ಮೈಸೂರು: ‘ಜಗತ್ತು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳಿಗೆ ಭಗವಾನ್ ಬುದ್ಧನೇ ಅಂತಿಮ ಪರಿಹಾರ’ ಎಂದು ಸಾಹಿತಿ ಕೆ.ಪಿ. ಮಹಾದೇವಯ್ಯ ಹೇಳಿದರು.

ಇಲ್ಲಿನ ಕಲಾಮಂದಿರ ಆವರಣದ ಚಿಂತಕರ ಚಾವಡಿಯಲ್ಲಿ ತನುಮನ ಸಂಸ್ಥೆಯಿಂದ ಶನಿವಾರ ಆಯೋಜಿಸಿದ್ದ ‘ಧಮ್ಮ ಸಂಗೀತಯಾನ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಜಗತ್ತು ಯುದ್ಧ ಯುದ್ಧ ಎಂದು ಆ ದಿಕ್ಕಿನಲ್ಲಿ ಸಾಗುತ್ತಿರುವುದು ಅಪಾಯಕಾರಿಯಾಗಿದೆ. ಹೀಗಾಗಿ, ಬುದ್ಧರ ಕರುಣೆ, ಮೈತ್ರಿ, ಮಮತೆ, ಸಹ ಜೀವನ ಈಗ ಬಹಳ ಅಗತ್ಯವಿದೆ’ ಎಂದರು.

ನೃತ್ಯ ಕಲಾವಿದ ಸಂತೋಷ್, ‘ಹಲವು ಕಲೆಗಳಿಗೆ ಬುದ್ಧ ಧಮ್ಮ ಅಡಿಪಾಯವಾಗಿದೆ. ಧಮ್ಮ ಸಂದೇಶ ಸಾರಲು ಲಕ್ಷ್ಮಿರಾಮ್ ಅವರು ಈ ಕಾರ್ಯಾಗಾರ ಆಯೋಜಿಸಿರುವುದು ಶ್ಲಾಘನೀಯ’ ಎಂದು ಹೇಳಿದರು.

ಗಾಯಕ ಲಕ್ಷ್ಮಿರಾಮ್ ಮತ್ತು ಆರ್. ರೂಪಾ ಶಿಬಿರಾರ್ಥಿಗಳಿಗೆ ಅಂಬೇಡ್ಕರ್ ಗೀತೆಗಳನ್ನು ಪರಿಚಯಿಸಿದರು. ಹಿನಕಲ್ ಸೋಮಣ್ಣ, ಸುಕನ್ಯಾ ಶಿವರಾಮ, ಚಂದ್ರ, ಲಲಿತಾದ್ರಿಪುರ ಶಿವು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-39-1207927259

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.