ಮೈಸೂರು: ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ 100 ದಾನಿಗಳನ್ನು ಸತ್ಕರಿಸುವ ಮೂಲಕ ಭಾನುವಾರ ನಗರದಲ್ಲಿ ರಕ್ತದಾನಿಗಳ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಲಯನ್ಸ್ ಬ್ಲಡ್ ಸೆಂಟ್ ಜೀವಧಾರ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್, ಬ್ಲಡ್ ಆನ್ ಕಾಲ್ ಕ್ಲಬ್ ಸಹಯೋಗದಲ್ಲಿ ಜೆ.ಕೆ. ಮೈದಾನದ ಅಮೃತ ಮಹೋತ್ಸವ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಮಂದಿ ರಕ್ತದಾನಿಗಳು ಪಾಲ್ಗೊಂಡು ಸಂಭ್ರಮಿಸಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮ ಮತ್ತು ಬೇಬಿಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ‘ಅನ್ನದಾಸೋಹಿಗಳಿಗೆ ದಾಸೋಹ ದಿನ ಎಂದು ಮಾಡುತ್ತಿದ್ದೀರಿ. ಅಂತೆಯೇ ರಕ್ತ ನೀಡುವವರಿಗೆ ರಕ್ತದಾನಿಗಳ ದಿನ ಆಚರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕು’ ಎಂದು ಆಗ್ರಹಿಸಿದರು.

‘ಒಂದು ಜೀವ ಜೀವಂತವಾಗಿ ಇರಲು ರಕ್ತ ಅಷ್ಟೇ ಮುಖ್ಯವಾಗುತ್ತದೆ. ನಮ್ಮ ಹೃದಯ ಒಂದು ಹನಿ ರಕ್ತ ಪಡೆದು ಅದನ್ನು ಶುದ್ಧೀಕರಿಸಿ ಎಲ್ಲ ಅಂಗಗಳಿಗೂ ಹಂಚಿಕೆ ಮಾಡುತ್ತದೆ. ಅಂತಹ ರಕ್ತವನ್ನು ಹೊರಗಿನಿಂದ ನೀಡುವ ರಕ್ತದಾನಿಗಳು ನಿಜವಾದ ಹೃದಯವಂತರಾಗಿದ್ದಾರೆ’ ಎಂದರು.

ಶಾಸಕ ಕೆ.ಹರೀಶ್ ಗೌಡ, ‘ನಾನು 35ಕ್ಕೂ ಹೆಚ್ಚು ಬಾರಿ ರಕ್ತ ದಾನ ಮಾಡಿದ್ದೇನೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಇಂಥವು ಸಮಾಜಕ್ಕೆ ಅಗತ್ಯವಾಗಿವೆ’ ಎಂದು ಹೇಳಿದರು.

ಡಿಸಿಪಿ ಕೆ.ಎಸ್. ಸುಂದರ್ ರಾಜ್, ಕಿರುತೆರೆ ನಟಿ ಮೀನಾಕ್ಷಿ, 310 ಬಾರಿ ರಕ್ತದಾನ ಮಾಡಿದ ವಿ.ಭೂಪೇಂದ್ರನ್, 275 ಬಾರಿ ರಕ್ತದಾನ ಮಾಡಿದ ಎಸ್.ಭಾಸ್ಕರ್ ರಾವ್, ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ಲಯನ್ಸ್ ಬ್ಲಡ್ ಸೆಂಟರ್ ಜೀವಾಧಾರ ಸಂಸ್ಥಾಪಕ ಟ್ರಸ್ಟಿ ಮನೋಜ್ ಕುಮಾರ್, ಮ್ಯಾನೇಜಿಂಗ್ ಟ್ರಸ್ಟಿ ಎಸ್.ಇ. ಗಿರೀಶ್, ಕಾರ್ಯನಿರ್ವಾಹಕ ಟ್ರಸ್ಟಿ ಸಿ.ಜೆ. ಮುತ್ತಣ್ಣ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಬ್ಲಡ್ ಆನ್ ಕಾಲ್ ಕ್ಲಬ್ ಸಂಸ್ಥಾಪಕ ದೇವೇಂದ್ರ ಕುಮಾರ್, ಆನಂದ್ ಮಂದೂತ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-39-418982891

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.