ಮೈಸೂರು: ‘ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಕೃಷಿ ಪರಿಕರಗಳ ಮಾರಾಟಗಾರರ ಸಂಘವು ಏ.27ರಂದು ಕರೆ ನೀಡಿರುವ ‘ಭಾರತ್ ಬಂದ್’ ಬೆಂಬಲಿಸಲಾಗುವುದು’ ಎಂದು ಮೈಸೂರು ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷ ಆರ್. ವೆಂಕಟೇಶ್ ತಿಳಿಸಿದರು.

‘ನಗರದಲ್ಲಿ 150 ಸೇರಿದಂತೆ ಜಿಲ್ಲೆಯಾದ್ಯಂತ 650 ಕೃಷಿ ಪರಿಕರ ಅಂಗಡಿಗಳಿವೆ. ಅಂದು ಅವುಗಳನ್ನು ಮುಚ್ಚಿ, ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಸೆಳೆಯಲಾಗುವುದು’ ಎಂದು ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಡಿಎಪಿ ಮತ್ತು ಯೂರಿಯಾ ಜೊತೆಗೆ ಒತ್ತಾಯವಾಗಿ ಬೇರೆ ಉತ್ಪನ್ನಗಳನ್ನು ಖರೀದಿಸುವಂತೆ ಲಿಂಕ್ (ಜೋಡಿಸುವುದು) ಮಾಡುವುದನ್ನು ನಿಲ್ಲಿಸಬೇಕು. ಎಲ್ಲ ರಸಗೊಬ್ಬರ ಎಂಆರ್ಪಿ ಮೇಲೆ ಶೇ 8ರಷ್ಟು ‘ಡೀಲರ್ ಲಾಭಾಂಶ’ ಇರುವಂತೆ ನೋಡಿಕೊಳ್ಳಬೇಕು. ರಸಗೊಬ್ಬರ, ಬಿತ್ತನೆಬೀಜ, ಕೀಟನಾಶಕ ಮಾದರಿಗಳು ಕಳಪೆ ಬಂದಾಗ ಕಂಪನಿಯವರ ಮೇಲೆ ಮಾತ್ರ ಪ್ರಕರಣ ದಾಖಲಿಸಿ, ಡೀಲರ್ಗಳನ್ನು ಸಾಕ್ಷಿಯಾಗಿ ಮಾತ್ರವೇ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

‘ಅಧಿಕಾರಿಗಳು ತಪಾಸಣೆಗೆಂದು ಅಂಗಡಿಗಳಿಗೆ ಭೇಟಿ ಕೊಟ್ಟ ನಂತರ ಮಾಧ್ಯಮಕ್ಕೆ ಹೇಳಿಕೆ ಕೊಡುವಾಗ ‘ದಾಳಿ’ ಎಂಬ ಪದ ಮತ್ತು ಅಂಗಡಿಗಳ ಫೋಟೊ ಬಳಸಬಾರದು. ಅಧಿಕಾರಿಗಳು ಮಾರಾಟಗಾರರೊಂದಿಗೆ ಸೌಜನ್ಯದಿಂದ ವರ್ತಿಸಬೇಕು’ ಎಂದು ಆಗ್ರಹಿಸಿದರು.

‘ಎಫ್ಐಡಿ ಮೂಲಕ ರಸಗೊಬ್ಬರ ಮಾರುವ ಸರ್ಕಾರದ ಆದೇಶವನ್ನು ಸ್ವಾಗತಿಸುತ್ತೇವೆ. ನೀರಾವರಿ ಮತ್ತು ಒಣಬೇಸಾಯಗಾರರಿಗೆ ವೈಜ್ಞಾನಿಕವಾಗಿ ಬೆಳೆಗಳ ಆಧಾರದ ಮೇಲೆ ರಸಗೊಬ್ಬರ ದೊರೆಯುವಂತೆ ನೋಡಿಕೊಳ್ಳಬೇಕು. ಎಫ್ಐಡಿ ಮೂಲಕ ಡಿಎಪಿ ಮತ್ತು ಯೂರಿಯಾ ಮಾರುವುದನ್ನು ಹಿಂಗಾರು ಬೆಳೆಯವರೆಗೆ ಕಡ್ಡಾಯಗೊಳಿಸಬಾರದು’ ಎಂದು ಕೋರಿದರು.

ಕಾರ್ಯದರ್ಶಿ ನಾಗೇಂದ್ರ ಎಚ್.ಎನ್. ಹಾಗೂ ಉಪಾಧ್ಯಕ್ಷ ಕೆ.ಜಿ. ವೆಂಕಟರಾಮನ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.