ಮೈಸೂರು: ಅದಮ್ಯ ರಂಗಶಾಲೆಯಿಂದ ‘ಬಾಲಂಗೋಚಿ’ ಮಕ್ಕಳ ಬೇಸಿಗೆ ಶಿಬಿರವನ್ನು ಏ. 6ರಿಂದ ಮೇ 6ರವರೆಗೆ ವಿಜಯನಗರ 3ನೇ ಹಂತದ ವಿ.ಕೆ. ಪಬ್ಲಿಕ್ ಸ್ಕೂಲ್ (ಸಪ್ತಮಾತೃಕಾ ಚೌಡೇಶ್ವರಿ ದೇವಸ್ಥಾನದ ಎದುರು) ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

5ರಿಂದ 13 ವರ್ಷದ ಮಕ್ಕಳು ಪಾಲ್ಗೊಳ್ಳಬಹುದು. ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ನಡೆಯಲಿದೆ. ರಂಗಾಟಗಳು, ರಂಗಗೀತೆಗಳು, ಜನಪದ ಗೀತೆಗಳು, ಭಾವಗೀತೆಗಳು, ದೇಸಿ ಆಟಗಳು, ಚಿತ್ರಕಲೆ, ಮಾಸ್ಕ್ ಮೇಕಿಂಗ್, ಮಕ್ಕಳ ಸಂತೆ, ವರ್ಲಿ ಆರ್ಟ್ಸ್, ಪೇಪರ್ ಕ್ರಾಫ್ಟ್, ವಾಯ್ಸ್ ಕಲ್ಚರ್, ಹೋಳಿಯಾಟ, ಮೈಮ್, ಕಂಗಿಲು ನೃತ್ಯ, ಚಿನ್ನು ಕುಣಿತ, ಪಟ್ಟದ ಕುಣಿತ, ದೊಣ್ಣೆ ವರೆಸೆ, ಹುಲಿ ಕುಣಿತ, ಪೂಜಾ ಕುಣಿತ, ಕಂಸಾಳೆ, ಅಭಿನಯ ಕಲಿಕೆ ಮೊದಲಾದ ಚಟುವಟಿಕೆಗಳು ನಡೆಯಲಿವೆ.

ಗರಿಷ್ಠ 60 ಮಕ್ಕಳಿಗೆ ಅವಕಾಶವಿದೆ. ನೋಂದಣಿ ಹಾಗೂ ಮಾಹಿತಿಗೆ ಮೊ.ಸಂ. 86601 03141 ಸಂಪರ್ಕಿಸಬಹುದು ಎಂದು ಕಾರ್ಯದರ್ಶಿ ಚಂದ್ರು ಮಂಡ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು: ಸುತ್ತೂರು ಶ್ರೀಮಠ, ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ಸಹಯೋಗದಲ್ಲಿ ಏ.8ರಿಂದ 10ರವರೆಗೆ ಸುತ್ತೂರು ಶ್ರೀಕ್ಷೇತ್ರದಲ್ಲಿ ಆಯುರ್ವೇದ, ವಾಕ್-ಶ್ರವಣ, ನರ್ಸಿಂಗ್ ವಿದ್ಯಾರ್ಥಿಗಳ ಶಿಬಿರ ಏರ್ಪಡಿಸಲಾಗಿದೆ.

ಸಾಮೂಹಿಕ ಪ್ರಾರ್ಥನೆ, ಯೋಗ, ವಿಶೇಷ ಉಪನ್ಯಾಸ, ಚಿಂತನ-ಮಂಥನ, ದೇಸಿ ಆಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಮಾಹಿತಿ ಹಾಗೂ ನೋಂದಣಿಗೆ ಮೊ.ಸಂ. 98458 17721 ಸಂಪರ್ಕಿಸಬಹುದು ಎಂದು ಸಂಚಾಲಕ ಎಂ.ಎಲ್. ರಾಜೇಂದ್ರಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-39-353220445

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.