ಮೈಸೂರು: ‘ಬಹುಜನರು ಅಂಬೇಡ್ಕರ್ ಮಾರ್ಗ ಅನುಸರಿಸಿದ್ದರೆ ದೇಶವು ಎಂದೋ ಪ್ರಬುದ್ಧ ಭಾರತ ಆಗುತ್ತಿತ್ತು’ ಎಂದು ಕರ್ನಾಟಕ ಬುದ್ಧ ಧಮ್ಮ ಸಮಿತಿಗಳ ಒಕ್ಕೂಟದ ಅಧ್ಯಕ್ಷ ಬಿ.ಗೋಪಾಲ್ ಹೇಳಿದರು.

ಕರ್ನಾಟಕ ಬುದ್ಧ ಧಮ್ಮ ಸಮಿತಿಯಿಂದ ಇಲ್ಲಿನ ವಿಜಯನಗರ 1ನೇ ಹಂತದ ಡಿ. ಸಂಜೀವಯ್ಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ಭಾನುವಾರ ನಡೆದ ಸಿದ್ಧಾರ್ಥ ಬುದ್ಧ ವಿಹಾರ ಉದ್ಘಾಟನೆ, ಬುದ್ಧಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಮಿತಿ ಕಾರ್ಯದರ್ಶಿ ಆರ್.ಮಹದೇವಪ್ಪ ರಚಿಸಿರುವ ‘ಸಿದ್ಧಾರ್ಥ ಬುದ್ಧ ವಿಹಾರ ನಡೆದು ಬಂದ ದಾರಿ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

‘ಅಂಬೇಡ್ಕರ್ ಆಶಯದಂತೆ ಜಾತಿ ಬಿಟ್ಟು, ಧಮ್ಮ ಅನುಸರಿಸಿ ಸಮಾಜ ಕಟ್ಟುವ ಕೆಲಸ ಆಗಬೇಕು. ಒಳಮೀಸಲಾತಿ ಹೆಸರಿನಲ್ಲಿ ಹೊಡೆದಾಡುತ್ತಿರುವುದು ಸರಿಯಲ್ಲ. ಇದು ಜಾತಿ ಗಟ್ಟಿಗೊಳಿಸುವ ಕೆಲಸ. ಮೀಸಲಾತಿಗಾಗಿ ಜೋತು ಬೀಳುವವರೇ ಹೆಚ್ಚಾಗಿದ್ದು, ಧಮ್ಮ ಅನುಸರಿಸಲು ಯೋಚಿಸುತ್ತಿದ್ದಾರೆ’ ಎಂದರು.

ನೊಣಗಳಿವೆ ಎಚ್ಚರ: ‘ಮನೆಯಲ್ಲಿರುವ ನೊಣಗಳು ಆಹಾರದ ಮೇಲೂ ಕೂರುತ್ತವೆ, ಹೊಲಸಿನ ಮೇಲೂ ಕೂರುತ್ತವೆ. ಅವಕ್ಕೆ ವ್ಯತ್ಯಾಸವಿಲ್ಲ. ನಮ್ಮ ಸಮುದಾಯದಲ್ಲೂ ಇಂಥವರ ಸಂಖ್ಯೆ ಹೆಚ್ಚುತ್ತಿದೆ. ಒಮ್ಮೆ ಅಂಬೇಡ್ಕರ್ ಎನ್ನುತ್ತಾರೆ, ಮತ್ತೊಮ್ಮೆ ಜೈ ಹನುಮ ಎನ್ನುತ್ತಾರೆ. ಈ ಬಗ್ಗೆ ಎಚ್ಚರಿಕೆ ಅಗತ್ಯ. ನಾವು ಜೇನುನೊಣಗಳಾಗಬೇಕು. ಎಲ್ಲೇ ಹೋದರೂ ಉತ್ತಮ ಸಿಹಿ ಅರಸುವಂತೆಯೇ ಬಾಬಾಸಾಹೇಬರ ಉದ್ದೇಶ, ಸೈದ್ಧಾಂತಿಕ ಬದ್ಧತೆಯನ್ನು ಹೊಂದಬೇಕು. ಭವಿಷ್ಯವನ್ನು ಕಟ್ಟಬೇಕು’ ಎಂದು ಹೇಳಿದರು.

ಸಮಿತಿ ಕಾರ್ಯದರ್ಶಿ ಆರ್.ಮಹದೇವಪ್ಪ, ‘25 ವರ್ಷಗಳ ಕನಸು ನನಸಾಗಿದೆ. ಯಾವುದೇ ಧಾರ್ಮಿಕ ಸಂಸ್ಥೆಗಳು ಸಂಪತ್ತಿನ ಕೇಂದ್ರವಾಗಬಾರದು. ಧಮ್ಮದ ಉದ್ದೇಶ ಸಂಪತ್ತಿನ ಕ್ರೋಢೀಕರಣವಲ್ಲ’ ಎಂದರು.

‘ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯಿಂದ ಕರ್ನಾಟಕ ಬುದ್ಧ ಸಮಿತಿ ಹೆಸರಿಗೆ ಈ ಜಾಗ ಪಡೆದು ₹3 ಕೋಟಿ ವೆಚ್ಚದಲ್ಲಿ ವಿಹಾರ ನಿರ್ಮಿಸಲಾಗಿದೆ. ಸಾಕಷ್ಟು ಜನರು ಸಹಕರಿಸಿದ್ದಾರೆ. ಇಲ್ಲಿ ವಿದ್ಯಾರ್ಥಿಗಳಿಗೆ, ಭಿಕ್ಕುಗಳಿಗೆ ಆಶ್ರಯ ಒದಗಿಸುವ ತಾಣವೂ ಇದೆ’ ಎಂದರು.

‘ಬೆಸ್ಟ್’ ಸಂಸ್ಥೆ ಕಾರ್ಯದರ್ಶಿ ಜಗನ್ನಾಥ್, ‘ರೋಗಮುಕ್ತ ಸಮಾಜ ಮತ್ತು ಬುದ್ಧ ಧಮ್ಮ’ ಕುರಿತು ಮಾತನಾಡಿದರು.

ಜೇತವನ ಬುದ್ಧ ವಿಹಾರದ ಮನೋರಕ್ಖಿತ ಭಂತೇಜಿ, ಬೈಲಕುಪ್ಪೆ ನಳಂದ ವಿಶ್ವವಿದ್ಯಾಲಯದ ಕರ್ಮರಿಂಪೂಜಿ ಭಂತೇಜಿ, ಸಮಿತಿ ಅಧ್ಯಕ್ಷ ಪ್ರೊ.ನಂಜುಂಡಯ್ಯ, ಬೆಂಗಳೂರು ಪ್ರದೇಶಾಭಿವೃದ್ಧಿ ಮಂಡಳಿ ಯೋಜನಾ ಇಲಾಖೆ ನಿರ್ದೇಶಕ ಡಿ.ಚಂದ್ರಶೇಖರಯ್ಯ, ರಾಜಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-39-1690977385

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.