ಮೈಸೂರು: ‘ಆಯುರ್ವೇದ ಆರೋಗ್ಯ ಕುರಿತು ತಿಳಿಸುವ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಾಗಿದೆ’ ಎಂದು ಆಯುಷ್ ಇಲಾಖೆ ಆಯುಕ್ತ ಸುನೀಲ್ ಪನ್ವರ್ ಹೇಳಿದರು.

ಇಲ್ಲಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಈಚೆಗೆ ನಡೆದ ‘ಪ್ರದಾನಮ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಭಾರತದ ಪುರಾತನ ಮತ್ತು ಅಮೂಲ್ಯವಾದ ಪರಂಪರಾಗತ ಜ್ಞಾನದ ಕೊಡುಗೆಗಳಲ್ಲಿ ಆಯುರ್ವೇದವು ಪ್ರಮುಖವಾಗಿದೆ’ ಎಂದರು.

‘ಆಯುರ್ವೇದ ಕೇವಲ ಔಷಧೋಪಚಾರವಲ್ಲ. ಪುರಾತನ, ನೈಸರ್ಗಿಕ ಮತ್ತು ಸಮಗ್ರ ಆರೋಗ್ಯ ವ್ಯವಸ್ಥೆಯಾಗಿದೆ. ಈ ವಿಧಾನದ ಚಿಕಿತ್ಸೆಯು ದೇಹ, ಮನಸ್ಸು ಮತ್ತು ಆತ್ಮದ ಸಮತೋಲನ ಕಾಯ್ದುಕೊಳ್ಳಲು ಕ್ರಮ ವಹಿಸುತ್ತದೆ. ಆಹಾರ ಕ್ರಮ, ಜೀವನಶೈಲಿ ಮತ್ತು ಯೋಗ ಒಳಗೊಂಡಿದೆ’ ಎಂದು ತಿಳಿಸಿದರು.

ಮ್ಯಾಗ್ನ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕಾಲೇಜಿಗೆ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣಗಳನ್ನು ಕೊಡುಗೆ ನೀಡಲಾಯಿತು.

ಮ್ಯಾಗ್ನ ಎಲೆಕ್ಟ್ರಾನಿಕ್ಸ್ ಸಿಸ್ಟಂ ಎಂಜಿನಿಯರ್ ಬಿ.ಇ.ಸತೀಶ್ ಮತನಾಡಿದರು. ವಿವೇಕಾನಂದ ಯೋಗ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ನಿರ್ದೇಶಕ ಪಿ.ಎನ್.ಗಣೇಶ್ ಕುಮಾರ್, ಪ್ರಾಚಾರ್ಯ ಶ್ರೀವತ್ಸ, ಸಹಾಯಕ ಆಡಾಳಿತಾಧಿಕಾರಿ ಲೋಕೇಶ್ ಡಿ.ಸಿ., ಸ್ಥಾಯಿ ವೈದ್ಯಾಧಿಕಾರಿ ಎಚ್.ಕೆ.ಶಶಿರೇಖಾ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-39-1304910127

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.