್ತವೆ. ತಂಡ ಸ್ಫೂರ್ತಿ, ಸಹಕಾರ ಮತ್ತು ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿವೆ’ ಎಂದರು.

ನಿವೃತ್ತ ಕೋಚ್ ಪ್ರಭಾಕರ್ ಜಿ.ಆರ್. ಮಾತನಾಡಿ, ‘ಇಡೀ ದಿನ ಲವಲವಿಕೆಯಿಂದ ಇರಲು ಬೆಳಿಗ್ಗೆಯ ವೇಳೆ ಯಾವುದಾದರೊಂದು ಆಟದಲ್ಲಿ ತೊಡಗಬೇಕು. ನಿಯಮಿತವಾಗಿ ಅಭ್ಯಾಸ ಮಾಡಬೇಕು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಅಬ್ದುಲ್ ರಹಿಮಾನ್ ಎಂ. ಮಾತನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕಿ ಪ್ರತಿಮಾ ಕೆ.ಆರ್., ಐಕ್ಯೂಎಸಿ ಸಂಚಾಲಕ ನಂದಕುಮಾರ್ ವಿ., ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್., ಸಹಾಯಕ ಪ್ರಾಧ್ಯಾಪಕಿ ಚಂದ್ರಕಲಾ ಹಾಗೂ ಪ್ರಾಧ್ಯಾಪಕ ರವಿಶಂಕರ್ ಡಿ.ಕೆ. ಪಾಲ್ಗೊಂಡಿದ್ದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಫಲಿತಾಂಶ ಇಂತಿದೆ:

ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರು.

100 ಮೀ. ಓಟ: ಬಿಂದು, ಜರೀನಾ ಜೆ. ಸಿಂಚನಾ.

200 ಮೀ. ಓಟ: ಲಕ್ಷ್ಮಿ ಕೆ.ಎಸ್., ರಕ್ಷಿತಾ ಎಚ್.ಕೆ., ಪ್ರಕೃತಿ ಎಚ್.ಕೆ.

400 ಮೀ. ಓಟ: ಭುವನಾ, ಐಶ್ವರ್ಯಾ, ನಯನಾ.

800 ಮೀ. ಓಟ: ಲಕ್ಷ್ಮಿ ಕೆ.ಎಸ್., ಸಹನಾ ಎಸ್.ಪಿ., ಪೊನ್ನಮ್ಮ ಸಿ.ಎನ್.

4x100 ಓಟ: ಲಕ್ಷ್ಮಿ ಕೆ.ಎಸ್., ತೇಜಸ್ವಿನಿ ಎಚ್.ವಿ., ಅಫ್ರೀನಾ.

ಜಾವಲಿನ್ ಎಸೆತ: ಶಮಿತಾ, ಜರೀನಾ ಜೆ., ರಕ್ಷಿತಾ ಎಚ್.ಕೆ.

ಗುಂಡು ಎಸೆತ: ರಮ್ಯಾ ಡಿ., ಪೊನ್ನಮ್ಮ ಸಿ.ಎನ್., ಮಾಧುರಿ ಜಿ.

ತಟ್ಟೆ ಎಸೆತ: ಸಿಂಚನಾ ಎಂ.ಎಸ್., ರಮ್ಯಾ ಡಿ., ಸಾಕ್ಷಿ.

ಅಧ್ಯಾಪಕರ ವಿಭಾಗ:

100 ಮೀ. ಓಟ: ರವಿಶಂಕರ್ ಡಿ.ಕೆ., ಪರಶಿವಮೂರ್ತಿ, ಶ್ರೀನಿವಾಸ್.

200 ಮಿ. ಓಟ: ಪ್ರದೀಪ್ಕುಮಾರ್, ಶಶಿಕುಮಾರ್ ಎಸ್., ಕೆ.ಎಸ್. ರಘುನಂದನ್.

100 ಮೀ. ಓಟ: ಗೀತಾ ಡಿ., ವೀಣಾ ಎಂ., ಕವಿತಾ.ಕೆ.ಆರ್.

ಗುಂಡು ಎಸೆತ: ಸೋಮಶೇಖರ್ ಪಿ., ಲೋಕೆಶ್ ಟಿ.ವಿ., ಪ್ರದೀಪ್ ಕುಮಾರ್.

ಗುಂಡು ಎಸೆತ (ಮಹಿಳಾ ವಿಭಾಗ): ಗೀತಾ ಡಿ., ಶ್ಯಾಮಲಾ ಜಿ., ವಿದ್ಯಾ ಕೆ.

ಸಂಗೀತ ಕುರ್ಚಿ: ಗೀತಾ ಡಿ., ಕಾವೇರಿ, ಶ್ಯಾಮಲಾ ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.