ತಿ.ನರಸೀಪುರ: ‘ಕಾಯಕವೇ ಕೈಲಾಸ’ ಎಂಬ ಸಂದೇಶ ಸಾರಿ ಪ್ರತಿಯೊಬ್ಬರ ಬದುಕಿಗೆ ಶ್ರಮದ ಮಹತ್ವ ತಿಳಿಸಿದ ಬಸವಣ್ಣನವರು ಮಾನವ ಸಮಾಜಕ್ಕೆ ದಾರಿದೀಪ ಎಂದು ಹಲವಾರ ಮುಡುಕನಪುರ ಮಠದ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಲವಾರ ಗ್ರಾಮದ ಬಸವೇಶ್ವರ ಗೆಳೆಯರ ಬಳಗದ ವತಿಯಿಂದ ಬಸವೇಶ್ವರ ವೃತ್ತದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವದಲ್ಲಿ ಬಸವೇಶ್ವರರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಪ್ರತಿಯೊಬ್ಬರೂ ತಮ್ಮ ಶ್ರಮದಿಂದ ಬದುಕು ಕಟ್ಟಿಕೊಳ್ಳಬೇಕು. ದುಡಿಮೆಗೆ ಗೌರವ ಸಿಗಬೇಕು ಎಂದ ಬಸವಣ್ಣ, ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದರು ಎಂದರು.

‘ಇಂದಿನ ಸಮಾಜಕ್ಕೆ ಬಸವ ತತ್ವ ಅಗತ್ಯ ಇದೆ. ಜಾತಿ, ಮತ, ಪಂಥಗಳ ಭೇದಗಳನ್ನು ಮೀರಿ ಪ್ರೀತಿ, ವಿಶ್ವಾಸ ಮತ್ತು ಸಹಬಾಳ್ವೆಯ ಸಂದೇಶವನ್ನು ನಾವು ಅಳವಡಿಸಿಕೊಳ್ಳಬೇಕು. ಬಸವಣ್ಣನವರು ಕಟ್ಟಿಕೊಟ್ಟ ಅನುಭವ ಮಂಟಪವು ಪ್ರಜಾಪ್ರಭುತ್ವದ ಮೊದಲ ಪಾಠಶಾಲೆಯಾಗಿತ್ತು. ಕಾಯಕ ಮತ್ತು ದಾಸೋಹದ ತತ್ವಗಳನ್ನು ಜಗತ್ತಿಗೆ ನೀಡಿದ ಬಸವಣ್ಣನವರ ಚಿಂತನೆಗಳ ಸ್ಮರಣೆ ನಮಗೆ ಆತ್ಮವಿಮರ್ಶೆ, ಸಮಾಜಮುಖಿ ಚಿಂತನೆಯ ಪ್ರೇರಣೆಗೆ ಪವಿತ್ರ ಕ್ಷಣ’ ಎಂದು ಹೇಳಿದರು.

ಅರೆಬೊಮ್ಮನಹಳ್ಳಿ ಪಾರಮಾರ್ಥಿಕ ಮಠದ ಪೀಠಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಅಸಮಾನತೆ, ಮೌಢ್ಯ ಮತ್ತು ಅನ್ಯಾಯಗಳ ವಿರುದ್ಧ ಹೋರಾಡಿದ ಬಸವಣ್ಣನವರ ಅನುಭವ ಮಂಟಪವು ವಿಶ್ವದ ಮೊದಲ ಪ್ರಜಾಪ್ರಭುತ್ವದ ವೇದಿಕೆ. ಅಲ್ಲಿ ಜಾತಿ, ಲಿಂಗ, ಆಸ್ತಿ-ಪಾಸ್ತಿಗಳ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗಿತ್ತು. ಇದು ಬಸವಣ್ಣನವರ ದೂರದೃಷ್ಟಿ ಮತ್ತು ಮಾನವೀಯತೆಯ ಪ್ರತೀಕವಾಗಿದೆ’ ಎಂದರು.

‘ಯುವಕರು ಬಸವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ನೈತಿಕತೆ, ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವ ಬೆಳೆಯುತ್ತದೆ. ಬಸವಣ್ಣನವರು ಕನಸು ಕಂಡ ಸಮಸಮಾಜದ ನಿರ್ಮಾಣ ನಮ್ಮೆಲ್ಲರ ಸಂಕಲ್ಪವಾಗಬೇಕು’ ಎಂದು ಹೇಳಿದರು.

ರೈತ ಮುಖಂಡ ಕರೋಹಟ್ಟಿ ಕುಮಾರಸ್ವಾಮಿ, ನೆರಗ್ಯಾತನಹಳ್ಳಿ ಮಠದ ಶಿವಕುಮಾರ ಸ್ವಾಮಿ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಬಿ.ಎಂ.ಶಿವಮಲ್ಲಪ್ಪ ಕಿರಗಸೂರು ಮಹದೇವ ಸ್ವಾಮಿ, ಹೆಳವರಹುಂಡಿ ರಾಜಶೇಖರ, ಬಜ್ಜಿ ನಿಂಗಪ್ಪ, ಮಾಯಪ್ಪ, ಸಿದ್ದಲಿಂಗಸ್ವಾಮಿ, ದೊಡ್ಡನಹುಂಡಿ ನಂಜುಂಡಸ್ವಾಮಿ, ಧರ್ಮಯ್ಯನಹುಂಡಿ ಕುಮಾರ, ರೈತ ಮುಖಂಡ ಈ. ರಾಜು ಸೇರಿದಂತೆ ಗ್ರಾಮಸ್ಥರು, ಸಂಘದ ಸದಸ್ಯರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-38-1624101514

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.