ಮೈಸೂರು: ಡಾ.ಬಿ.ಅರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವದಲ್ಲಿ ‘ಅವರದೇ ಭಾಷಣ’ ಆಲಿಸುವ ಅವಕಾಶವನ್ನು ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಇಲ್ಲಿ ಕಲ್ಪಿಸಲಾಗುತ್ತಿದೆ.

ಏ.14ರಂದು ನಗರದ ವಿನೋಬಾ ರಸ್ತೆಯ ಕಲಾಮಂದಿರದಲ್ಲಿ ಜಯಂತಿ ಸಮಾರಂಭ ಆಯೋಜಿಸಲಾಗಿದೆ. ಮೆರವಣಿಗೆಯ ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಹಿಂದಿನ ವರ್ಷಗಳಲ್ಲಿ ಆಯ್ದ ಸಂಪನ್ಮೂಲ ವ್ಯಕ್ತಿಗಳಿಂದ ಅಂಬೇಡ್ಕರ್ ಅವರ ಜೀವನ–ಸಾಧನೆಯ ವಿಷಯ ಒಳಗೊಂಡ ‘ಪ್ರಧಾನ ಭಾಷಣ’ ಮಾಡಿಸಲಾಗುತ್ತಿತ್ತು. ಆದರೆ, ಈ ಬಾರಿ ಅಂಬೇಡ್ಕರ್ ಅವರು ವಿವಿಧ ಕಾಲಘಟ್ಟದಲ್ಲಿ ಮತ್ತು ವಿವಿಧ ವೇದಿಕೆಗಳಲ್ಲಿ ಮಾಡಿದ್ದ ಭಾಷಣವನ್ನೇ ಪುನರ್ ಪ್ರಸ್ತುತಪಡಿಸುವ ‘ಹೊಸ ಪ್ರಯೋಗ’ ನಡೆಯಲಿದೆ.

ಇದಕ್ಕಾಗಿ, ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಅಂಬೇಡ್ಕರ್ ಹಾಸ್ಟೆಲ್ಗಳಲ್ಲಿದ್ದು ವ್ಯಾಸಂಗ ಮಾಡುತ್ತಿರುವ ಐವರು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗಿದೆ.

ಯಾರ್ಯಾರಿಂದ ಭಾಷಣ?: ಸಿದ್ದ ಲಿಂಗೇಶ್ವರ ನಗರ ಹಾಸ್ಟೆಲ್ನ ಚೇತನ್ (ಎಂ.ಎ. ಕನ್ನಡ), ಬೋಗಾದಿ–2 ಹಾಸ್ಟೆಲ್ನ ಶಿಲ್ಪಾ ಎಸ್. (ಬಿಸಿಎ), ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಕೆ.ಜಿ. ಸುಭಾಷ್ ಮಂಡೇಕರ್ (ಎಂ.ಎ. ಇಂಗ್ಲಿಷ್), ರಾಜರಾಜೇಶ್ವರಿನಗರ ‘ಬಿ’ ಬ್ಲಾಕ್ನ ರಕ್ಷಿತಾ ಪಿ.ಟಿ. (ಎಂ.ಎ. ಇಂಗ್ಲಿಷ್) ಹಾಗೂ ವಿಜಯನಗರ 2ನೇ ಹಂತದ ಸ್ನಾತಕೋತ್ತರ ಬಾಲಕಿಯರ ಹಾಸ್ಟೆಲ್ನ ಅನನ್ಯಾ ಎಚ್. (ಬಿ.ಎ. ಬಿ.ಇಡಿ.) ಅವರನ್ನು ಭಾಷಣಕಾರರನ್ನಾಗಿ ಆಯ್ಕೆ ಮಾಡಲಾಗಿದೆ. ಅವರು ಪ್ರಸ್ತುತಿಯ ಅಭ್ಯಾಸದಲ್ಲಿ ತೊಡಿದ್ದಾರೆ. ಅವರಿಗೆ 5ರಿಂದ 7 ನಿಮಿಷ ಸಮಯ ಕೊಡಲಾಗುವುದು.

ಆಯ್ಕೆ ಪ್ರಕ್ರಿಯೆ ಹೇಗೆ?: ‘ಅಂಬೇಡ್ಕರ್ ಜಯಂತಿಯಲ್ಲಿ ಪ್ರಧಾನ ಭಾಷಣಕಾರರಿಂದ ಮಾತನಾಡಿಸುವ ಸಂಪ್ರಯದಾಯವಿತ್ತು. ಅವರು ಅವರ ವಿಚಾರ ಹಂಚಿಕೊಳ್ಳುತ್ತಿದ್ದರು. ಈ ಬದಲಿಗೆ, ಅಂಬೇಡ್ಕರ್ ಅವರದೇ ಭಾಷಣಗಳನ್ನು ಪುನರ್ ಪ್ರಸ್ತುತಪಡಿಸುವ ಪರಿಕಲ್ಪನೆಯಂತೆ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹಾನ್ ಮಾನವತಾವಾದಿಯಾಗಿದ್ದ ಅಂಬೇಡ್ಕರ್ ಅವರು ಜೀವಿತಾವಧಿಯಲ್ಲಿ ಸಾಕಷ್ಟು ಅರ್ಥಗರ್ಭಿತವಾದ ಭಾಷಣ ಮಾಡಿದ್ದಾರೆ. ಅದನ್ನು ಪುನರ್ ಪ್ರಸ್ತುತಪಡಿಸುವಂತೆ ನಮ್ಮ ಹಾಸ್ಟೆಲ್ ಮಕ್ಕಳಿಗೆ ತಿಳಿಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿತ್ತು. 25 ಮಂದಿ ಪಾಲ್ಗೊಂಡಿದ್ದರು’ ಎಂದು ಮಾಹಿತಿ ನೀಡಿದರು.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಹಮ್ಮಿಕೊಳ್ಳಲಾಗುವ ‘ಮಹಾತ್ಮ ಗಾಂಧಿ ವಿಚಾರ ಪ್ರಣೀತ ಸರ್ವೋದಯ ಮೇಳ’ದಲ್ಲಿ ಗಾಂಧೀಜಿಯವರ ಭಾಷಣವನ್ನು ಪುನರ್ ಪ್ರಸ್ತುತಪಡಿಸುವ ಪ್ರಯೋಗ ನಡೆಸಿದ್ದರು. ಅದರ ಮಾದರಿಯಲ್ಲಿ, ಇಲ್ಲಿ ಅಂಬೇಡ್ಕರ್ ಭಾಷಣವನ್ನು ಮರು ಪ್ರಸ್ತುತಪಡಿಸುವ ಪ್ರಯೋಗ ಕೈಗೊಳ್ಳಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-39-1675582726

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.