ಮೈಸೂರು: ‘ನಗರದ 100 ಅಟಿ ರಸ್ತೆಯಲ್ಲಿರುವ ಇಂಡಿಯನ್ ಓವರ್ಸೀಸ್ ಬ್ಯಾಂಕ್ ವ್ಯವಸ್ಥಾಪಕರು ಕನ್ನಡ ಮಾತನಾಡುತ್ತಿಲ್ಲ’ ಎಂದು ಆರೋಪಿಸಿ ಉಪನ್ಯಾಸಕ ಬಾಲು ಎಸ್.ರಂಗಸ್ವಾಮಿ ಹಾಗೂ ಕನ್ನಡ ವೇದಿಕೆ ಸದಸ್ಯರು ಗುರುವಾರ ಅವರನ್ನು ತರಾಟೆಗೆ ತೆಗೆದುಕೊಂಡರು.

ರಂಗಸ್ವಾಮಿ ಅವರು ಬ್ಯಾಂಕ್ ಒಳಗಿರುವ ಎಟಿಎಂ ಹಾಳಾಗಿರುವುದರ ಕುರಿತ ಸೂಚನಾ ಫಲಕವನ್ನು ಹೊರಗಡೆ ಇಡುವಂತೆ ಮನವಿ ಮಾಡಿದರು.

‘ಈ ವೇಳೆ ವ್ಯವಸ್ಥಾಪಕರು ಇಂಗ್ಲಿಷ್ನಲ್ಲಿ ಮಾತನಾಡಿದರು. ಕನ್ನಡದಲ್ಲಿ ಉತ್ತರಿಸಿ ಎಂದಾಗ ಅವರು ಹಾಗೂ ಸಿಬ್ಬಂದಿ ಅನುಚಿತವಾಗಿ ವರ್ತಿಸಿದರು’ ಎಂದು ರಂಗಸ್ವಾಮಿ ದೂರಿದರು.

‘ನಂತರ ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಗೋಪಿ, ಬಾಬು, ರೈತಪರ್ವ ಅರುಣ್ ಕುಮಾರ್, ಮಲ್ಲೇಶ್ ತೆರಳಿ ಅವರಿಗೆ ತಪ್ಪಿನ ಮನವರಿಕೆ ಮಾಡಿದಾಗ, ತಪ್ಪು ಒಪ್ಪಿಕೊಂಡರು’ ಎಂದು ಅವರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-37-1054450704

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.