ಮೈಸೂರು: ವಿಜಯನಗರ ಒಂದನೇ ಹಂತದಲ್ಲಿರುವ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ ಕರ್ನಾಟಕ ಬುದ್ಧ ಧಮ್ಮ ಸಮಿತಿಯು ಭಾನುವಾರ (ಮಾ.29) ‘ಬುದ್ಧ ಮೂರ್ತಿ ಪ್ರತಿಷ್ಠಾಪನೆ’ ಕಾರ್ಯಕ್ರಮ ಆಯೋಜಿಸಿದೆ.

‘ನಾಗಪುರದ ಅಲೋಕ ಬುದ್ಧವಿಹಾರದ ವಿನಯ ರಕ್ಖಿತ ಭಂತೇಜಿ ಸಮ್ಮುಖದಲ್ಲಿ ಪರಿತ್ರಾಣ ಪಠಣ, ಪಂಚಶೀಲ ಬೋಧನೆ, ಮೈತ್ರಿ ಧ್ಯಾನ, ಧಮ್ಮೋಪದೇಶ ನಡೆಯಲಿದೆ. ಮನೋರಕ್ಖಿತ ಭಂತೇಜಿ, ಕರ್ಮರಿಂಪೂಚಿ ಭಂತೇಜಿ, ಬೋಧಿದತ್ತ ಭಂತೇಜಿ, ಬುದ್ದಪ್ರಕಾಶ್ ಭಂತೇಜಿ, ಭೋದಿರತ್ನ ಭಂತೇಜಿ, ಬಿಎಸ್ಐ ಸಂಘನಾಯಕ ಭಂತೆ ಕಲ್ಯಾಣಸಿರಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.

‘ಜ್ಞಾನಪ್ರಕಾಶ ಸ್ವಾಮೀಜಿ ಸಮ್ಮಖದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಬುದ್ಧ ಧಮ್ಮ ಸಮಿತಿಯ ಅಧ್ಯಕ್ಷ ಪ್ರೊ.ಡಿ.ನಂಜುಂಡಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ‘ಸಿದ್ಧಾರ್ಥ ಬುದ್ಧ ವಿಹಾರ ನಡೆದು ಬಂದ ದಾರಿ’ ಎಂಬ ಪುಸ್ತಕವನ್ನು ಕರ್ನಾಟಕ ಧಮ್ಮ ಸಮಿತಿ ಒಕ್ಕೂಟದ ಗೌರವ ಅಧ್ಯಕ್ಷ ಬಿ.ಗೋಪಾಲ್, ‘ರೋಗಮುಕ್ತ ಸಮಾಜ ಮತ್ತು ಬುದ್ಧ ಧಮ್ಮ’ ಪುಸ್ತಕವನ್ನು ಬೆಸ್ಟ್ ಸಂಸ್ಥೆಯ ಕಾರ್ಯದರ್ಶಿ ಜಗನ್ನಾಥ್ ಬಿಡುಗಡೆ ಗೊಳಿಸಲಿದ್ದಾರೆ. ಬೆಂಗಳೂರಿನ ಪ್ರದೇಶಾಭಿವೃದ್ಧಿ ಮಂಡಳಿ ಯೋಜನಾ ಇಲಾಖೆಯ ಡಿ.ಚಂದ್ರಶೇಖರಯ್ಯ ಭಾಗವಹಿಸಲಿದ್ದಾರೆ’ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-39-712106311

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.