ಮೈಸೂರು: ಮೈಸೂರು ವಿಮಾನ ನಿಲ್ದಾಣದಲ್ಲಿ ವಿವಿಧ ಇಲಾಖೆಯ ಸಹಯೋಗದಲ್ಲಿ ಸೋಮವಾರ ಸಂಜೆ ಆ್ಯಂಟಿ ಹೈಜಾಕ್ ಕಾರ್ಯಾಚರಣೆಯ ಅಣಕು ಪ್ರದರ್ಶನ ನಡೆಯಿತು.

ಮೈಸೂರು ವಿಮಾನ ನಿಲ್ದಾಣದ ಅಧಿಕಾರಿಗಳು, ಕೆಎಸ್ಐಎಸ್ಎಫ್, ಕರ್ನಾಟಕ ರಾಜ್ಯ ಪೊಲೀಸ್, ಜಿಲ್ಲಾಡಳಿತ, ಎನ್ಎಸ್ಜಿ, ಗುಪ್ತಚರ ಸಂಸ್ಥೆಗಳು, ಓರಿಯಂಟ್ ಫ್ಲೈಯಿಂಗ್ ಸ್ಕೂಲ್, ಇಂಡಿಗೊ ಏರ್ಲೈನ್ಸ್, ವೈದ್ಯಕೀಯ ತಂಡ ಮತ್ತು ವಿಮಾನಯಾನದ ಪ್ರತಿನಿಧಿಗಳು ಈ ಕವಾಯತಿನಲ್ಲಿ ಭಾಗವಹಿಸಿದ್ದರು.

ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತುರ್ತು ಸಂದರ್ಭದಲ್ಲಿನ ಪ್ರೊಟೊಕಾಲ್ಗಳ ಬಗ್ಗೆ ಮಾಹಿತಿ ನೀಡಲಾಯಿತು. ಭದ್ರತೆ ನಿಯೋಜನೆ, ಒತ್ತಡ ನಿರ್ವಹಣೆ ಕುರಿತು ಪ್ರಾಯೋಗಿಕ ಅಭ್ಯಾಸ ಮಾಡಲಾಯಿತು.

‘ವಿಮಾನ ನಿಲ್ದಾಣದ ನಿತ್ಯ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರದಂತೆ ಅಣಕು ಪ್ರದರ್ಶನ ಸರಾಗವಾಗಿ ನಡೆಯಿತು’ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-51-1226051959

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.