ಮೈಸೂರು: ‘ಕಾರು ಖರೀದಿ ವ್ಯವಹಾರದಲ್ಲಿ ವಂಚನೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದು, ₹1. 10 ಕೋಟಿ ಮೌಲ್ಯದ 8 ಕಾರನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ‘ಗೌಸಿಯಾ ನಗರದ ನಿವಾಸಿ ರುಮಾನ್ ಷರೀಫ್, ರಾಜೀವ್ ನಗರದ ಮುಜಾಹಿದ್ ಪಾಶಾ, ಲಷ್ಕರ್ ಮೊಹಲ್ಲಾದ ಷಾಹಬುದ್ದೀನ್ ಬಂಧಿತರು’ ಎಂದರು.

‘ನಗರದ ಹೋಟೆಲ್ ಉದ್ಯಮಿ ಸಿ.ಎಸ್. ಅಭಿಷೇಕ್ ಅವರು ಫೇಸ್ಬುಕ್ನಲ್ಲಿ ರುಮಾನ್ ಷರೀಫ್ ಅವರನ್ನು ಸಂಪರ್ಕಿಸಿದ್ದರು. ರುಮಾನ್ ತನ್ನ ಬಳಿಇರುವ ಐಷಾರಾಮಿ ಕಾರನ್ನು ಕಡಿಮೆಬೆಲೆಗೆ ಕೊಡುವುದಾಗಿ ತಿಳಿಸಿ, ಮುಂಗಡವಾಗಿ ₹ 5.50 ಲಕ್ಷ ಪಡೆದು ಎರಡು ಕಾರನ್ನು ಅಭಿಷೇಕ್ಗೆ ನೀಡಿದ್ದರು. ಆದರೆ ಅದರ ದಾಖಲೆ ನೀಡಿರಲಿಲ್ಲ. ಈ ಬಗ್ಗೆ ರಂಗಸಮುದ್ರದ ಬಳಿ ಇಬ್ಬರ ನಡುವೆ ಜಗಳವಾಗಿತ್ತು. ಹೀಗಾಗಿ ಅಭಿಷೇಕ್ ಬನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು’ ಎಂದು ತಿಳಿಸಿದರು.

‘ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಕಾರಿನ ವ್ಯವಹಾರದಲ್ಲಿ ವಂಚಿಸಿರುವುದು ಗೊತ್ತಾಗಿದೆ. ಈ ತಂಡವು ಕಾರಿನ ಆರ್ಸಿ ಮಾಲೀಕರನ್ನು ಸಂಪರ್ಕಿಸಿ, ಕಾರಿಗೆ ಹೆಚ್ಚಿನ ಬೆಲೆ ಕೊಡಿಸುವುದಾಗಿ ಹೇಳಿ ಮುಂಗಡವಾಗಿ ಸ್ವಲ್ಪ ಹಣ ನೀಡಿ ಕಾರು ಖರೀದಿಸುತ್ತಿದ್ದರು. ಅದೇ ರೀತಿ ಉನ್ನತ ಹುದ್ದೆಯಲ್ಲಿರುವವರಿಗೆ ಕಡಿಮೆ ಬೆಲೆಗೆ ಐಷಾರಾಮಿ ಕಾರು ಕೊಡಿಸುವುದಾಗಿ ತಿಳಿಸಿ, ಕಾರು ಮಾರಿ ಮುಂಗಡ ಹಣ ಪಡೆಯುತ್ತಿದ್ದರು. ದಾಖಲೆ ನೀಡದೆ ವಂಚಿಸುತ್ತಿದ್ದರು. ಇಂತಹ ಒಟ್ಟು ಎಂಟು ಕಾರು ಪತ್ತೆಯಾಗಿವೆ. ಅದರ ಮಾಲೀಕರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ’ ಎಂದರು.

‘ಷಾಹಬುದ್ದೀನ್ ಬನ್ನಿಮಂಟಪದ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಗೆ ಬರುತ್ತಿದ್ದ ಕಾರಿನ ಮಾಲೀಕರೊಂದಿಗೆ ಸಂಪರ್ಕ ಸಾಧಿಸುತ್ತಿದ್ದರು. ಕಾರು ಡೀಲರ್ ಆಗಿದ್ದ ಮುಜಾಹಿದ್ ಪಾಷಾ ವ್ಯವಹಾರ ಕುದುರಿಸುತ್ತಿದ್ದರು’ ಎಂದರು.

ಎಎಸ್ಪಿ ಎಲ್.ನಾಗೇಶ್ ನೇತೃತ್ವದಲ್ಲಿ ಡಿಎಸ್ಪಿ ಜಿ.ಎಸ್.ರಘು, ಬನ್ನೂರು ಠಾಣೆಯ ಇನ್ಸ್ಪೆಕ್ಟರ್ ಸತೀಶ್, ಪಿಎಸ್ಐ ಸುದರ್ಶನ್, ಎಎಸ್ಐಗಳಾದ ಸತೀಶ್, ಅಬ್ದುಲ್ ಲತೀಫ್, ಎನ್.ಎ.ಅಶೋಕ, ಭಾಸ್ಕರ್ ಅವರ ತಂಡ ಕಾರ್ಯಾಚರಣೆ ನಡೆಸಿದೆ ಎಂದು ವಿವರಿಸಿದರು.

ಹುಣಸೂರಿನ ಚಿನ್ನದ ಅಂಗಡಿ ದರೋಡೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ‘ಪ್ರಮುಖ ಆರೋಪಿಯ ತಮ್ಮ ಹಾಗೂ ಮ್ಯಾನೇಜರ್ನನ್ನು ಬಂಧಿಸಿ ಮಾಹಿತಿ ಪಡೆಯಲಾಗಿದೆ. ಬಂಧನಕ್ಕಾಗಿ ವಿವಿಧ ತಂಡಗಳನ್ನು ರಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಎಎಸ್ಪಿಗಳಾದ ಎಲ್.ನಾಗೇಶ್, ಸಿ.ಮಲ್ಲಿಕ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-39-363671045

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.