ಮೈಸೂರು: ‘ವಿಶ್ವಮೈತ್ರಿ ಬುದ್ಧ ವಿಹಾರದಿಂದ ಮೇ 1ರಂದು ಸಂಜೆ 5.30ಕ್ಕೆ ನಗರದ ಅಶೋಕ ವೃತ್ತದ ಬುದ್ಧ ವಿಹಾರದಲ್ಲಿ ಭಗವಾನ್ ಬುದ್ಧರ 2570ನೇ ಜನ್ಮದಿನಾಚರಣೆ ಆಯೋಜಿಸಲಾಗಿದೆ’ ಎಂದು ವಿಹಾರದ ಮುಖ್ಯಸ್ಥ ವಿ.ಪುರುಷೋತ್ತಮ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಹಾರದ ಕಲ್ಯಾಣಸಿರಿ ಭಂತೇಜಿ ಹಾಗೂ ಮಹಾಬೋಧಿ ಮಂಡಲದ ನಿರ್ದೇಶಕ ಸೊಬಾನ ಭಂತೇಜಿ ಸಮ್ಮುಖದಲ್ಲಿ ಗೃಹಸಚಿವ ಜಿ.ಪರಮೇಶ್ವರ್ ಕಾರ್ಯಕ್ರಮ ಉದ್ಘಾಟಿಸುವರು. ಸಚಿವ ಡಾ. ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆ ವಹಿಸುವರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್.ಶ್ರೀವತ್ಸ, ಭಾಗ್ಯಲಕ್ಷ್ಮಿ ಶ್ರೀನಿವಾಸಪ್ರಸಾದ್ ಪಾಲ್ಗೊಳ್ಳುವರು. ಮಹಾರಾಜ ಕಾಲೇಜು ಪ್ರಾಂಶುಪಾಲ ವಿ.ಷಣ್ಮುಗಂ ಮುಖ್ಯ ಭಾಷಣ ಮಾಡುವರು’ ಎಂದರು.

‘ಅಂದು ಬೆಳಿಗ್ಗೆ 8.30ಕ್ಕೆ ಪುರಭವನದಿಂದ ಕಲಾಮಂದಿರದವರೆಗೆ ಬುದ್ಧಮೂರ್ತಿ ಮೆರವಣಿಗೆ ನಡೆಯಲಿದೆ. ಅಮ್ಮರಾಮಚಂದ್ರ, ಮರಿಸ್ವಾಮಿ ತಂಡದಿಂದ ಬುದ್ಧಗಾಯನ ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಮುಖರಾದ ಮಹೇಶ್, ನಾಗರಾಜು, ಸೋಮಯ್ಯ ಮಲೆಯೂರು, ಮಂಜುನಾಥ್, ಪುಟ್ಟರಾಜು, ರಮೇಶ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-39-1012497488

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.