ಮೈಸೂರು: ಆಟಿಸಂ (ಸ್ವಲೀನತೆ) ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಆಶಯದೊಂದಿಗೆ ನಗರದಲ್ಲಿ ಭಾನುವಾರ ಜಾಗೃತಿ ವಾಕಥಾನ್ ನಡೆಯಿತು.

ಅರಮನೆ ಸಮೀಪದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಈ ವಾಕಥಾನ್ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುತ್ತಾ ಓವಲ್ ಮೈದಾನದಲ್ಲಿ ಸಮಾರೋಪಗೊಂಡಿತು. ವಿವಿಧ ವಯೋಮಾನದ ನಾಗರಿಕರು, ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಉತ್ಸಾಹದಿಂದ ಪಾಲ್ಗೊಂಡು ‘ಒಳಗೊಳ್ಳುವಿಕೆಯ ಸಮಾಜ’ ಎಂಬ ಸಂದೇಶವನ್ನು ಸಾರಿದರು.

‘ಆಟಿಸಂ ಒಂದು ರೋಗವಲ್ಲ, ಅದು ಪ್ರಪಂಚವನ್ನು ನೋಡುವ ವಿಭಿನ್ನ ದೃಷ್ಟಿಕೋನ. ಇಂತಹ ವ್ಯಕ್ತಿಗಳನ್ನು ಅರ್ಥೈಸಿಕೊಳ್ಳುವುದು ಮತ್ತು ಅವರಿಗೆ ಪ್ರೀತಿ ಹಾಗೂ ಸಹಕಾರ ನೀಡುವುದು ಸಮಾಜದ ಜವಾಬ್ದಾರಿ’ ಎಂಬ ಸಂದೇಶವು ಬಿತ್ತರಗೊಂಡಿತು.

ಶುಭಾ ಅರಸ್, ಕಿಶೋರ್ ಬಿದ್ದಪ್ಪ, ಬೋಪಣ್ಣ, ಸಂಗೀತಾ, ಬಲ್ಲಚಂಡ ಧನ್ಯ ಉತ್ತಪ್ಪ, ಕೋಟೇರ ದಿಲೀಪ್ ದೇವಯ್ಯ ಮತ್ತಿತರರು ಪಾಲ್ಗೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-39-555399776

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.