ಮೈಸೂರು: ‘ವರುಣ ಹೋಬಳಿಯ ಮರಿಗೌಡನ ಹುಂಡಿ ಗ್ರಾಮದಲ್ಲಿ ಈಚೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳು ಅಪಮಾನ ಮಾಡಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಂಡಿಸಿದೆ’ ಎಂದು ಮಲ್ಲಹಳ್ಳಿ ಈ ನಾರಾಯಣ್ ತಿಳಿಸಿದರು.

ಅಂಬೇಡ್ಕರ್ ಭಾವಚಿತ್ರವಿರುವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ಈ ರೀತಿ ದುರ್ಘಟನೆ ಮರುಕಳಿಸುತ್ತಿದ್ದು, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾಡಳಿತ ವಿಫಲವಾಗುತ್ತಿರುವುದೇ ಇದಕ್ಕೆ ಕಾರಣ’ ಎಂದು ದೂರಿದರು.

ದಂಡಿಕೆರೆ ದಮ್ಮ ಅಶೋಕ ಮಾತನಾಡಿ, ‘ಅಂಬೇಡ್ಕರ್ ಅವರಿಗೆ ಅವಮಾನ ಆಗಿರುವುದು ತಲೆತಗ್ಗಿಸುವ ಘಟನೆ. ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಮುಖಂಡರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಕರೆದು ಜಯಂತಿ ಮಾಡುವಾಗ ಶಿಸ್ತು ಕ್ರಮ ವಹಿಸಲು ಸೂಚನೆ ನೀಡಿ ಎಂದು ಯತೀಂದ್ರ ಸಿದ್ದರಾಮಯ್ಯ ಅವರಲ್ಲಿ ಸಲಹೆ ಕೊಟ್ಟರೂ, ಅವರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಿಡಿಗೇಡಿಗಳು ಕೆಲಸ ಮಾಡಿದರೂ ಇದಕ್ಕೆ ನೇರ ಹೊಣೆ ಕ್ಷೇತ್ರದ ಶಾಸಕರು’ ಎಂದು ಆರೋಪಿಸಿದರು.

‘ಸರ್ಕಾರವು ರಾಷ್ಟ್ರೀಯ ನಾಯಕರಿಗೆ ಅಪಮಾನ ಮಾಡಿದರೆ ಅಂತ ವ್ಯಕ್ತಿಗಳಿಗೆ ಶಿಕ್ಷೆ ಹೆಚ್ಚು ನೀಡಲು ತಿದ್ದುಪಡಿ ತರಬೇಕು. ಅಪಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಜೈಲಿಗೆ ಕಳಿಸುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.

ತಾಲ್ಲೂಕು ಸಂಚಾಲಕ ಮಹೇಶ್ ಗಟ್ಟವಾಡಿ, ಅರ್ಜುನ್, ಮಹಾದೇವ ಪ್ರಸಾದ್ ಮೂಡಳ್ಳಿ, ಶ್ರೀರಾಂಪುರ ಲೋಕೇಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-39-2024331857

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.