ಮೈಸೂರು: ‘ಮಹಾಮಾನವತಾವಾದಿ ಆಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೃದಯ ಶ್ರೀಮಂತಿಕೆಯಿಂದ ಬದುಕಿದರು’ ಎಂದು ಮಾಜಿ ಮೇಯರ್ ಪುರುಷೋತ್ತಮ ಸ್ಮರಿಸಿದರು.

ಇಲ್ಲಿನ ಮಾನಂದವಾಡಿಯ ನಾಚನಹಳ್ಳಿಪಾಳ್ಯದಲ್ಲಿ ‘ಜೈ ಡಾ.ಬಿ.ಆರ್.ಅಂಬೇಡ್ಕರ್ ಬಳಗ’ದಿಂದ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

‘ಸಮಾನತೆಗಾಗಿ ಬದುಕನ್ನು ಸವೆಸಿದ ಅವರ ಆದರ್ಶ ಜೀವನ ನಮಗೆಲ್ಲರಿಗೂ ಮಾದರಿಯಾಗಿದೆ. ಬಾಬಾಸಾಹೇಬರ ಜನ್ಮದಿನವನ್ನು ದೇಶದೊಂದಿಗೆ ಇಡೀ ವಿಶ್ವವೇ ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಸ್ವಾಭಿಮಾನದ ಸಂಕೇತ ಅವರು’ ಎಂದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ‘ಮಹಿಳೆಯರಿಗೆ ಸಮಾನತೆ ಮತ್ತು ಶಿಕ್ಷಣವನ್ನು ದೊರೆಯಲು ಶ್ರಮಿಸಿದವರು ಅಂಬೇಡ್ಕರ್. ಎಂದೆಂದಿಗೂ ಆದರ್ಶ ವ್ಯಕ್ತಿ ಎಂದ ಅವರು, ‘ಶಿಕ್ಷಣದ ಮೂಲಕ ಮಾತ್ರ ಸಮಾಜದಲ್ಲಿ ಕ್ರಾಂತಿ, ಸಮಾನತೆ’ ಎಂದರು.

ಅಶೋಕಪುರಂನ ಆದಿಕರ್ನಾಟಕ ಮಹಾಸಂಸ್ಥೆ ಅಧ್ಯಕ್ಷ ಸಿದ್ದರಾಜು ಪಿ. (ಸುನೀಲ್), ಉಪಾಧ್ಯಕ್ಷ ಶಿವಸ್ವಾಮಿ, ದೊಡ್ಡಗರಡಿ ಸಂಘದ ಅಧ್ಯಕ್ಷ ಆರ್.ಸಿ.ಮಹೇಶ್, ಚಿಕ್ಕಗರಡಿ ಸಂಘದ ಅಧ್ಯಕ್ಷ ನಾಗರಾಜು ಬಿಲ್ಲಯ್ಯ, ಉದ್ಯಮಿ ರಮೇಶ್, ಸಮಾಜಸೇವಕಿ ಗೌರಮ್ಮ, ಜೈ ಡಾ.ಬಿ.ಆರ್.ಅಂಬೇಡ್ಕರ್ ಬಳಗದ ಗೌರವ ಅಧ್ಯಕ್ಷ ಮಹಾಲಿಂಗು, ಕಾರ್ಯದರ್ಶಿ ಸಂತೋಷ್, ಮಾಜಿ ಉಪಮೇಯರ್ ಸಿದ್ದರಾಜು, ಖಜಾಂಚಿ ಸಂತೋಷ್, ಮುಖಂಡರಾದ ಮೊಹಮ್ಮದ್ ಸಾಬ್, ಸೈಯದ್ ಖಾನ್, ಶ್ರೀಹರ್ಷ, ಶಂಭು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-39-1515516871

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.