ಮೈಸೂರು: ಸಾಲ ನೀಡಿದ್ದ ವ್ಯಕ್ತಿ ಹಣ ಕೇಳಲು ಬಂದಾಗ ಅವರ ಮೇಲೆ ಕಾರು ನುಗ್ಗಿಸಿದ್ದೇ ಅಲ್ಲದೆ, ಬಾನೆಟ್ ಮೇಲೆ ಬಿದ್ದರೂ ನಿಲ್ಲಿಸದೆ ಅಪಾಯಕಾರಿಯಾಗಿ ಕಾರು ಚಲಾಯಿಸಿದ ಆರೋಪದ ಮೇರೆಗೆ ಆರ್ಟಿಐ ಕಾರ್ಯಕರ್ತ ಗಂಗರಾಜು ಅವರನ್ನು ಪೊಲೀಸರು ಗುರುವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದರು.

ಧನಂಜಯ್ ಅವರು ನೀಡಿದ ದೂರನ್ನು ಆಧರಿಸಿ ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಪರಮಹಂಸ ವೃತ್ತದ ಬಳಿಯಿರುವ ಸಬ್ ರಿಜಿಸ್ಟ್ರಾರ್ ಕಚೇರಿ ಸಮೀಪದಿಂದ ಹೊರಟ ಕಾರನ್ನು ಸ್ಥಳೀಯರು ಹಾಗೂ ಆಟೊ ಚಾಲಕರು ಅಡ್ಡಗಟ್ಟಿ ನಿಲ್ಲಿಸಿದ್ದರು. ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

‘ಮುಡಾ ಕಚೇರಿಯ ಸಿಬ್ಬಂದಿ ನಂದೀಶ್ ಮೂಲಕ ಆರೋಪಿಯ ಪರಿಚಯವಾಗಿತ್ತು. 2024ರ ಜೂನ್ನಲ್ಲಿ ಜೆಪಿ ನಗರದಲ್ಲಿ ನಿವೇಶನ ಖರೀದಿಸಲು ನಾನು ಅವರಿಗೆ ₹ 20 ಲಕ್ಷ ನೀಡಿದ್ದೆ. ನಿವೇಶನದ ಮಾಲೀಕರಾದ ಬನ್ನಂತೆಗೌಡರೂ ಆರೋಪಿ ಮೂಲಕವೇ ವ್ಯವಹರಿಸುವಂತೆ ತಿಳಿಸಿದ್ದರು. ಆದರೆ ನಿವೇಶನ ನೋಂದಣಿ ಮಾಡಿಕೊಟ್ಟಿಲ್ಲ. ಹಣವನ್ನೂ ನೀಡಿಲ್ಲ’ ಎಂದು ಧನಂಜಯ್ ದೂರಿನಲ್ಲಿ ಆರೋಪಿಸಿದ್ದಾರೆ.

‘ಮುಡಾ ಬಳಿ ತೆರಳಿದಾಗ ಎದುರಾದ ಆರೋಪಿಯನ್ನು ಹಣ ನೀಡುವಂತೆ ಕೇಳಿದ್ದೆ. ನಂದೀಶ್ ಅವರಿಗೆ ತಿಳಿಸಿರುವುದಾಗಿ ಹೇಳಿ ಅವರು ಕಾರಿನಲ್ಲಿ ತೆರಳಿದ್ದರು. ಸಂಜೆ ರಾಮಕೃಷ್ಣನಗರದ ಉಪನೋಂದಣಾಧಿಕಾರಿ (ದಕ್ಷಿಣ) ಕಚೇರಿ ಬಳಿ ಅವರ ಕಾರನ್ನು ಕಂಡು ಅಲ್ಲಿಗೂ ಹೋದೆ. ನನ್ನನ್ನು ನೋಡಿದ ಅವರು ವೇಗವಾಗಿ ಕಾರು ಚಲಾಯಿಸಿದರು. ಗಾಬರಿಗೊಂಡು ಕಾರಿನ ಬಾನೆಟ್ ಮೇಲೆ ಬಿದ್ದು, ರಕ್ಷಣೆಗಾಗಿ ಕಾರಿನ ವೈಪರ್ ಹಿಡಿದುಕೊಂಡೆ. ಆರೋಪಿ ಕಾರನ್ನು ನಿಲ್ಲಿಸದೇ, ಸುಮಾರು ಒಂದು ಕಿ.ಮೀ.ವರೆಗೆ ವೇಗವಾಗಿ ಚಲಾಯಿಸಿಕೊಂಡು ಬಂದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜಿಲ್ಲಾ ನ್ಯಾಯಾಲಯ ಗಂಗರಾಜು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-39-1619912813

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.