ಮೈಸೂರು: ಇಲ್ಲಿನ ಊಟಿ ರಸ್ತೆಯ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮೇ 24ರಿಂದ ಮೇ 31ರವರೆಗೆ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪೀಠಾಧಿಪತಿ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 84ನೇ ಜನ್ಮದಿನೋತ್ಸವ, ದತ್ತ ವೆಂಕಟೇಶ್ವರ ಕ್ಷೇತ್ರದ 27ನೇ ಬ್ರಹ್ಮೋತ್ಸವ ಹಾಗೂ ನಾದಮಂಟಪದ 28ನೇ ವಾರ್ಷಿಕೋತ್ಸವ ನಿಮಿತ್ತ ಆಶ್ರಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.

ಭಾನುವಾರ (ಮೇ 24) ಬೆಳಿಗ್ಗೆ 9ಕ್ಕೆ ‘ಗಣಪತಿ ಹೋಮ’ದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಸಂಜೆ 5ಕ್ಕೆ ಶೇಷ ವಾಹನ ಉತ್ಸವ, 6ಕ್ಕೆ ಬ್ರಹ್ಮೋತ್ಸವ ಮತ್ತು ಶ್ರೀಗಳ ಜನ್ಮದಿನೋತ್ಸವಕ್ಕೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡುವರು.

ಮೇ 25ರಂದು ಕೊಳಲು ವಾದಕ ಪಂಡಿತ್ ರಾಕೇಶ್ ಚೌರಾಸಿಯಾ ಮತ್ತು ತಬಲಾ ವಾದಕ ಪಂಡಿತ್ ಅನಿಂದೋ ಚಟರ್ಜಿ ಅವರಿಂದ ಹಿಂದೂಸ್ಥಾನಿ ಸಂಗೀತ ಕಛೇರಿ ನಡೆಯಲಿದೆ. 26ರಂದು ಶ್ರೀಗಳ 84ನೇ ಜನ್ಮದಿನದ ಅಂಗವಾಗಿ ಅಭಿಷೇಕ, ಲಕ್ಷ್ಮಿ ಹೋಮ, ಸಂಸ್ಕೃತ ಶಿಕ್ಷಣ ಸೇವೆ ಉದ್ಘಾಟನೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. 27ರಂದು ಶ್ರೀಗಳಿಗೆ ಪ್ರತ್ಯಕ್ಷ ಪಾದಪೂಜೆ ಮತ್ತು ವಿವಿಧ ಕ್ಷೇತ್ರಗಳ ಗಣ್ಯರಿಗೆ ದತ್ತ ಪೀಠದ ವತಿಯಿಂದ ವೇದನಿಧಿ, ಶಾಸ್ತ್ರನಿಧಿ ಮೊದಲಾದ ಬಿರುದುಗಳನ್ನು ಪ್ರದಾನ ಮಾಡಲಾಗುವುದು. ಸಂಜೆ 6ಕ್ಕೆ ನೃತ್ಯಾಂಜಲಿ ಕಾರ್ಯಕ್ರಮವಿದೆ.

28ರ ಸಂಜೆ 6ಕ್ಕೆ ದತ್ತ ವೆಂಕಟೇಶ್ವರ ಸ್ವಾಮಿ ತೆಪ್ಪೋತ್ಸವ ನಡೆಯಲಿದೆ. 29ರಂದು ಹಿಂದೂಸ್ಥಾನಿ ದ್ವಂದ್ವ ವಾದನವನ್ನು ಪಂಡಿತ್ ವಿಶ್ವಮೋಹನ್ ಭಟ್ (ಮೋಹನ ವೀಣೆ) ಮತ್ತು ಪಂಡಿತ್ ಸಲೀಲ್ ವಿಶ್ವ ಮೋಹನ್ ಭಟ್ (ಸಾತ್ವಿಕ ವೀಣೆ) ಪ್ರಸ್ತುತಪಡಿಸುವರು. 30ರಂದು ಬೆಳಿಗ್ಗ 11ಕ್ಕೆ ಅಂಗವಿಕಲರಿಗೆ ಸಹಾಯಕ ಉಪಕರಣಗಳ ವಿತರಣೆ ನಡೆಯಲಿದೆ. ಸಂಜೆ ಪಂಡಿತ್ ಸಂಜೀವ್ ಅಭ್ಯಂಕರ್ ಅವರಿಂದ ಸಂಗೀತ ಸುಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

31ರಂದು ಸಂಜೆ ವಿದ್ವಾನ್ ಕುಮರೇಶ್ ರಾಜಗೋಪಾಲನ್ ಮತ್ತು ವಿದುಷಿ ಜಯಂತಿ ಕುಮರೇಶ್ ಅವರಿಂದ ವೀಣಾ-ವಯಲಿನ್ ಜುಗಲ್ಬಂದಿ ನಡೆಯಲಿದೆ.

ಈ ಅವಧಿಯಲ್ಲಿ ನಿತ್ಯ ಬೆಳಿಗ್ಗೆ 6.30ಕ್ಕೆ ದತ್ತ ಕ್ರಿಯಾ ಯೋಗ ತರಗತಿಗಳು, ಮಧ್ಯಾಹ್ನ 12 ಮತ್ತು ಸಂಜೆ 4ಕ್ಕೆ ಶ್ರೀಗಳೇ ಸಂಯೋಜಿಸಿರುವ ಮ್ಯೂಸಿಕ್ ಥೆರಪಿ (ಸಂಗೀತ ಚಿಕಿತ್ಸೆ) ಕಾರ್ಯಕ್ರಮಗಳು ನಾದಮಂಟಪದಲ್ಲಿ ನಡೆಯಲಿವೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-39-1001124191

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.