ಮೈಸೂರು: ‘ಭಾರತೀಯರೇ ಸ್ಥಾಪಿಸಿರುವ ಅಲೆಯನ್ಸ್ ಸಂಸ್ಥೆ ಅತಿಕಡಿಮೆ ಅವಧಿಯಲ್ಲಿ ತ್ವರಿತಗತಿಯಲ್ಲಿ ಬೆಳೆಯುತ್ತಿದೆ’ ಎಂದು ಅಂತರರಾಷ್ಟ್ರೀಯ ಕಾರ್ಯದರ್ಶಿ ನಾಗರಾಜ ವಿ. ಬೈರಿ ಹೇಳಿದರು.

ಇಲ್ಲಿ ಭಾನುವಾರ ನಡೆದ ಅಸೋಸಿಯೇಷನ್ ಆಫ್ ಅಲೆಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಜಿಲ್ಲೆ-255-ಎಸ್ ವ್ಯಾಪ್ತಿಯ ವಿಜಯ ನಗರ, ನೇತಾಜಿ, ವಲ್ಲಭಬಾಯ್, ಕೃಷ್ಣದೇವರಾಯ, ತಿಲಕ್, ಸಿರಿ ಸಂಭ್ರಮ, ಸಿರಿ ಫೀನಿಕ್ಸ್, ಸಿರಿ ಸಪ್ತಸ್ವರ ಕ್ಲಬ್ಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ‘ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಎರಡು ವರ್ಷಗಳಲ್ಲಿ ತಲಾ 40ಕ್ಕೂ ಹೆಚ್ಚು ಕ್ಲಬ್ಗಳು ಸ್ಥಾಪನೆಯಾಗಿವೆ. ಇತರ ಕ್ಲಬ್ಗಳಿಗೆ ಹೋಲಿಸಿದಲ್ಲಿ ಕಡಿಮೆ ಶುಲ್ಕ ಇರುವುದು, ಸೇವಾ ಕಾರ್ಯಕ್ಕೆ ಆದ್ಯತೆ ಹಾಗೂ ಮುಕ್ತ ಅವಕಾಶ ಇರುವುದು ಇದಕ್ಕೆ ಕಾರಣ’ ಎಂದು ತಿಳಿಸಿದರು.

ಜಿಲ್ಲಾ ರಾಜ್ಯಪಾಲ ಮಹಾಬಲೇಶ್ವರ ಬೈರಿ ಮುಖ್ಯ ಅತಿಥಿ ಹಾಗೂ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು. ಆಕಾಶ್ ಬೈರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ರಾಜ್ಯಪಾಲರಾದ ಎಸ್. ವೆಂಕಟೇಶ್, ಸಿರಿ ಬಾಲು, 2ನೇ ಉಪ ರಾಜ್ಯಪಾಲ ನ. ಗಂಗಾಧರಪ್ಪ, ಜಿಲ್ಲಾ ಸಂಪುಟ ಕಾರ್ಯದರ್ಶಿ ಸಿ.ಬಿ. ಶ್ರೀಶೈಲ, ಖಜಾಂಚಿ ಇಂದಿರಾ ವೆಂಕಟೇಶ್, 3ನೇ ಉಪ ರಾಜ್ಯಪಾಲೆ ಶಾಲಿನಿ ನಾಗರಾಜ್, ಸಾರ್ವಜನಿಕ ಸಂಪರ್ಕಾಧಿಕಾರಿ ಕೃಷ್ಣೋಜಿರಾವ್, ರಾಯಭಾರಿ ಶೋಭಾ ಸಿರಿಬಾಲು, ಪ್ರಾದೇಶಿಕ ಅಧ್ಯಕ್ಷರಾದ ಡಿ. ಮಹದೇವ್, ಕೆ.ಬಿ. ಲಿಂಗರಾಜು, ವಲಯ ಅಧ್ಯಕ್ಷರಾದ ಶ್ರೀನಿವಾಸ್, ವೆಂಕಟೇಶ್, ಕೆ.ಕೆ. ಜಯರಾಂ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-39-1449986224

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.