ಮೈಸೂರು: ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿಗರ ‘ಸಫಾರಿ’ಯಿಂದ ಸರ್ಕಾರಕ್ಕೆ ವಾರ್ಷಿಕ ಸರಾಸರಿ ₹ 24 ಕೋಟಿ ಆದಾಯ ಬರುತ್ತಿದೆ.

ಇವು ಹುಲಿ ಸಂಕಕ್ಷಿತ ಪ್ರದೇಶವಾಗಿರುವುದರಿಂದಾಗಿ ಸಫಾರಿಗೆ ಬರುವುದಕ್ಕೆ ಬಹಳಷ್ಟು ಪ್ರವಾಸಿಗರು ಉತ್ಸುಕತೆ ತೋರುತ್ತಾರೆ. ರಾಜ್ಯದ ಜೊತೆಗೆ ಹೊರರಾಜ್ಯಗಳಿಂದಲೂ, ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಲು ಅರಣ್ಯ ಇಲಾಖೆಯ ವಾಹನಗಳಲ್ಲಿ ಸಫಾರಿ ಮಾಡುತ್ತಾರೆ. ಇದರಿಂದ ಅರಣ್ಯ ಇಲಾಖೆಯು ಪ್ರಮುಖ ಆದಾಯದ ಮೂಲವನ್ನು ಕಂಡುಕೊಂಡಿದೆ.

ಅಲ್ಲದೇ, ‘ವನ್ಯಜೀವಿ/ಪರಿಸರ ಪ್ರವಾಸೋದ್ಯಮ’ವೂ ನಡೆಯುತ್ತಿದೆ. ರೆಸಾರ್ಟ್ಗಳು, ಸುತ್ತಮುತ್ತಲಿನ ಹೋಂಸ್ಟೇ ಹಾಗೂ ಹೋಟೆಲ್ಗಳು ಆದಾಯ ಕಂಡುಕೊಳ್ಳುತ್ತಿವೆ. ನೂರಾರು ಮಂದಿ ಕೆಲಸವನ್ನೂ ಕಂಡುಕೊಂಡಿದ್ದಾರೆ.

ಅರಣ್ಯ ಇಲಾಖೆಯಿಂದ ಪಡೆದಿರುವ ಅಧಿಕೃತ ಮಾಹಿತಿಯ ಪ್ರಕಾರ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಸಫಾರಿ ಚಟುವಟಿಕೆಯಿಂದ ಅಂದಾಜು ₹ 10 ಕೋಟಿಯಿಂದ ₹ 12 ಕೋಟಿ ವಾರ್ಷಿಕ ಆದಾಯ ಬಂದಿತ್ತು. 2025ರ ನ.7ರಿಂದ 2026ರ ಫೆ.21ರವರೆಗೆ ಸಫಾರಿಗೆ ನಿರ್ಬಂಧ ವಿಧಿಸಿದ್ದರಿಂದಾಗಿ ಸರ್ಕಾರಕ್ಕೆ ಅಂದಾಜು ₹ 2 ಕೋಟಿಯಿಂದ ₹ 3 ಕೋಟಿ ನಷ್ಟವಾಗಿದೆ.

ಅಂತೆಯೇ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಸಫಾರಿ ಚಟುವಟಿಕೆಯಿಂದ ಅಂದಾಜು ₹ 12 ಕೋಟಿ ವಾರ್ಷಿಕ ಆದಾಯ ದೊರೆತಿತ್ತು. ನ.7ರಿಂದ 2026ರ ಫೆ.21ರವರೆಗೆ ಸಫಾರಿಗೆ ನಿರ್ಬಂಧ ವಿಧಿಸಿದ್ದರಿಂದಾಗಿ ಸರ್ಕಾರಕ್ಕೆ ₹ 3.50 ಕೋಟಿ ನಷ್ಟ ಉಂಟಾಗಿದೆ ಎಂದು ಅರಣ್ಯ ಜೀವಿವಿಜ್ಞಾನ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ. ವಿಧಾನಪರಿಷತ್ ಸದಸ್ಯ, ಮೈಸೂರಿನ ಕೆ.ಶಿವಕುಮಾರ್ ಅವರು ವಿಧಾನಮಂಡಲ ಅಧಿವೇಶನದಲ್ಲಿ ಈ ಬಗ್ಗೆ ಗಮನಸೆಳೆದಿದ್ದರು.

ಜಿಲ್ಲೆಯ ಸರಗೂರು ತಾಲ್ಲೂಕಿನ ಕಾಡಂಚಿನಲ್ಲಿ ಹುಲಿ ದಾಳಿ ಹೆಚ್ಚಿದ ಹಾಗೂ 15 ದಿನಗಳ ಅಂತರದಲ್ಲೇ ಮೂವರು ಬಲಿಯಾದ ಕಾರಣ, ಸ್ಥಳೀಯರು ಮತ್ತು ರೈತ ನಾಯಕರ ಹೋರಾಟದ ಮೇರೆಗೆ ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯಲ್ಲಿ ಸಫಾರಿಯನ್ನು ಹಾಗೂ ಚಾರಣವನ್ನು ಹೋದ ವರ್ಷದ ನ.7ರಿಂದ ಬಂದ್ ಮಾಡಲಾಗಿತ್ತು. ಬಳಿಕ, ಈ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮದ ಸಾಮರ್ಥ್ಯವನ್ನು ನಿರ್ಣಯಿಸಲು ರಚಿಸಲಾಗಿದ್ದ ತಾಂತ್ರಿಕ ಸಮಿತಿ ಸಲ್ಲಿಸಿದ ವರದಿ ಆಧರಿಸಿ, ಷರತ್ತಿಗೆ ಒಳಪಟ್ಟು ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಪುನರಾರಂಭಿಸಲಾಗಿದೆ.

ದೇಶದ ವಿವಿಧೆಡೆಯಿಂದ ಹಾಗೂ ವಿದೇಶಗಳಿಂದ ಬರುವ ಪ್ರವಾಸಿಗರೆಂದೇ ಬಂಡೀಪುರ, ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿ ನಡೆಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಸಫಾರಿ ಶುಲ್ಕವನ್ನೂ ಹೆಚ್ಚಿಸಲಾಗಿತ್ತು. ರಾಜ್ಯ ಸರ್ಕಾರದ ಜೆಎಲ್ಆರ್ (ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ)ನಿಂದ ಪ್ರವಾಸಿಗರಿಗೆ ವಿವಿಧ ರೀತಿಯ ಪ್ಯಾಕೇಜ್ಗಳನ್ನು ರೂಪಿಸಿ ಆಕರ್ಷಿಸಲಾಗುತ್ತಿದೆ.

ಮೂರು ಕಡೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಂಡೀಪುರ (ಮೇಲುಕಾಮನಹಳ್ಳಿ) ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುಂಕದಕಟ್ಟೆ ಹಾಗೂ ನಾಗರಹೊಳೆಯಲ್ಲಿ ಅರಣ್ಯ ಇಲಾಖೆ ಮತ್ತು ಜೆಎಲ್ಆರ್ (ರಾಜ್ಯ ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್)ನಿಂದ ಸಫಾರಿಗೆ ಅನುಮತಿಸಲಾಗಿದ್ದು, ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಈ ಪ್ರದೇಶಗಳಲ್ಲಿ ‘ಸಫಾರಿ’ ಜೊತೆಗೆ, ಜೆಎಲ್ಆರ್, ಗ್ರೀನ್ ಎಂಟ್ರಿ, ಪಾರ್ಕಿಂಗ್, ವಸತಿ ವ್ಯವಸ್ಥೆ, ಇಡಿಸಿ ಚಟುವಟಿಕೆಗಳು, ದಂಡಗಳು ಆದಾಯದ ಮೂಲಗಳಾಗಿವೆ.

ವ್ಯಾಪ್ತಿ ಎಷ್ಟಿದೆ?

ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು 3 ಉಪವಿಭಾಗ ಮತ್ತು 13 ವಲಯಗಳನ್ನು ಒಳಗೊಂಡಿದೆ.

1,036.202 ಚ.ಕಿ.ಮೀ. ವ್ಯಾಪ್ತಿ (872.24 ಚ.ಕಿ.ಮೀ. ಕೋರ್, 121.074 ಚ.ಕಿ.ಮೀ. ಬಫರ್ ಹಾಗೂ 42.618 ಚ.ಕಿ.ಮೀ. ಸೆಕ್ಷನ್–4) ಹೊಂದಿದೆ. ಇದರ ವ್ಯಾಪ್ತಿಯಲ್ಲಿ, 2023–24ನೇ ಸಾಲಿನ ಸರ್ವೆ ಪ್ರಕಾರ, 160 ಹುಲಿಗಳು ಹಾಗೂ 1,116 ಆನೆಗಳಿಗೆ. 2024–25ನೇ ಸಾಲಿನಲ್ಲಿ 1,66,310 ಮಂದಿ ಸಫಾರಿಗೆ ಭೇಟಿ ನೀಡಿದ್ದಾರೆ. ಅವರಲ್ಲಿ 1,63,701 ಮಂದಿ ಭಾರತೀಯರು ಹಾಗೂ 2,609 ವಿದೇಶಿಯರು. ಇದರಿಂದ ₹ 12.74 ಕೋಟಿ ಆದಾಯ ಬಂದಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವು ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಒಟ್ಟು 843.962 ಚ.ಕಿ.ಮೀ. (643.392 ಚ.ಕಿ.ಮೀ. ಕೋರ್, 200.570 ಚ.ಕಿ.ಮೀ. ಬಫರ್ ಸೇರಿ) ವ್ಯಾಪ್ತಿ ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.