ಮೈಸೂರು: ‘ವಿಚಾರ ಆಧಾರಿತ ರಾಜಕಾರಣ ಬಿಜೆಪಿಯ ಶಕ್ತಿ. ಹೀಗಾಗಿ ಅಧಿಕಾರದಲ್ಲಿ ಇದ್ದಾಗಲೂ, ಇಲ್ಲದಾಗಲೂ ವಿಚಾರ ಬಿಟ್ಟುಕೊಡಲಿಲ್ಲ’ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದರು.

ಮೈಸೂರು ನಗರ ಬಿಜೆಪಿಯಿಂದ ಹುಣಸೂರು ರಸ್ತೆಯ ಪ್ರಜಾಪಿತ ಬ್ರಹ್ಮ ಕುಮಾರಿ ಆಶ್ರಮದಲ್ಲಿ ಸೋಮವಾರದಿಂದ ಆಯೋಜಿಸಿರುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ - 2026 ಉದ್ಘಾಟಿಸಿ ಮಾತನಾಡಿದರು.

‘ಶಿಸ್ತಿಲ್ಲದ ಪಕ್ಷ ಬೆಳೆಯಲು ಸಾಧ್ಯವಿಲ್ಲ. ಅಂತಹ ಪಕ್ಷ ಭವಿಷ್ಯದಲ್ಲಿ ಯಾವ ಸ್ಥಿತಿಗೆ ಬಂದಿದೆ ಎಂದು ಕಣ್ಣಾರೆ ನೋಡಿದ್ದೇವೆ. ಪಕ್ಷದ ಹೆಸರಿನಲ್ಲಿ ಗೌರವ ಪಡೆಯುವ ಪ್ರತಿಯೊಬ್ಬನೂ ಪಕ್ಷದ ಮೂಲ ಸಿದ್ಧಾಂತ ತಿಳಿಯಬೇಕು ಎಂಬ ಕಾರಣಕ್ಕೆ ಪ್ರಶಿಕ್ಷಣ ವರ್ಗ ಆರಂಭವಾಗಿದೆ. ಪಕ್ಷದ ಕಾರ್ಯಕರ್ತ ಬಲಿಷ್ಠನಾದಾಗ ಪಕ್ಷ ಬಲಿಷ್ಠವಾಗುತ್ತದೆ’ ಎಂದು ಹೇಳಿದರು.

‘ರಾಜಕಾರಣದಲ್ಲಿ ವಿಚಾರಗಳನ್ನು ಒಳಗಿಟ್ಟುಕೊಂಡು ಭಾವನಾತ್ಮಕ ಪ್ರತಿಕ್ರಿಯೆ ನೀಡಿದರೆ ಕಾರ್ಯಕರ್ತ ಬೆಳವಣಿಗೆಯಾಗುವುದಿಲ್ಲ. ಬಿಜೆಪಿ ದೇಶ ಪ್ರಥಮ ಪರಿಕಲ್ಪನೆಯಲ್ಲಿ ಕೆಲಸ ಮಾಡಿದೆ. ಅಧಿಕಾರ ಇಲ್ಲದಾಗ ಪ್ರತಿಪಾದಿಸಿದ ಅಯೋಧ್ಯೆ ಶ್ರೀರಾಮ ಮಂದಿರದ ನಿರ್ಮಾಣ, ಆರ್ಟಿಕಲ್ 370 ಅನುಷ್ಠಾನವನ್ನು ಅಧಿಕಾರ ಬಂದ ಬಳಿಕ ಮಾಡಿ ತೋರಿಸಿದ್ದೇವೆ. ಸ್ವಾಭಿಮಾನಿ, ಸಮೃದ್ಧಿ, ದೇಶದ ವಿಚಾರಕ್ಕೆ ಬದ್ಧವಾದ ರಾಜಕೀಯ ನೀತಿ ಬರಲು ಬಿಜೆಪಿ ರೂಪುಗೊಂಡಿತು’ ಎಂದರು.

‘ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬ ಹಿರಿಯರ ವಿಚಾರಕ್ಕೆ ಬದ್ಧವಾಗಿ ನಾವು ಕೆಲಸ ಮಾಡಬೇಕು. ಕಾರ್ಯಕರ್ತ ಪಕ್ಷದ ಶಕ್ತಿ. ಅವರು ಯೋಜನೆಗಳನ್ನು ಜನರ ಬಳಿಗೆ ತಲುಪಿಸಿದ್ದರಿಂದ ಮೋದಿ ಕಾರ್ಯಕ್ರಮ ಯಶಸ್ವಿಯಾಯಿತು. ಎಲ್ಲರೂ ವಿವೇಕಾನಂದ, ಮೋದಿ ಆಗಲು ಸಾಧ್ಯವಿಲ್ಲ. ಆದರೆ ವಿಚಾರಗಳನ್ನು ಅಳವಡಿಸಿಕೊಂಡು ನಾಯಕತ್ವ ಬೆಳೆಸಿಕೊಳ್ಳಬೇಕು. ಟೀಕೆಯಲ್ಲಿ ಅಡಗಿರುವ ಸುಳ್ಳು, ಹೊಗಳಿಕೆಯಲ್ಲಿನ ಸತ್ಯ ಅರಿತವ ಯಶಸ್ವಿಯಾಗುತ್ತಾನೆ. ಮೈಸೂರಿನಲ್ಲಿ ಕಳೆದುಕೊಂಡದನ್ನು ಮತ್ತೆ ಪಡೆದುಕೊಳ್ಳಲು ಕಾರ್ಯಕರ್ತರ ಒಗ್ಗಟ್ಟು ಅಗತ್ಯ’ ಎಂದು ಸಲಹೆ ನೀಡಿದರು.

ಸಂಸದ ಯದುವೀರ್ ಒಡೆಯರ್, ‘ಕಾರ್ಯಕರ್ತರೇ ಬಿಜೆಪಿಯ ಬೇರು. ಅವರೇ ನಮ್ಮ ನಾಯಕರು. ಭಾರತೀಯ ಸಿದ್ಧಾಂತವೇ ನಮ್ಮ ಸಿದ್ಧಾಂತವಾಗಿರುವುದರಿಂದ ರಾಷ್ಟ್ರವೇ ನಮ್ಮನ್ನು ಒಪ್ಪಿಕೊಂಡಿದೆ. ಮುಖ್ಯಮಂತ್ರಿಗಳ ತವರುಜಿಲ್ಲೆಯಲ್ಲಿ ಅವರನ್ನು ಹೇಗೆ ಎದುರಿಸುತ್ತೇವೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ದುರಾಡಳಿತದ ಬಗ್ಗೆ ಜನರಿಗೆ ತಿಳಿಸಿ, ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕು’ ಎಂದರು.

ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನಪರಿಷತ್ ಮಾಜಿ ಸದಸ್ಯರಾದ ತೋಂಟದಾರ್ಯ, ಸಿದ್ದರಾಜು, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ಮಾಜಿ ಮೇಯರ್ಗಳಾದ ಶಿವಕುಮಾರ್, ಸಂದೇಶ್ ಸ್ವಾಮಿ, ಮಹಿಳಾ ಮೋರ್ಚಾದ ಮಾಳವಿಕಾ ಅವಿನಾಶ್, ಹೇಮಾ ನಂದೀಶ್, ಅಲ್ಪಸಂಖ್ಯಾತರ ಮೋರ್ಚಾ ರಾಜ್ಯಾಧ್ಯಕ್ಷ ಅನಿಲ್ ಥಾಮಸ್, ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ. ನಿಂಗರಾಜಗೌಡ, ಮುಖಂಡರಾದ ಬಿ.ಎಂ. ರಘು, ಅರುಣ್ ಕುಮಾರ್ ಗೌಡ, ಸೋಮಸುಂದರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-39-817786467

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.