ಮೈಸೂರು: ‘ಡಾ.ಬಿ.ಆರ್. ಅಂಬೇಡ್ಕರ್ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಸಮುದಾಯದವರೂ ಒಗ್ಗೂಡಿ ಜಯಂತಿ ಆಚರಿಸಿ ಅವರ ವಿಚಾರಧಾರೆ ಅಳವಡಿಸಿಕೊಳ್ಳಬೇಕು’ ಎಂದು ‘ಮೈಮುಲ್’ ಅಧ್ಯಕ್ಷ ಕೆ.ಈರೇಗೌಡ ಹೇಳಿದರು.

ಇಲ್ಲಿನ ಆಲನಹಳ್ಳಿಯ ‘ಮೈಮುಲ್’ ಸಭಾಂಗಣದಲ್ಲಿ ಮಂಗಳವಾರ ನಡೆದ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

‘ಅವರು ಹೆಚ್ಚು ಕಾಲ ಬದುಕಿದ್ದರೆ ದೇಶ ಮತ್ತಷ್ಟು ಉನ್ನತ ಸ್ಥಿತಿ ತಲುಪುತ್ತಿತ್ತು. ಹಿಂದೆ ನಮ್ಮ ದೇಶವನ್ನು ಉಳ್ಳ ಸಮುದಾಯದವರು ಆಳುತ್ತಿದ್ದರು. ಅಂಬೇಡ್ಕರ್ ಸಂವಿಧಾನ ನೀಡಿದ ಬಳಿಕ ಸಮಾನತೆ, ಎಲ್ಲರಿಗೂ ಶಿಕ್ಷಣ ಹಾಗೂ ಅಧಿಕಾರ ಸಿಗುವಂತಾಯಿತು’ ಎಂದರು.

‘ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ ಮತ್ತು ಹೋರಾಟದಿಂದ ಬದಲಾವಣೆ ಸಾಧ್ಯವಾಗಿದೆ. ಮಕ್ಕಳನ್ನು ಜಾತ್ಯತೀತರನ್ನಾಗಿ ಬೆಳೆಸೋಣ. ಅವರಿಗೆ ಸಂವಿಧಾನ ಹಾಗೂ ಶಿಕ್ಷಣದ ಬಗ್ಗೆ ತಿಳಿಸೋಣ’ ಎಂದು ಪ್ರಭಾರ ವ್ಯವಸ್ಥಾಪಕಿ (ಆಡಳಿತ ವಿಭಾಗ) ಸೌಮ್ಯಾ ಹೇಳಿದರು.

ಮೈಮುಲ್ ನಿರ್ದೇಶಕರಾದ ಓಂಪ್ರಕಾಶ್ ಹಾಗೂ ಬಿ.ಎನ್.ಸದಾನಂದ ಮಾತನಾಡಿದರು. 11 ವರ್ಷದ ಬಾಲಕ ದೇವನಶ್ ಇಂಗ್ಲಿಷ್ನಲ್ಲಿ ಭಾಷಣ ಮಾಡಿ ಗಮನಸೆಳೆದರು.

ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾಯ್ಕ್, ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-39-227661716

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.