ಮೈಸೂರು: ತಾಲ್ಲೂಕಿನ ಮೋಸಂಬಾಯನಹಳ್ಳಿ ಬಳಿ ಸ್ಕೂಟರ್ ಹಾಗೂ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಸ್ಕೂಟರ್ ಸವಾರ ಮೃತಪಟ್ಟಿದ್ದಾರೆ.

ನಂಜನಗೂಡು ತಾಲ್ಲೂಕು ಹದಿನಾರು ಮೋಳೆ ಗ್ರಾಮದ ನಿವಾಸಿ ಚಿನ್ನಸ್ವಾಮಿ (71) ಮೃತಪಟ್ಟವರು. ‘ಅವರು ಭಾನುವಾರ ಮೇ 10 ರಂದು ತಾಲ್ಲೂಕಿನ ಭುಗತಹಳ್ಳಿ ಬಳಿ ಸ್ನೇಹಿತನ ಮಗನ ಮದುವೆಗೆ ಹೋಗಿ ಬರುವುದಾಗಿ ಹೇಳಿ ಸ್ಕೂಟರ್ ಮೂಲಕ ತಿ.ನರಸೀಪುರ ರಸ್ತೆಯಲ್ಲಿ ಬರುತ್ತಿದ್ದರು. ಈ ವೇಳೆ ಮೋಸಂಬಾಯನಹಳ್ಳಿ ಗೇಟ್ ಬಳಿ ಕೆಎಸ್ಆರ್ಟಿಸಿ ಬಸ್ ಸ್ಕೂಟರ್ಗೆ ಡಿಕ್ಕಿ ಹೊಡೆಯಿತು.

ಮೈಸೂರು: ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿರುವ ವರುಣ ಠಾಣೆ ಪೊಲೀಸರು, ಜೂಜಾಟದಲ್ಲಿ ತೊಡಗಿದ್ದ 6 ಮಂದಿಯನ್ನು ಬಂಧಿಸಿ, ₹4,310 ವಶಕ್ಕೆ ಪಡೆದಿದ್ದಾರೆ.

ತಾಲ್ಲೂಕಿನ ಸಜ್ಜೆಹುಂಡಿ ಗ್ರಾಮಕ್ಕೆ ತೆರಳುವ ರಸ್ತೆಯ ಬಳಿ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲಿಸರು ಭಾನುವಾರ ಸಂಜೆ 4ಕ್ಕೆ ದಾಳಿ ನಡೆಸಿದರು. ಈ ವೇಳೆ ಜೂಜಾಟದಲ್ಲಿ ತೊಡಗಿದ್ದ ರಂಗಸ್ವಾಮಿ, ಬೀರಯ್ಯ, ಸಿದ್ದರಾಜು, ನಾರಾಯಣ, ಚಂದ್ರ, ನಾಗರಾಜ ಅವರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.

ಮೈಸೂರು: ಶಕ್ತಿನಗರದ ಮಹಿಳೆಗೆ ಫೇಸ್ಬುಕ್ನಲ್ಲಿ ಪರಿಚಯವಾದ ವಿದೇಶಿಗ ಎನ್ನಲಾದ ವ್ಯಕ್ತಿಯು ಆನ್ಲೈನ್ ಮೂಲಕ ₹ 12.65 ಲಕ್ಷ ಪಡೆದು ವಂಚಿಸಿದ್ದು, ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮಹಿಳೆಗೆ ಫೇಸ್ಬುಕ್ ಮೂಲಕ ಲಂಡನ್ ನಿವಾಸಿ ಎಂದು ಹೇಳಿಕೊಂಡ ಡಾ.ಜೋನಾಸ್ ಅಲಿ ಪರಿಚಯವಾಗಿದ್ದು, ಆತ್ಮೀಯವಾಗಿ ಇದ್ದರು. ಕೆಲ ದಿನಗಳ ನಂತರ ಆತ ನಾನು ಇಂಡೋನೇಷಿಯಾಗೆ ತೆರಳಿದ್ದೇನೆ, ಅಲ್ಲಿ ಹಣ ಪಾವತಿ ಸಾಧ್ಯವಾಗುತ್ತಿಲ್ಲ ಎಂದು ₹ 1.85 ಲಕ್ಷ ಪಡೆದಿದ್ದ. ನಂತರ ನಾನು ಭಾರತಕ್ಕೆ ಬಂದಿದ್ದೇನೆ. ನಿಮ್ಮ ಖಾತೆಗೆ ₹25 ಲಕ್ಷ ಹಣ ಹಾಕಬೇಕಿದ್ದು, ಇಲ್ಲಿನ ವಿವಿಧ ಶುಲ್ಕವನ್ನು ಪಾವತಿಸಬೇಕಾಗಿದೆ ಎಂದು ನಂಬಿಸಿ ಹಣ ಪಡೆದಿದ್ದಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-39-1889739893

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.