ಮೈಸೂರು: ‘ಮೈಸೂರು ವಿಶ್ವವಿದ್ಯಾಲಯದಲ್ಲಿ ಕೆಲವೇ ಕೆಲವು ವಿಭಾಗಗಳಿಗೆ ಹಲವು ವರ್ಷಗಳಿಂದಲೂ ಪ್ರವೇಶಾತಿ ಕಡಿಮೆ ಇದೆ. ಆದರೆ, ಯಾವುದೇ ಕೋರ್ಸ್ ಅಥವಾ ವಿಭಾಗವನ್ನು ಮುಚ್ಚಿಲ್ಲ’ ಎಂದು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.

ಇಲ್ಲಿನ ಕ್ರಾಫರ್ಡ್ ಹಾಲ್ನಲ್ಲಿ ಗುರುವಾರ ನಡೆದ ಶಿಕ್ಷಣ ಮಂಡಳಿ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕೆಲವರು ಇಲ್ಲಸಲ್ಲದ ಹಾಗೂ ಮಾಹಿತಿ ಕೊರತೆಯಿಂದ ಆರೋಪಗಳನ್ನು ಮಾಡುತ್ತಿದ್ದಾರೆ. ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದವು’ ಎಂದು ಹೇಳಿದರು.

ಮೈಸೂರಿನ ಯುವರಾಜ ಕಾಲೇಜಿನ ಸ್ವಾಯತ್ತ ಸ್ಥಾನಮಾನ ಹಿಂಪಡೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಆ ಕಾಲೇಜಿನವರ ಕೋರಿಕೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಆ ಕಾಲೇಜಿನವರು ₹ 1.06 ಕೋಟಿ ಅನುದಾನಕ್ಕೆ ಮೂರು ವರ್ಷಗಳಾದರೂ ಬಳಕೆ ಪ್ರಮಾಣಪತ್ರ (ಯುಸಿ) ಸಲ್ಲಿಸಿಲ್ಲ. ಇದಕ್ಕೆ ಆಕ್ಷೇಪಣೆ ಇದೆ. ವಿಚಾರಣೆಯೂ ನಡೆಯಬೇಕಾಗಿದೆ. ಈ ನಡುವೆ, ಅಲ್ಲಿನ ಕ್ಲರ್ಕ್ ಹಾಗೂ ಎಸ್ಡಿಎ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2009ರಿಂದ 2025ರವರೆಗೆ ಆ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ಇರಲಿಲ್ಲ. ನಾನು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದಾಗಿ ಯುಜಿಸಿಯೊಂದಿಗೆ ವ್ಯವಹರಿಸಿ ಸ್ಥಾನಮಾನ ಕೊಡಿಸಿದ್ದೆ. ಆರ್ಥಿಕ ಅಶಿಸ್ತಿನ ಕಾರಣದಿಂದ ಎಲ್ಲವೂ ಸಮಸ್ಯೆಯಾಗಿದೆ’ ಎಂದು ಹೇಳಿದರು.

ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಪ್ರೊ.ಸಿ. ಗುರುಸಿದ್ದಯ್ಯ, ‘ಥಿಯರಿ ಜೊತೆಯಲ್ಲೇ ಲ್ಯಾಬ್ ಹಾಗೂ ಪ್ರಾಕ್ಟಿಕಲ್ ಪರೀಕ್ಷೆಯನ್ನೂ ಮುಗಿಸಬೇಕು. ಕೆಲವು ವಿಭಾಗಗಳಲ್ಲಿ ತಡವಾಗುವುದರಿಂದಾಗಿ, ಹಾಸ್ಟೆಲ್ನಲ್ಲಿ ಸೀಟು ಹಂಚಿಕೆಯಲ್ಲಿ ತೊಂದರೆ ಆಗುತ್ತಿದೆ’ ಎಂದು ತಿಳಿಸಿದರು.

ಹೀಗಾಗಿ, ಪರೀಕ್ಷೆಗೆ ಗಡುವು ನೀಡುವ ನಿರ್ಣಯವನ್ನು ಕೈಗೊಳ್ಳಲಾಯಿತು.

ಪೌರಕಾರ್ಮಿಕರಿಗೆ ಬೇಕಾಗುವ ಸ್ವಚ್ಛತಾ ಸಾಮಗ್ರಿಗಳನ್ನು ಒಮ್ಮೆಲೆ ಖರೀದಿಸಲು ನಿರ್ಣಯಿಸಲಾಯಿತು.

ಮಂಡಳಿಯ ಸದಸ್ಯ ಪ್ರೊ.ರಾಜಪ್ಪ ದಳವಾಯಿ ಮಾತನಾಡಿ, ‘ಸಿಎಸ್ಆರ್ ನಿಧಿಯಲ್ಲಿ ಚಟುವಟಿಕೆ ನಡೆಸುತ್ತೇವೆ ಎಂದುಕೊಂಡು ಬರುವವರಿಗೆ ಪ್ರವೇಶ ಕೊಡದಿರುವುದು ಒಳ್ಳೆಯದು. ಒಂದು ವಿವಿಯಲ್ಲಿ ಕಾರ್ಯಕ್ರಮ ಮಾಡಿ, ಮತ್ತೊಂದು ವಿವಿಯಲ್ಲಿ ಹೇಳಿ ಲಾಭ ಪಡೆದುಕೊಳ್ಳುತ್ತಾರೆ. ದುರ್ಬಳಕೆ ಮಾಡಿಕೊಳ್ಳುವವರೇ ಜಾಸ್ತಿಯಾಗಿದ್ದಾರೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕುಲಸಚಿವೆ ಎಂ.ಕೆ. ಸವಿತಾ, ‘ಹಲವು ಕಂಪನಿಗಳು ಸಮರ್ಪಕವಾಗಿ ತರಬೇತಿ ಕೊಡುವುದಿಲ್ಲ. ಹೀಗಾಗಿ, ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.