ಮೈಸೂರು: ‘ಅಂಬೇಡ್ಕರ್ ವಿಚಾರ ಮರೆತರೆ, ಆಶಯಗಳನ್ನು ಪಾಲಿಸದೇ ಹೋದರೆ ದೇಶಕ್ಕೆ ಭವಿಷ್ಯವಿಲ್ಲ’ ಎಂದು ಮೈಸೂರು ವಿಶ್ವವಿದ್ಯಾಲಯದ ಬಾಬು ಜಗಜೀವನ್ರಾಮ್ ಅಧ್ಯಯನ ಪೀಠದ ಸಂಶೋಧನಾ ಅಧಿಕಾರಿ ಎಂ.ಶ್ರೀನಿವಾಸಮೂರ್ತಿ ಪ್ರತಿಪಾದಿಸಿದರು.

ನಗರದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಸಹಯೋಗದಲ್ಲಿ ಚಂದ್ರು ಗ್ರಾಮೀಣ ಸಂಗೀತ ಕಲಾ ಸಂಘವು ಮಂಗಳವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.

‘ದೇಶದ ಸದೃಢ ಆಡಳಿತಕ್ಕೆ ಸಂವಿಧಾನವೇ ದೊಡ್ಡ ಶಕ್ತಿಯಾಗಿದೆ. ಬಾಬಾಸಾಹೇಬರ ವಿಚಾರಧಾರೆಗಳು ಎಂದಿಗೂ ಪ್ರಸ್ತುತ. ದೇಶದ ಅಭಿವೃದ್ಧಿಗೆ ಸಾಮಾಜಿಕ ಸಮಸ್ಯೆ, ಜಾತಿ ತಾರತಮ್ಯಗಳೇ ತಡೆಯಾಗಿವೆ. ಸಮಸಮಾಜ ನಿರ್ಮಾಣಕ್ಕೆ ಸಂವಿಧಾನದ ಆಶಯಗಳನ್ನು ಯಥಾವತ್ ಜಾರಿಗೊಳಿಸಬೇಕು’ ಎಂದರು.

ಹೋರಾಟ ದೊಡ್ಡದು: ‘ರಾಜ್ಯದಲ್ಲಿ ದಲಿತರ ಬದುಕು ಸುಧಾರಣೆಯಾಗಲು ದಲಿತ ಸಂಘರ್ಷ ಸಮಿತಿ ಹೋರಾಟವೇ ಕಾರಣ. ಬಿ.ಕೃಷ್ಣಪ್ಪ ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದರು. ಇಂಗ್ಲಿಷ್ನಲ್ಲಿದ್ದ ಅಂಬೇಡ್ಕರ್ ಅವರ ಬರಹಗಳನ್ನು ಕನ್ನಡದಲ್ಲಿ ಅಧ್ಯಯನ ಮಾಡಲು ದಸಂಸ ಪ್ರೇರೇಪಿಸಿತು’ ಎಂದರು.

‘ದಲಿತ ಸಮುದಾಯ ಅಧ್ಯಯನಶೀಲವಾಗಿ ಉನ್ನತ ಶಿಕ್ಷಣ ಪಡೆಯಬೇಕು. ಮದ್ಯಪಾನದಿಂದ ಬದುಕು ನಾಶವಾಗುತ್ತಿದ್ದು, ಸಮುದಾಯವು ಅಂಬೇಡ್ಕರ್ ಮಾರ್ಗದಲ್ಲಿ ನಡೆಯಬೇಕು’ ಎಂದರು.

ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ಎಸ್.ರವಿ, ಉದ್ಯಮಿ ಎಚ್.ಕೆ.ಸೋಮಶೇಖರ್, ನಿವೃತ್ತ ಅಧಿಕಾರಿಗಳಾದ ಆರ್.ರಂಗನಾಥ್, ಎಂ.ಮಹದೇವ್, ಕೆಂಚಯ್ಯ, ಬಿ.ಎಂ.ಮಹದೇವಯ್ಯ, ಜೈ ಭೀಮ್ ಕ್ರಾಂತಿಕಾರಿ ಸೈನ್ಯದ ಜಿಲ್ಲಾಧ್ಯಕ್ಷ ಎನ್.ಲಕ್ಷ್ಮಣ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-39-2088878718

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.