ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಜನಗಣತಿ ಪ್ರಕ್ರಿಯೆ ಗುರುವಾರದಿಂದ ಆರಂಭಗೊಂಡಿದ್ದು, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಶುಕ್ರವಾರ ಪರಿಶೀಲಿಸಿದರು.

ನಗರದ ತೊಣಚಿಕೊಪ್ಪಲು ಪ್ರದೇಶದಲ್ಲಿ ಜನಗಣತಿ ಕಾರ್ಯದ ಮಾಹಿತಿ ಪಡೆದರು.

ಗಣತಿದಾರರು ಮನೆಗಳ ಮ್ಯಾಪಿಂಗ್ ಕೆಲಸ ನಿರ್ವಹಿಸುತ್ತಿದ್ದು, ಆ ಬಗ್ಗೆ ಪರಿಶೀಲಿಸಿದರು.

ಶನಿವಾರದವರೆಗೆ (ಏ.18) ಮನೆಗಳ ಮ್ಯಾಪಿಂಗ್ ಕೆಲಸ ನಡೆಯಲಿದೆ. ಅದರಲ್ಲಿ ಗಣತಿದಾರರು ತೊಡಗಿದ್ದಾರೆ. ನಂತರ ಮನೆ- ಮನೆಗೆ ಗಣತಿದಾರರು ಭೇಟಿ ನೀಡಿ ಮಾಹಿತಿ ಪಡೆಯುತ್ತಾರೆ. ಸಾರ್ವಜನಿಕರು ಗಣತಿದಾರರಿಗೆ ನಿಖರ ಮಾಹಿತಿ ನೀಡಿ ಸಹಕರಿಸಬೇಕು ಎಂದು ಕೋರಿದರು.

ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಉಪ ಆಯುಕ್ತ ಹಾಗೂ ನಗರ ಜನಗಣತಿ ಅಧಿಕಾರಿ ಸೋಮಶೇಖರ್ ಜಿ.ಎಸ್. ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.